ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಾಕು: ಗಂಟುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಸಿಡ್ ದಿಢೀರ್ ಕರಗಿ ಹೋರಬರುತ್ತೆ! ಕಿಡ್ನಿ ಸ್ಟೋನ್ ಪುಡಿಯಾಗಲು ಸಹ ಇದು ರಾಮಬಾಣ!
ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾದಾಗ ಗೌಟ್ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದಾಗಿ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಯೂರಿಕ್ ಆಮ್ಲವು ಕೀಲುಗಳ ಸುತ್ತಲೂ ಸಣ್ಣ ಹರಳುಗಳ ರೂಪದಲ್ಲಿ ಸಂಗ್ರಹವಾದಾಗ, ಅದು ನೋವನ್ನು ಉಂಟುಮಾಡುತ್ತದೆ.
ನಿರ್ಜಲೀಕರಣದಿಂದ ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ ಉಂಟಾಗಬಹುದು. ಈ ಸಮಸ್ಯೆಯನ್ನು ಕಡಿಮೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಅನುಸರಿಸಬಹುದು. ಅಂತಹ ಪಾನೀಯಗಳು ಯಾವುವು ಎಂಬುದನ್ನು ತಿಳಿಯೋಣ.
ದೇಹದಿಂದ ವಿಷವನ್ನು ತೆಗೆದುಹಾಕಲು ಮತ್ತು ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಪ್ರತಿದಿನ ಬೆಳಿಗ್ಗೆ ಒಂದು ಲೋಟ ನಿಂಬೆ ರಸ ಅಥವಾ ಜೇನುತುಪ್ಪದೊಂದಿಗೆ ಬೆಚ್ಚಗಿನ ನೀರನ್ನು ಕುಡಿಯಬಹುದು. ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆ ಮತ್ತು ಬೆಚ್ಚಗಿನ ನೀರು ದೇಹದಲ್ಲಿ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಆಹಾರ ಸೇವನೆ ಬಳಿಕ ಒಂದು ಲೋಟ ಮಜ್ಜಿಗೆ ಕುಡಿಯುವುದು ಉತ್ತಮ ಪರಿಹಾರ. ಇದು ದೇಹದಿಂದ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ದೇಹವನ್ನು ಹೈಡ್ರೀಕರಿಸುತ್ತದೆ. ಮತ್ತಷ್ಟು ಪ್ರಯೋಜನ ಪಡೆಯಲು ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಅಥವಾ ಕರಿಬೇವಿನ ಎಲೆಯನ್ನು ಬೆರೆಸಬಹುದು.
ಗೌಟ್ ನಿಂದ ಬಳಲುತ್ತಿರುವವರು ಟೊಮೆಟೊ ಸೂಪ್ ಕುಡಿಯುವುದರಿಂದ ಪ್ರಯೋಜನ ಪಡೆಯುತ್ತಾರೆ. ಪೋಷಕಾಂಶಗಳು ಮತ್ತು ನೀರಿನಿಂದ ಸಮೃದ್ಧವಾಗಿರುವ ಟೊಮೆಟೊ ಸೂಪ್ ಜೀರ್ಣಿಸಿಕೊಳ್ಳಲು ಸಹ ಸುಲಭವಾಗಿದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE NEWS ಇದನ್ನು ಖಚಿತಪಡಿಸುವುದಿಲ್ಲ.