ಆರೋಗ್ಯಕರ ರೀತಿಯಲ್ಲಿ ಬಹುಬೇಗನೇ ತೂಕವನ್ನು ಕಳೆದುಕೊಳ್ಳಲು ಈ ಹಣ್ಣುಗಳನ್ನು ತಿನ್ನಿ..!
ಈ ಆಧುನಿಕ ಜಗತ್ತಿನಲ್ಲಿ ಒತ್ತಡ, ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದ ತೂಕ ಮತ್ತು ಹೊಟ್ಟೆಯ ಕೊಬ್ಬು ವೇಗವಾಗಿ ಹೆಚ್ಚುತ್ತಿದೆ. ಕೊಬ್ಬನ್ನು ಕರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.. ಆದರೆ ಉತ್ತಮ ಆಹಾರ ಪದ್ದತಿ ಈ ಸಮಸ್ಯೆಯಿಂದ ಪಾರಾಗಲು ನಿಮಗೆ ಸಹಾಯ ಮಾಡುತ್ತದೆ..
ಬೊಜ್ಜು ಮತ್ತು ಹೊಟ್ಟೆಯ ಕೊಬ್ಬಿನಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸರಿಯಾದ ಆಹಾರ, ಆರೋಗ್ಯಕರ ಅಭ್ಯಾಸ ಮತ್ತು ವ್ಯಾಯಾಮ ಎಲ್ಲವೂ ಬಹಳ ಮುಖ್ಯ. ಕೊಬ್ಬು, ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ತ್ಯಜಿಸುವುದು ಉತ್ತಮ.
ನಿಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರವನ್ನು ಸೇರಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ಮಾರ್ಗಗಳಿವೆ. ಇವುಗಳಲ್ಲಿ ಕೆಲವು ಹಣ್ಣುಗಳು ನಮಗೆ ತುಂಬಾ ಸಹಾಯ ಮಾಡುತ್ತವೆ.
ಸೇಬು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣು. ಇದು ಫೈಬರ್ ಮತ್ತು ನೀರಿನಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣನ್ನು ತಿನ್ನುವ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು..
ದ್ರಾಕ್ಷಿಯು ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ. ಕೆಂಪು ಮತ್ತು ಕಪ್ಪು ದ್ರಾಕ್ಷಿಗಳು ಎಲಾಜಿಕ್ ಆಮ್ಲವನ್ನು ಹೊಂದಿರುತ್ತವೆ. ದ್ರಾಕ್ಷಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳಾದ ರೆಸ್ವೆರಾಟ್ರೊಲ್ ಮತ್ತು ಆಂಥೋಸಯಾನಿನ್ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಪ್ರತಿದಿನ ದ್ರಾಕ್ಷಿಯನ್ನು ತಿನ್ನಬಹುದು.
ಕಲ್ಲಂಗಡಿ ಹಣ್ಣು ಅತೀ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಹೆಚ್ಚಿನ ನೀರಿನಾಂಶ ಹೊಂದಿದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಹೆಚ್ಚಿನ ನೀರಿನ ಅಂಶದಿಂದಾಗಿ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.. ಪ್ರತಿದಿನ ಮಿತ ಪ್ರಮಾಣದಲ್ಲಿ ತಿನ್ನಿ..
ಅನಾನಸ್ ಹಣ್ಣು ಬ್ರೋಮೆಲಿನ್ ಅನ್ನು ಹೊಂದಿದ್ದು, ಇದು ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರ ಗುಣಲಕ್ಷಣಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಫೈಬರ್ ಮತ್ತು ನೀರಿನ ಅಂಶವು ತೂಕ ನಷ್ಟ ಸಹಾಯ ಮಾಡುತ್ತದೆ.
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಫೈಬರ್ ಅಧಿಕವಾಗಿದೆ. ಇವು ಜೀರ್ಣಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಿವಿ ಹಣ್ಣು ತೂಕ ಇಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ... ದಿನವೂ ಇದನ್ನು ಸೇವಿಸುವುದನ್ನು ಮರೆಯಬೇಡಿ..
(ನಿರಾಕರಣೆ: ಈ ಸಂದೇಶವನ್ನು ನಿಮಗೆ ಸಾಕಷ್ಟು ಮಾಹಿತಿಯನ್ನು ನೀಡಲು ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)