Weight Loss Diet: ಈ ಸೂಪರ್‌ಫುಡ್‌ಗಳು ನಿಮ್ಮ ಆಹಾರದಲ್ಲಿದ್ದರೆ ಬೆಣ್ಣೆಯಂತೆ ಕರಗುತ್ತೆ ಸೊಂಟದ ಕೊಬ್ಬು!
ಕಳಪೆ ಆಹಾರ ಪದ್ದತಿ, ಬದಲಾದ ಜೀವನ ಶೈಲಿಯಿಂದಾಗಿ ತೂಕ ಹೆಚ್ಚಳ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಮಸ್ಯೆ ಆಗಿದೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಸಿಕೊಳ್ಳುವುದು, ಅದರಲ್ಲೂ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ ಎಂದು ಕೆಲವರು ಬೇಸರ ಪಟ್ಟಿಕೊಳ್ಳುತ್ತಾರೆ. ಆರೋಗ್ಯ ತಜ್ಞರ ಪ್ರಕಾರ, ನಿಮ್ಮ ಡಯಟ್ನಲ್ಲಿ ಕೆಲವು ಸೂಪರ್‌ಫುಡ್‌ಗಳನ್ನು ಸೇರಿಸುವುದರಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ, ಸೊಂಟದ ಸುತ್ತಲಿನ ಕೊಬ್ಬನ್ನು ಸಹ ಕರಗಿಸಬಹುದು. ಅಂತಹ ಆಹಾರಗಳು ಯಾವುವೆಂದರೆ...
ಹೇರಳವಾದ ನಾರಿನಾಂಶ ಹೊಂದಿರುವ ಚಿಯಾ ಸೀಡ್ಸ್ ತೂಕ ಕಡಿಮೆ ಮಾಡಿಕೊಳ್ಳಲು ತುಂಬಾ ಪ್ರಯೋಜನಕಾರಿ. ಚಿಯಾ ಬೀಜಗಳು ಹೆಚ್ಚಿನ ಪ್ರಮಾಣದ ಪ್ರೋಟೀನ್ ಹೊಂದಿದ್ದು, ಇದು ಕ್ಯೂಲೋರಿಗಳನ್ನು ಕಡಿಮೆ ಮಾಡಲು ತೂಕ ಕಳೆದುಕೊಳ್ಳಲು ಸಹಕಾರಿ ಆಗಿದೆ.
ಮೊಟ್ಟೆ ಒಂದು ಸೂಪರ್‌ಫುಡ್ ಎಂದು ನಿಮಗೆ ತಿಳಿದೇ ಇದೆ. ಇದರಲ್ಲಿ ಹೇರಳವಾದ ಪೋಷಕಾಂಶಗಳನ್ನು ಹೊಂದಿದೆ. ಮಾತ್ರವಲ್ಲ, ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಅವುಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನುವುದರಿಂದ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯಕರ ಕೊಬ್ಬುಗಳು, ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ವಾಲ್‌ನಟ್ಸ್ ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ರಂಜಕ, ತಾಮ್ರ, ಸೆಲೆನಿಯಮ್, ಒಮೆಗಾ -3 ಕೊಬ್ಬಿನಾಮ್ಲಗಳಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಮೆದುಳಿನ ಆರೋಗ್ಯವನ್ನು ಉತ್ತೇಜಿಸುವುದರ ಜೊತೆಗೆ, ಕ್ಯಾಲೊರಿಗಳನ್ನು ಹೆಚ್ಚಿಸದೆ ಶಕ್ತಿಯನ್ನು ಪಡೆಯುವ ಪರಿಪೂರ್ಣ ಮೂಲವಾಗಿದೆ. ಖಾಲಿ ಹೊಟ್ಟೆಯಲ್ಲಿ ವಾಲ್‌ನಟ್ಸ್ ತಿನ್ನುವುದರಿಂದ ಇದು ತೂಕ ಇಳಿಕೆಗೆ ಸಹಕಾರಿ ಆಗಿದೆ.
ತೂಕ ಇಳಿಸಲು ಪ್ರಯತ್ನಿಸುತ್ತಿರುವವರು ತಮ್ಮ ಡಯಟ್ನಲ್ಲಿ ಮೀನನ್ನು ಸೇವಿಸಬೇಕು. ಮೀನಿನಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್ ಇದ್ದು, ಇದನ್ನು ತಿನ್ನುವುದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಮೀನಿನ ಸೇವನೆಯು ಸೊಂಟವನ್ನು ಸ್ಲಿಮ್ ಮಾಡಲು ಸಹಾಯ ಮಾಡುತ್ತದೆ.
ಮೊಸರು ಬಹುತೇಕ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಜೀರ್ಣಕ್ರಿಯೆಯನ್ನು ಬಳಪಡಿಸಲು ಪ್ರಯೋಜನಕಾರಿ ಆಗಿದ್ದು ತೂಕ ಇಳಿಕೆಯನ್ನು ಕೂಡ ಉತ್ತೇಜಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.