Weight Loss Remedies: ಈ ಐದು ಅಭ್ಯಾಸಗಳ ಮೂಲಕ ಸೊಂಟ ಮತ್ತು ಹೊಟ್ಟೆ ಭಾಗದಲ್ಲಿ ಜೋತುಬಿದ್ದ ಬೊಜ್ಜನ್ನು ಕೆಲವೇ ದಿನಗಳಲ್ಲಿ ಕಡಿಮೆ ಮಾಡಿಕೊಳ್ಳ ಬಹುದು!

Sun, 10 Mar 2024-7:14 pm,

1. ಪೌಷ್ಟಿಕ ಆಹಾರ ಸೇವಿಸಿ- ಆಹಾರ ಸೇವನೆ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದ್ದರೂ ಕೂಡ ನಾವು ಏನನ್ನು ತಿನ್ನುತ್ತಿದ್ದೇವೆ ಎಂಬುದು ತುಂಬಾ ಮಹತ್ವದ್ದಾಗಿದೆ. ತೂಕ ನಿಯಂತ್ರಣದಲ್ಲಿಡಲು () ದೈನಂದಿನ ಆಹಾರದಲ್ಲಿ ಧಾನ್ಯಗಳು, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ನೇರ ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು.   

2. ಅತಿಯಾಗಿ ತಿನ್ನುವುದನ್ನು ತಪ್ಪಿಸಿ- ಕೆಲವರಿಗೆ ಊಟ-ಕುಡಿತದ ಮೇಲೆ ಹಿಡಿತವೆ ಇರುವುದಿಲ್ಲ, ಏನಾದರೂ ಕಂಡ ತಕ್ಷಣ ತಿನ್ನಲು ಶುರು ಮಾಡುತ್ತಾರೆ. ಮದುವೆ, ಪಾರ್ಟಿಗಳಲ್ಲಿ ಅತಿಯಾಗಿ ತಿನ್ನಲು ಶುರುಮಾಡುತ್ತಾರೆ. ಆರೋಗ್ಯಕರ ಆಹಾರವನ್ನು ಸೇವಿಸುವುದರೆ ಜೊತೆಗೆ ನಾವು ಜಾಗ್ರತೆಯಿಂದ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಅನಗತ್ಯವಾಗಿ ಕೊಬ್ಬು ಸಂಗ್ರಹವಾಗುತ್ತದೆ.  

3. ದೈಹಿಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಿ- ತೂಕ ಇಳಿಕೆ ಅಥವಾ ಕೊಬ್ಬು ನಿಯಂತ್ರಣಕ್ಕೆ ನಾವು ಕೇವಲ ಆರೋಗ್ಯಕರ ಆಹಾರ ಸೇವಿಸುವುದು ಸಾಕಾಗುವುದಿಲ್ಲ. ಅದರ ಜೊತೆಗೆ ನಾವು ಎಷ್ಟು ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ ಎಂಬುದು ಕೂಡ ಮಹತ್ವದ್ದಾಗಿದೆ. ನೀವು ವಾರಕ್ಕೆ 150 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ವ್ಯಾಯಾಮ ಮಾಡಿದರೆ, ನಿಮ್ಮ ತೂಕವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜಿಮ್‌ಗೆ ಹೋಗಲು ನಿಮಗೆ ಸಾಧ್ಯವಾಗದಿದ್ದರೆ, ವಾಕ್ ಮಾಡಿ, ಸೈಕಲ್ ಓಡಿಸಿ ಅಥವಾ ಮೆಟ್ಟಿಲುಗಳನ್ನು ಹತ್ತಿರಿ.  

4. ನೆಮ್ಮದಿಯಿಂದ ನಿದ್ದೆ ಮಾಡಿ- ಸಾಮಾನ್ಯವಾಗಿ, ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಲು ಸಲಹೆ ನೀಡಲಾಗುತ್ತದೆ, ನೀವು ಕಡಿಮೆ ಪ್ರಮಾಣದಲ್ಲಿ ನಿದ್ರೆ ಮಾಡಿದರೆ ಅದು ನಿಮ್ಮ ದೇಹದ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅದು ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.   

5. ಸಾಕಷ್ಟು ನೀರು ಕುಡಿಯಿರಿ: ಸರಿಯಾದ ಆಹಾರದ ಜೊತೆಗೆ, ನಿಮ್ಮ ದೇಹವು ಸಾಕಷ್ಟು ಪ್ರಮಾಣದಲ್ಲಿ ನೀರು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ದಿನಕ್ಕೆ 7 ರಿಂದ 8 ಗ್ಲಾಸ್ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ, ಇದು ಕ್ಯಾಲೊರಿಗಳನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ.   

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link