ಅಪ್ಪಿತಪ್ಪಿಯೂ ಮೊಟ್ಟೆಯೊಂದಿಗೆ ಈ 4 ಆಹಾರಗಳನ್ನು ತಿನ್ನಲೇಬೇಡಿ..!

Fri, 17 May 2024-12:57 pm,

ಕೆಲವು ರೀತಿಯ ಆಹಾರಗಳನ್ನು ಮಿಶ್ರಣ ಮಾಡಿ ತಿನ್ನುವುದರಿಂದ ಅವುಗಳ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯದ ಲಾಭವೂ ಇದೆ. ಆದರೆ ಕೆಲವು ರೀತಿಯ ಆಹಾರಗಳನ್ನು ಒಟ್ಟಿಗೆ ತಿನ್ನಬಾರದು. ಹಾಗೆಯೇ ಮೊಟ್ಟೆಯ ಜೊತೆಗೆ ತಿನ್ನಬಾರದ ಆಹಾರಗಳೂ ಇವೆ. ಅಪ್ಪಿತಪ್ಪಿಯೂ ಒಟ್ಟಿಗೆ ತಿನ್ನಬಾರದು.   

ಸೋಯಾ ಹಾಲು : ಮೊಟ್ಟೆಯ ಜೊತೆಗೆ ತಿನ್ನಬಾರದ ಆಹಾರಗಳ ಪಟ್ಟಿಯಲ್ಲಿ ಸೋಯಾ ಹಾಲು ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಪ್ರೊಟೀನ್ ಅಧಿಕವಾಗಿದೆ. ಮೊಟ್ಟೆ ಮತ್ತು ಸೋಯಾ ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ಪ್ರೋಟೀನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.  

ಸಕ್ಕರೆ : ಸಕ್ಕರೆಯೊಂದಿಗೆ ಮೊಟ್ಟೆಗಳನ್ನು ಬೇಯಿಸುವುದು ಅಥವಾ ತಿನ್ನುವುದು ಥಿಯೋಅಮಿನೋ ಆಮ್ಲವನ್ನು ಬಿಡುಗಡೆ ಮಾಡುತ್ತದೆ. ಸಕ್ಕರೆ ಮತ್ತು ಮೊಟ್ಟೆಗಳನ್ನು ಒಟ್ಟಿಗೆ ಸೇವಿಸುವುದರಿಂದ, ಅದರಲ್ಲಿರುವ ಪ್ರೋಟೀನ್ ರಾಸಾಯನಿಕ ರಚನೆಯು ಸಂಪೂರ್ಣವಾಗಿ ಬದಲಾಗುತ್ತದೆ. ಅದಕ್ಕಾಗಿಯೇ ಮೊಟ್ಟೆ ಮತ್ತು ಸಕ್ಕರೆಯನ್ನು ಯಾವುದೇ ಸಂದರ್ಭದಲ್ಲಿ ಒಟ್ಟಿಗೆ ತಿನ್ನಬಾರದು..  

ಚಹಾ : ನಾವು ಪ್ರತಿದಿನ ಬೆಳಿಗ್ಗೆ ಚಹಾ ಕುಡಿಯುತ್ತೇವೆ. ಹಾಗೆಯೇ ಬೆಳಗಿನ ತಿಂಡಿಯಲ್ಲಿ ಮೊಟ್ಟೆ ತಿನ್ನುತ್ತೆವೆ. ಆದರೆ ಈ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳುವುದರಿಂದ ಗಂಭೀರ ಹೊಟ್ಟೆಯ ಕಾಯಿಲೆಗಳು ಉಂಟಾಗಬಹುದು. ಕೆಲವರು ಈ ಆಹಾರ ಸಂಯೋಜನೆಯನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ಮೊಟ್ಟೆಯನ್ನು ಸೇವಿಸುವುದರಿಂದ ಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಅಸಿಡಿಟಿ ಮತ್ತು ಹೊಟ್ಟೆ ನೋವಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.  

ಮಾಂಸ : ಮೊಟ್ಟೆ ಜೊತೆಗೆ ಮಾಂಸ ತಿನ್ನಬೇಡಿ. ಏಕೆಂದರೆ ಈ ಸಂಯೋಜನೆಯು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೊಟ್ಟೆಯಲ್ಲಿ ಹೆಚ್ಚಿನ ಶೇಕಡಾವಾರು ಪ್ರೋಟೀನ್ ಮತ್ತು ಕೊಬ್ಬು ಇರುತ್ತದೆ. ಮಾಂಸವೂ ಸಹ ಇದೇ ಗುಣಗಳನ್ನು ಹೊಂದಿದೆ. ಹೀಗಾಗಿ ಇವೆರಡನ್ನು ಒಟ್ಟಿಗೆ ಸೇವಿಸಿದರೆ, ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.   

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಆದರೆ, ಮೊಟ್ಟೆಗಳೊಂದಿಗೆ ಬಾಳೆಹಣ್ಣು ತಿನ್ನುವಾಗ ಸ್ವಲ್ಪ ಜಾಗರೂಕರಾಗಿರಿ. ಎಕೆಂದರೆ ಇವೆರಡನ್ನೂ ಒಟ್ಟಿಗೆ ತೆಗೆದುಕೊಂಡು ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಮೊಟ್ಟೆಯಲ್ಲಿ ಹೆಚ್ಚಿನ ಶೇಕಡಾವಾರು ಪ್ರೋಟೀನ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.  0

ZEENEWS TRENDING STORIES

By continuing to use the site, you agree to the use of cookies. You can find out more by Tapping this link