ಮಹಿಳೆಯರೇ ಅತಿಯಾಗಿ ಬೆವರುತ್ತೀರಾ..? ಎಚ್ಚರಿಕೆ..! ಹೃದಯಾಘಾತದ ಸಂಕೇತವಾಗಿರಬಹುದು 

Fri, 16 Aug 2024-2:47 pm,

ಹೃದಯಾಘಾತವು ಪುರುಷರಿಗೆ ಮಾತ್ರ ಸಂಭವಿಸುತ್ತದೆ ಎಂದು ಜನರು ಭಾವಿಸುತ್ತಾರೆ. ಆದರೆ ಇತ್ತೀಚಿಗೆ ಮಹಿಳೆಯರೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ.. ಕಳೆದ ಕೆಲವು ವರ್ಷಗಳಿಂದ ಮಹಿಳೆಯರಲ್ಲಿ ಈ ಅಪಾಯ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ.  

ಪುರುಷರಿಗಿಂತ ಮಹಿಳೆಯರಿಗೆ ಹೃದಯಾಘಾತದ ಅಪಾಯ ಹೆಚ್ಚು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಮಹಿಳೆಯಲ್ಲಿ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಅವರಲ್ಲಿ ಹೃದಯಾಘಾತದ ಆರಂಭಿಕ ಲಕ್ಷಣಗಳನ್ನು ಪತ್ತೆ ಮಾಡುವುದು ಕಷ್ಟ. ಆದರೆ ಕೆಲವು ಗುಣಲಕ್ಷಣಗಳಿಂದ ಪತ್ತೆ ಹಚ್ಚಬಹುದು ಎನ್ನುತ್ತಾರೆ ಹೃದ್ರೋಗ ತಜ್ಞರು.   

ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವ ಪಿರಿಯಡ್ಸ್‌ ಹಾರ್ಮೋನ್ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದ ಮಹಿಳೆಯರು ಹೃದಯಾಘಾತಕ್ಕೆ ಒಳಗಾಗುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳು ಸಹ ಹೃದ್ರೋಗಕ್ಕೆ ಕಾರಣವಾಗಬಹುದು.   

ಕೆಟ್ಟ ಜೀವನಶೈಲಿ, ಧೂಮಪಾನ, ಅನಾರೋಗ್ಯಕರ ಆಹಾರ ಮತ್ತು ವ್ಯಾಯಾಮದ ಕೊರತೆಯೂ ಹೃದಯಾಘಾತಕ್ಕೆ ಕಾರಣ. ಇಷ್ಟೇ ಅಲ್ಲ, ಒತ್ತಡವು ಆಟೋಇಮ್ಯೂನ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಪುರುಷರಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಈ ರೋಗಲಕ್ಷಣಗಳ ಆರಂಭಿಕ ಪತ್ತೆ ಅಷ್ಟು ಸುಲಭವಲ್ಲ. ಮಹಿಳೆಯರಲ್ಲಿ ಹೃದಯಾಘಾತದ ಎಂಟು ಸಾಮಾನ್ಯ ಲಕ್ಷಣಗಳಿವೆ. ಅವು ಯಾವುವು ನೋಡೋಣ ಬನ್ನಿ.   

ಎದೆ ನೋವು ಅಥವಾ ಅಸ್ವಸ್ಥತೆ : ಒತ್ತಡದ ಭಾವನೆ, ಆಯಾಸ, ಸಾಮಾನ್ಯವಾಗಿ ಎಡಭಾಗದಲ್ಲಿ ಅಥವಾ ಎದೆಯ ಮಧ್ಯದಲ್ಲಿ ನೋವು. ಇವುಗಳು ಹೆಚ್ಚು ನೋವು ನೀಡದಿದ್ದರೂ ಸಹ ಸಣ್ಣದಾಗಿ ಕಾಣಿಸಿಕೊಂಡರೂ ವೈದ್ಯರನ್ನು ಸಂಪರ್ಕಿಸುವುದು ಉತ್ತಮ..  

ಇತರ ಪ್ರದೇಶಗಳಲ್ಲಿ ನೋವು: ಹೃದಯಾಘಾತ ನೋವು ನಿಧಾನವಾಗಿ ಬೆನ್ನು, ಕುತ್ತಿಗೆ, ದವಡೆ ಅಥವಾ ತೋಳುಗಳಿಗೆ ಹರಡುತ್ತದೆ. ಮೊದಲು ಈ ನೋವು ಎದೆಗೆ ಸಂಬಂಧಿಸಿಲ್ಲ ಎಂದು ತೋರುತ್ತದೆ. ಆದರೆ ಇದನ್ನು ಹೃದಯಾಘಾತಕ್ಕೆ ಸಂಬಂಧಿಸಿದ ಲಕ್ಷಣ ಎಂದು ಪರಿಗಣಿಸಬೇಕು ಎನ್ನುತ್ತಾರೆ ವೈದ್ಯರು.   

ಉಸಿರಾಟದ ತೊಂದರೆ: ಎದೆನೋವು ಇದ್ದರೆ ಅನೇಕ ಮಹಿಳೆಯರು ಉಸಿರಾಟದ ತೊಂದರೆ ಅನುಭವಿಸುತ್ತಾರೆ. ಈ ರೋಗಲಕ್ಷಣವು ಇದ್ದಕ್ಕಿದ್ದಂತೆ ಅಥವಾ ಏನಾದರೂ ಕೆಲಸ ಮಾಡುವಾಗ ಸಂಭವಿಸುತ್ತದೆ. ನೀವು ಎದೆಯಲ್ಲಿ ಬಿಗಿತದ ಅನುಭವ ಹೊಂದಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.   

ವಾಕರಿಕೆ ಅಥವಾ ವಾಂತಿ: ವಾಕರಿಕೆ ಅಥವಾ ವಾಂತಿ ಸೇರಿದಂತೆ ಜಠರಗರುಳಿನ ಸಮಸ್ಯೆಗಳು ಸಹ ಹೃದಯಾಘಾತದ ಲಕ್ಷಣಗಳಾಗಿವೆ. ಈ ರೋಗಲಕ್ಷಣಗಳನ್ನು ಕೆಲವೊಮ್ಮೆ ಇತರ ಜೀರ್ಣಕಾರಿ ಸಮಸ್ಯೆಗಳಿಗೆ ತಪ್ಪಾಗಿ ಗ್ರಹಿಸಲಾಗುತ್ತದೆ ಮತ್ತು ನಿರ್ಲಕ್ಷಿಸಲಾಗುತ್ತದೆ.   

ತಲೆತಿರುಗುವಿಕೆ: ಮೂರ್ಛೆ ಅಥವಾ ತಲೆತಿರುಗುವಿಕೆಯ ಭಾವನೆಯು ಹೃದಯಾಘಾತವನ್ನು ಸೂಚಿಸುತ್ತದೆ. ಕಡಿಮೆ ರಕ್ತದ ಹರಿವಿನಿಂದಾಗಿ ತಲೆತಿರುಗುವಿಕೆ ಸಹ ಸಂಭವಿಸಬಹುದು..  

ಅಜೀರ್ಣ ಅಥವಾ ಎದೆಯುರಿ: ಅಜೀರ್ಣ ಅಥವಾ ಎದೆಯುರಿ ಕೆಲವೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಹುದು. ಈ ರೋಗಲಕ್ಷಣಗಳು ನಿಮ್ಮನ್ನ ಗೊಂದಲಕ್ಕಿಡುಮಾಡಬಹುದು.. ಯಾವುದುಕ್ಕೂ ವೈದ್ಯರನ್ನು ಸಂಪರ್ಕಿಸಿ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link