Weight Loss: ತೂಕ ಹೆಚ್ಚಳಕ್ಕೆ ಕಾರಣವಾಗುವ ಈ 5 ಅಭ್ಯಾಸಗಳಿಗೆ ಇಂದಿನಿಂದಲೇ ಗುಡ್ ಬೈ ಹೇಳಿ
ಭಾರತೀಯ ಖಾದ್ಯಗಳಲ್ಲಿ ಕರಿದ ಎಣ್ಣೆಯುಕ್ತ ಆಹಾರ ಪದಾರ್ಥಗಳು ಹೆಚ್ಚಾಗಿ ಕಂಡು ಬರುತ್ತವೆ. ತಿನ್ನಲು ರುಚಿಕರವಾದ ಈ ಆಹಾರಗಳು ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ನೀವು ತೂಕ ಇಳಿಕೆ ಪ್ರಕ್ರಿಯೆಯಲ್ಲಿದ್ದರೆ ನಿಮ್ಮ ಆಹಾರದಿಂದ ಇಂತಹ ಆಹಾರಗಳನ್ನು ದೂರವಿಡಿ.
ನಮ್ಮಲ್ಲಿ ಕೆಲವರು ತೂಕ ಕಡಿಮೆ ಮಾಡಲು ಬ್ರೇಕ್ ಫಾಸ್ಟ್, ಲಂಚ್ ಅಥವಾ ಡಿನ್ನರ್ ಯಾವುದಾದರೂ ಒಂದು ಸಮಯದಲ್ಲಿ ಊಟವನ್ನು ಬ ಬಿಡುತ್ತಾರೆ. ಆದರೆ, ತೂಕ ಇಳಿಸಲು ಇದು ಪರಿಹಾರವಲ್ಲ. ನಿಮ್ಮ ಈ ಅಭ್ಯಾಸದಿಂದ ತೂಕ ಕಡಿಮೆ ಆಗುವ ಬದಲು ಹೆಚ್ಚಾಗಲೂಬಹುದು.
ಕೆಲವರಿಗೆ ಸಿಹಿ ಎಂದರೆ ಪಂಚಪ್ರಾಣ. ಅತಿಯಾದ ಸಿಹಿ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ತೂಕ ಇಳಿಕೆಯಲ್ಲಿ ಸಿಹಿಯನ್ನು ಸಂಪೂರ್ಣವಾಗಿ ಬಿಡುವ ತಪ್ಪನ್ನು ಮಾಡಬೇಡಿ.
ನಿತ್ಯ 8 ರಿಂದ 10 ಗಂಟೆಗಳ ಕಾಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರು ಯಾವುದೇ ರೀತಿಯ ದೈಹಿಕ ಚಟುವಟಿಕೆಗಳನ್ನು ಮಾಡದಿದ್ದರೆ ಅದೂ ಕೂಡ ಹೊಟ್ಟೆ ಸುತ್ತಲಿನ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ. ಇದನ್ನು ತಪ್ಪಿಸಲು ನಿತ್ಯ ಬೆಳಿಗ್ಗೆ ಅಥವಾ ಸಂಜೆ ನಿಮಗೆ ಅನುಕೂಲವಾದ ಸಮಯದಲ್ಲಿ ವಾಕ್, ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಕೆಲಸದ ಒತ್ತಡ ಮತ್ತು ಪಾಳಿಯಲ್ಲಿ ಕೆಲಸ ಮಾಡುವವರಿಗೆ ನಿತ್ಯ ಕನಿಷ್ಠ ನಿದ್ದೆಯೂ ಆಗುವುದಿಲ್ಲ. ಆದರೆ, ಪ್ರತಿ ದಿನ 7 ರಿಂದ 8ಗಂಟೆಗಳವರೆಗೆ ನಿದ್ರೆ ಪಡೆಯದವರಲ್ಲೂ ಕೂಡ ತೂಕ ಹೆಚ್ಚಳ ಒಂದು ಸಾಮಾನ್ಯ ಸಮಸ್ಯೆ ಆಗಿದೆ. ಇದನ್ನು ತಪ್ಪಿಸಲು ದಿನವೂ ಕನಿಷ್ಠ 7 ರಿಂದ 8ಗಂಟೆಗಳವರೆಗೆ ನಿದ್ರಿಸುವ ಅಭ್ಯಾಸ ರೂಢಿಸಿಕೊಳ್ಳಿ.
ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.