ಇವುಗಳನ್ನು ತಿಂದರೆ.. ಕೆಲವೇ ತಿಂಗಳಲ್ಲಿ ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆಯುತ್ತವೆ..!

Wed, 09 Oct 2024-4:32 pm,

ಉದ್ದ ಕೂದಲು ಇಷ್ಟ ಪಡದ ಹುಡುಗಿಯರಿದ್ದಾರೆಯೇ..? ಕೂದಲು ಮುಖದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಆದರೆ.. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರು ಕೂದಲು ಉದುರುವಿಕೆ ಮತ್ತು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಇರುವಷ್ಟು ಕೂದಲನ್ನು ಉಳಿಸಿಕೊಳ್ಳಲು ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ.. ಇಷ್ಟೆಲ್ಲಾ ಮಾಡಿದರೂ ಕೂದಲಿನ ಸಮಸ್ಯೆಗೆ ಪರಿಹಾರವೇ ಸಿಗುತ್ತಿಲ್ಲವೇ..? ಹಾಗಿದ್ರೆ ಈ ಕೆಳಗೆ ನೀಡಿದ ಆಹಾರ ಪದಾರ್ಥಗಳನ್ನು ತಿನ್ನಿ..   

ನಿಮ್ಮ ಕೂದಲು ಚೆನ್ನಾಗಿ ಬೆಳೆಯಬೇಕು ಅಂದ್ರೆ, ನೀವು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೂದಲು ಬೆಳವಣಿಗೆ ಮತ್ತು ಕೂದಲು ಉದುರುವುದನ್ನು ನಿಲ್ಲಿಸಲು ಹಲವು ಕಾರಣಗಳಿರಬಹುದು. ಹಾರ್ಮೋನ್ ಅಸಮತೋಲನ, ದೇಹದಲ್ಲಿ ಅಗತ್ಯ ಪೋಷಕಾಂಶಗಳ ಕೊರತೆ, ಒತ್ತಡ, ಥೈರಾಯ್ಡ್, ಆನುವಂಶಿಕ ಅಂಶಗಳು ಸೇರಿದಂತೆ ಹಲವು ಅಂಶಗಳಿಂದ ಕೂದಲು ಉದುರಬಹುದು. ನೀವು ಉದ್ದವಾದ, ದಟ್ಟವಾದ, ಬಲವಾದ ಕೂದಲನ್ನು ಪಡೆಯಲು ಬಯಸಿದರೆ, ಮೊದಲು ನೀವು ನಿಮ್ಮ ಆಹಾರದ ಬಗ್ಗೆ ಗಮನ ಹರಿಸಬೇಕು.   

ಅಂಜೂರ, ಖರ್ಜೂರ, ಒಣದ್ರಾಕ್ಷಿ : ಒಣ ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಶೇಷವಾಗಿ ಅಂಜೂರ, ಖರ್ಜೂರ ಮತ್ತು ಒಣದ್ರಾಕ್ಷಿ.. ಆದ್ದರಿಂದ ಇವು ನಿಮ್ಮ ದೈನಂದಿನ ಆಹಾರದ ಭಾಗವಾಗಿರಬೇಕು. ಈ ಮೂರನ್ನು ತೆಗೆದುಕೊಂಡರೆ.. ಕೂದಲು ದಟ್ಟವಾಗಿ ಬೆಳೆಯುವುದು ಖಂಡಿತ. ಏಕೆಂದರೆ ಇವುಗಳಲ್ಲಿ ಕಬ್ಬಿಣ, ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಮತ್ತು ವಿಟಮಿನ್ ಸಿ ಇದೆ.. ಬೆಳಿಗ್ಗೆ ಉಪಾಹಾರದೊಂದಿಗೆ 2 ನೆನೆಸಿದ ಖರ್ಜೂರ, 2 ಅಂಜೂರ, 1 ಚಮಚ ಒಣದ್ರಾಕ್ಷಿ ಸೇವಿಸಿ.    

ವಾಲ್ ನಟ್ : ನಿಯಮಿತವಾಗಿ ವಾಲ್ ನಟ್ಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನಿಮ್ಮ ಕೂದಲು ದಟ್ಟವಾಗಿ ಬೆಳೆಯಲು ಸಹಾಯ ಮಾಡುತ್ತದೆ. ವಾಲ್‌ನಟ್ಸ್‌ ಸೆಲೆನಿಯಮ್ನ ಉತ್ತಮ ಮೂಲವಾಗಿದೆ, ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅವುಗಳಲ್ಲಿ ಬಯೋಟಿನ್ ಕೂಡ ಸಮೃದ್ಧವಾಗಿದೆ. ಇವುಗಳನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.  

ರಾಗಿ : ಇದು ಸೂಪರ್ ಫುಡ್... ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲೇಟ್ ನಂತಹ ಪೋಷಕಾಂಶಗಳಿವೆ. ಕೂದಲಿನ ಬೆಳವಣಿಗೆಗೆ ಇವೆಲ್ಲವೂ ಬಹಳ ಮುಖ್ಯ. ನೀವು ರಾಗಿಯಿಂದ ದೋಸೆ, ಸೂಪ್ ಮತ್ತು ಇತರ ಪದಾರ್ಥಗಳನ್ನು ಮಾಡಬಹುದು. ದಿನನಿತ್ಯ ರಾಗಿ ಮುದ್ದೆಯನ್ನಾದರೂ ತಿನ್ನಿ..  

ದಾಳಿಂಬೆ : ದಾಳಿಂಬೆಯಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ಫೈಬರ್, ಪೊಟ್ಯಾಶಿಯಂ ಮತ್ತು ಪ್ರೊಟೀನ್ ಗಳು ಹೇರಳವಾಗಿವೆ. ಇದು ದೇಹಕ್ಕೆ ಕಬ್ಬಿಣವನ್ನು ಒದಗಿಸುತ್ತದೆ. ಅಲ್ಲದೆ, ಇದು ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಹೀಗಾಗಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link