ಈ 4 ತಂಡಗಳೇ ಈ ಬಾರಿ ಪ್ಲೇಆಫ್ ತಲುಪೋದು: ಕ್ರಿಸ್ ಗೇಲ್ ಭವಿಷ್ಯ
![ಕ್ರಿಸ್ ಗೇಲ್ Chris Ggayle](https://kannada.cdn.zeenews.com/kannada/sites/default/files/2024/03/23/391331-chris-gayle-5.jpg?im=FitAndFill=(500,286))
ಕ್ರಿಸ್ ಗೇಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕುರಿತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕ್ರಿಸ್ ಗೇಲ್ ಪ್ರಕಾರ, ಈ ಸಲ ಆರ್‌ಸಿಬಿ ತಂಡ ಪ್ಲೇಆಫ್ ಆಡುವುದು ಖಚಿತ ಎಂದು ಗೇಲ್ ಹೇಳಿದ್ದಾರೆ.
![ಕ್ರಿಸ್ ಗೇಲ್ Chris Ggayle](https://kannada.cdn.zeenews.com/kannada/sites/default/files/2024/03/23/391330-chris-gayle-4.jpg?im=FitAndFill=(500,286))
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿದ್ದಾರೆ. ಈ ಕಾರಣದಿಂದ ಲೀಗ್ ಹಂತದ ಪಂದ್ಯಗಳ ಮುಕ್ತಾಯದ ವೇಳೆಗೆ ಆರ್‌ಸಿಬಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬಹುದು. ಪ್ಲೇಆಫ್ ಹಂತಕ್ಕೆ ತಲುಪಬಹುದು ಎಂದು ಗೇಲ್ ಹೇಳಿದ್ದಾರೆ.
![ಕ್ರಿಸ್ ಗೇಲ್ Chris Ggayle](https://kannada.cdn.zeenews.com/kannada/sites/default/files/2024/03/23/391329-chris-gayle-3.jpg?im=FitAndFill=(500,286))
ಈ ಬಾರಿ ಮುಂಬೈ ಇಂಡಿಯನ್ಸ್ ಕೂಡ ಪ್ಲೇಆಫ್ ಹಂತಕ್ಕೆ ಬರಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಪಡೆ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.
RCB, MI ಜೊತೆಗೆ ಸಂಜು ಸ್ಯಾಮ್ಸನ್ ಅವರ ರಾಜಸ್ಥಾನ್ ರಾಯಲ್ಸ್ ಸಹ ಪ್ಲೇಆಫ್ ಗೆ ಎಂಟ್ರಿ ಕೊಡಲಿದೆ ಎಂದು ಗೇಲ್ ಊಹಿಸಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡ ಪ್ಲೇಆಫ್ ಹಂತಕ್ಕೇರಬಹುದು ಎಂದು ಕ್ರಿಸ್ ಗೇಲ್ ತಿಳಿಸಿದ್ದಾರೆ.