ಏನಿದು Student Credit Card ಸ್ಕೀಮ್ ? ಏನಿದರ ಲಾಭ? ಯಾರು ಅರ್ಜಿ ಸಲ್ಲಿಸಬಹುದು ತಿಳಿಯಿರಿ
ಈ ಕ್ರೆಡಿಟ್ ಕಾರ್ಡ್‌ಗಳು ಸೀಮಿತ ಕ್ರೆಡಿಟ್‌ನೊಂದಿಗೆ ಬರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಹಣವನ್ನು ಖರ್ಚು ಮಾಡುವುದಿಲ್ಲ ಮತ್ತು ಸಾಲದ ಹೊರೆ ಕೂಡಾ ಅವರ ಮೇಲೆ ಬೀಳುವುದಿಲ್ಲ. ಈ ಕಾರ್ಡ್ ಅಡಿಯಲ್ಲಿ ಕ್ಯಾಶ್ withdrawal ಮೊತ್ತವು ಕಡಿಮೆಯಾಗಿದೆ. ಹಾಗಾಗಿ ಇದರ ಬಳಕೆಯನ್ನು ವಿದ್ಯಾರ್ಥಿಗಳು ಯೋಚನೆ ಮಾಡಿ ಬಳಸುತ್ತಾರೆ. ಈ ಕ್ರೆಡಿಟ್ ಕಾರ್ಡ್‌ನ ಸಿಂಧುತ್ವವು 5 ವರ್ಷಗಳು. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮುಗಿದ ನಂತರ ಈ ಕಾರ್ಡ್ ಅನ್ನು ಸ್ಟ್ಯಾಂಡರ್ಡ್ ಕ್ರೆಡಿಟ್ ಕಾರ್ಡ್ ಆಗಿ ಪರಿವರ್ತಿಸಬಹುದು. ವಿದ್ಯಾರ್ಥಿಗಳು ತಮ್ಮ ಉದ್ಯೋಗ ಮತ್ತು ಆದಾಯಕ್ಕೆ ಅನುಗುಣವಾಗಿ ಅದರ ಮಿತಿಯನ್ನು ಹೆಚ್ಚಿಸಬಹುದು. ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್‌ಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ಕಾಲೇಜು ವಿದ್ಯಾರ್ಥಿಯಾಗಿರುವುದು ಬಹಳ ಮುಖ್ಯ ಮತ್ತು ನಿಮ್ಮ ವಯಸ್ಸು 18 ವರ್ಷಗಳಾಗಿರಬೇಕು.
ನಿಮ್ಮ ಹೆಸರಿನಲ್ಲಿ ಎಫ್‌ಡಿ ಹೊಂದಿದ್ದರೆ, ನೀವು ಅದರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಇದರ ಹೊರತಾಗಿ, ನಿಮ್ಮ ಪೋಷಕರು ಅಸ್ತಿತ್ವದಲ್ಲಿರುವ ಕ್ರೆಡಿಟ್ ಕಾರ್ಡ್‌ಗೆ ಆಡ್-ಆನ್ ಆಯ್ಕೆಯನ್ನು ತೆಗೆದುಕೊಳ್ಳುವ ಮೂಲಕ ನಿಮಗಾಗಿ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು.
ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾದರೆ ಈ ದಾಖಲೆಗಳ ಅಗತ್ಯವಿದೆ. ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು, ಜನನ ಪ್ರಮಾಣಪತ್ರ, ಕಾಲೇಜು ಅಥವಾ ವಿಶ್ವವಿದ್ಯಾಲಯದ ಐಡಿ, ಪ್ಯಾನ್ ಕಾರ್ಡ್, ಅಡ್ರೆಸ್ಸ್ ಪೂಫ್ ತ್ತು ಪಾಸ್‌ಪೋರ್ಟ್ ಸೈಜ್ ಇರಬೇಕಾಗುತ್ತದೆ.