Weight Loss: ಈ ರೀತಿ ಅನ್ನ ತಿಂದರೆ ಎಂದಿಗೂ ತೂಕ ಹೆಚ್ಚಾಗಲ್ಲ
ನಮ್ಮಲ್ಲಿ ಬಹುತೇಕ ಮಂದಿ ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆಯಾಗಲು, ತೂಕ ಹೆಚ್ಚಾಗಲು ಅನ್ನವೇ ಕಾರಣ ಎಂದು ತಮ್ಮ ಡಯಟ್ನಿಂದ ಅನ್ನವನ್ನು ದೂರ ಇಡುತ್ತಾರೆ.
ಅನ್ನ ತಿನ್ನುವುದರಿಂದ ತೂಕ ಎಂದಿಗೂ ಹೆಚ್ಚಾಗುವುದಿಲ್ಲ. ಇದಕ್ಕಾಗಿ ನೀವು ಅನ್ನ ತಿನ್ನುವ ಸರಿಯಾದ ವಿಧಾನವನ್ನು ತಿಳಿಸಿದರಬೇಕು.
ಸಣ್ಣ ಅಕ್ಕಿಗೆ ಹೋಲಿಸಿದರೆ ಜಾಸ್ಮಿನ್ ಅಕ್ಕಿ ಅಥವಾ ಬಾಸ್ಮತಿ ಅಕ್ಕಿಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಇರುತ್ತದೆ. ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅಕ್ಕಿಯನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ.
ಕಾಳುಗಳು, ಮೀನಿನಂತಹ ಪ್ರೊಟೀನ್ ಸಮೃದ್ಧ ಆಹಾರಗಳೊಂದಿಗೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ.
ಬರೀ ಬೇಳೆ ಸಾರು, ಇಲ್ಲವೇ, ತರಕಾರಿ ಇಲ್ಲದೆ ಅನ್ನ ತಿನ್ನುವ ಬದಲಿಗೆ ದೇಹಕ್ಕೆ ಫೈಬರ್, ವಿಟಮಿನ್ ಮತ್ತು ಖನಿಜಗಳನ್ನು ಒದಗಿಸುವ ಸೊಪ್ಪು, ತರಕಾರಿಗಳೊಂದಿಗೆ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ.
ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ. ಆದರೆ, ನೀವು ಎಷ್ಟು ಪ್ರಮಾಣದಲ್ಲಿ ಅನ್ನ ತಿನ್ನುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ಅತಿಯಾಗಿ ಅನ್ನ ಸೇವಿಸುವ ಬದಲಿಗೆ ಹಿತ-ಮಿತವಾಗಿ ಸೇವಿಸಿ.
ಹಗಲಿನಲ್ಲಿ ಅನ್ನ ಸೇವಿಸುವುದರಿಂದ ದೇಹವು ದಿನವಿಡೀ ಶಕ್ತಿಯನ್ನು ಪಡೆಯುತ್ತಲೇ ಇರುತ್ತದೆ. ಜೊತೆಗೆ ಇದರಿಂದಾಗಿ ತೂಕ ಹೆಚ್ಚಾಗುವುದಿಲ್ಲ. ಆದರೆ, ರಾತ್ರಿ ವೇಳೆ ಅನ್ನ ಸೇವಿಸುವುದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.