Weight Loss: ಜಿಮ್‌ಗೆ ಹೋಗದೆ ಈ ರೀತಿ ತೂಕ ಇಳಿಸಿಕೊಳ್ಳಿ
ತೂಕವನ್ನು ಕಳೆದುಕೊಳ್ಳಲು ಮೊದಲನೆಯದಾಗಿ ನೀವು ಸೇವಿಸುವ ಆಹಾರಗಳಲ್ಲಿ ಪೈಕಿ ಜಂಕ್ ಫುಡ್ ಗಳಿಂದ ದೂರವಿರಿ. ಕರಿದ ಪದಾರ್ಥಗಳಿಂದ ನೀವು ದೂರವಿದ್ದಷ್ಟು ಉತ್ತಮ.
ತೂಕ ಇಳಿಕೆಗೆ ನೀವು ಸೇವಿಸುವ ಆಹಾರದ ಪ್ರಮಾಣ ಕಡಿಮೆ ಮಾಡಿ. ಹೌದು, ನೀವು ಒಂದೇ ಬಾರಿಗೆ ಹೆಚ್ಚು ಆಹಾರ ಸೇವಿಸಿದರೆ ತೊಂದರೆಯಾಗುತ್ತದೆ. ಹೀಗಾಗಿ ನಿಮ್ಮ ಆಹಾರವನ್ನು ಅರ್ಧಕ್ಕೆ ಇಳಿಸಿ.
ಸರಿಯಾಗಿ ನೀರು ಕುಡಿಯಲು ಪ್ರಾರಂಭಿಸಿ. ಇದರಿಂದ ತೂಕ ಅತ್ಯಂತ ವೇಗವಾಗಿ ಕಡಿಮೆಯಾಗುತ್ತದೆ. ಇದಕ್ಕಾಗಿ ನೀವು ಪ್ರತಿದಿನ ಬಿಸಿನೀರನ್ನು ಕುಡಿಯಿರಿ. ಇದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು
ನೀವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಫೈಬರ್ ಸೇರಿಸುವ ಮೂಲಕ ನಿಮ್ಮ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸಿ..
ತೂಕ ಇಳಿಸಲು ನೀವು ಪ್ರತಿದಿನ ಹೆಚ್ಚು ನಡೆಯಲು ಪ್ರಯತ್ನಿಸಿ. ಇದಕ್ಕಾಗಿ ನೀವು ಮೆಟ್ಟಿಲುಗಳನ್ನು ಸಹ ಬಳಸಬಹುದು. ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದನ್ನು ಆದಷ್ಟು ತಪ್ಪಿಸಿ.