Mobile: ಇದು ಕಾರಿನ ಕೀ ಅಲ್ಲ, ಫೋನ್! 2,000ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ವಿಚಿತ್ರ ಫೋನ್‌ಗಳಿವು
ಇದು ಕಾರಿನ ಕೀ ಅಲ್ಲ, ಫೋನ್! ಮೊದಲನೆಯದಾಗಿ ನಾವು ಕ್ವಿಕ್ ಶೆಲ್ ಫ್ಲಿಪ್ ಮೊಬೈಲ್ ಫೋನ್ ಬಗ್ಗೆ ಹೇಳುತ್ತಿದ್ದೇವೆ. ಅದು ನೋಡಲು ಕಾರ್ ಕೀಲಿಯಂತೆ ಕಾಣುತ್ತದೆ. 1.55-ಇಂಚಿನ LCD ಡಿಸ್ಪ್ಲೇ ಜೊತೆಗೆ ಬರುವ ಈ ಫೋನ್ ರಷ್ಯನ್, ಇಂಗ್ಲಿಷ್ ಮತ್ತು ಅರೇಬಿಕ್ ನಂತಹ 22 ಭಾಷೆಗಳನ್ನು ಬೆಂಬಲಿಸುತ್ತದೆ ಮತ್ತು ಬ್ಲೂಟೂತ್ ಬೆಂಬಲದೊಂದಿಗೆ ಬರುತ್ತದೆ. ನೀವು ಇದನ್ನು ಅಮೆಜಾನ್‌ನಿಂದ 1,525 ರೂ.ಗೆ ಖರೀದಿಸಬಹುದು.
ಅಂಗೈಯಲ್ಲಿ ಹೊಂದಿಕೊಳ್ಳುತ್ತದೆ, ಈ ಮೊಬೈಲ್: ಅಂಗೈಯಲ್ಲಿ ಹೊಂದಿಕೊಳ್ಳುವ ಈ ಫೋನ್ Galaxy Star Mini ಆಗಿದ್ದು, ಇದು 4G ಸೇವೆಗಳೊಂದಿಗೆ ಡ್ಯುಯಲ್ ಸಿಮ್ ಮೊಬೈಲ್ ಆಗಿದೆ. ಒಂದೇ ಬಾರಿ ಚಾರ್ಜ್ ಮಾಡಿದ ಬಳಿಕ ಇದನ್ನು ಮೂರ್ನಾಲ್ಕು ದಿನ ಬಳಸಬಹುದು. ಈ ಮೊಬೈಲ್ ನಿಮ್ಮ ಅಂಗೈಯಲ್ಲಿ ಹಿಡಿಸುವಷ್ಟು ಚಿಕ್ಕದಾಗಿದೆ. 500 ಕಾಂಟ್ಯಾಕ್ಟ್‌ಗಳು ಮತ್ತು 100 ಎಸ್‌ಎಂಎಸ್‌ಗಳನ್ನು ಸಂಗ್ರಹಿಸುವ ಈ ಫೋನ್ ಅನ್ನು ಅಮೆಜಾನ್‌ನಲ್ಲಿ ರೂ. 2,299 ಗೆ ಮಾರಾಟ ಮಾಡಲಾಗುತ್ತಿದೆ.
ಪೆನ್ ಆಕಾರದಲ್ಲಿರುವ ಫೋನ್ : ಈ ಫೋನ್ ನಿಖರವಾಗಿ ಪೆನ್ನಂತೆ ಕಾಣುತ್ತದೆ. ಇದು Ikall K80 0.96-ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ ಮತ್ತು ಮೈಕ್ರೊ SD ಕಾರ್ಡ್ ಸಹಾಯದಿಂದ 8GB ವರೆಗೆ ಸಂಗ್ರಹಣೆಯನ್ನು ನೀಡುತ್ತದೆ. ಫ್ಲ್ಯಾಶ್‌ಲೈಟ್ ಮತ್ತು ಹಿಂಬದಿಯ ಕ್ಯಾಮೆರಾ ಹೊಂದಿರುವ ಈ ಫೋನ್ ಅಮೆಜಾನ್‌ನಲ್ಲಿ 1,699 ರೂ.ಗೆ ಮಾರಾಟವಾಗುತ್ತಿದೆ.
ಇದು 'ಫಿಂಗರ್ ಫೋನ್': Kechaoda K10 ಫೋನ್ ಅತ್ಯಂತ ಚಿಕ್ಕ ಗಾತ್ರದ ಫೋನ್ ಆಗಿದೆ. ಇದೇ ಕಾರಣಕ್ಕೆ ಇದನ್ನು 'ಫಿಂಗರ್ ಫೋನ್' ಎಂದು ಕರೆಯಲಾಗುತ್ತದೆ. ಸಿಂಗಲ್ ಸಿಮ್ ಬೆಂಬಲವನ್ನು ಹೊಂದಿರುವ ಈ ಫೋನ್ 0.66-ಇಂಚಿನ ಡಿಸ್ಪ್ಲೇ ಮತ್ತು 300mAh ಬ್ಯಾಟರಿಯನ್ನು ಹೊಂದಿದೆ. Amazon ನಲ್ಲಿ ಇದರ ಬೆಲೆ 1,099 ರೂ. ಆಗಿದೆ.
ಈ ಮೊಬೈಲ್ 'ಟಾಯ್ ಕಾರ್'ನಂತೆ ಕಾಣುತ್ತದೆ: ಈ 75 ಗ್ರಾಂ ಸ್ನೆಕ್ಸಿಯನ್ ರಾಕ್ ಮೊಬೈಲ್ ಫೋನ್ ಡ್ಯುಯಲ್ ಸಿಮ್ ಬೆಂಬಲ, ಸಿಂಗಲ್ ಕ್ಯಾಮೆರಾ ಮತ್ತು MP3 ಪ್ಲೇಯರ್‌ನೊಂದಿಗೆ ಬರುತ್ತದೆ. ಆಟಿಕೆ ಕಾರಿನಂತೆ ಕಾಣುವ ಈ ಫೋನ್ ಅನ್ನು Amazon ನಿಂದ 1,395 ರೂ.ಗೆ ಖರೀದಿಸಬಹುದು.