ಪ್ರತಿನಿತ್ಯ ನೀವು ಸೇವಿಸುವ ಈ ತರಕಾರಿಗಳಲ್ಲಿರುವ ಆರೋಗ್ಯ ಗುಣಗಳನ್ನ ತಿಳಿದ್ರೆ ಅಚ್ಚರಿ ಪಡ್ತೀರಾ..!!
Benefits of Vegetables: ಅನೇಕರು ತರಕಾರಿ ಹೆಸರು ಕೇಳಿದ್ರೇನೆ ಮೂಗು ಮುರಿಯುತ್ತಾರೆ, ಆದರೆ ತರಕಾರಿಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನೆಗಳಿವೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಬನ್ನಿ ಈ ಕುರಿತು ತಿಳಿದುಕೊಳ್ಳೋಣ..
ಪಾಲಕ್: ಇದು ನಮ್ಮ ಆರೋಗ್ಯಕ್ಕೆ ಅವಶ್ಯಕವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ, ಬಿ ಮತ್ತು ಕೆ ಅಂಶಗಳು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವುದಷ್ಟೆ ಅಲ್ಲದೆ ಇದರಲ್ಲಿರುವ ಮ್ಯಾಂಗನೀಸ್, ಮೆಗ್ನೀಸಿಯಮ್, ಕಬ್ಬಿಣ, ತಾಮ್ರ ಮತ್ತು ಕ್ಯಾಲ್ಸಿಯಂ ಸೇರಿದಂತೆ ಇತರ ಪೋಷಕಾಂಶಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಕ್ಯಾರೆಟ್: ಗೆಡ್ಡೆ, ಗೆಣಸು, ಕ್ಯಾರೆಟ್ ಸೇರಿದಂತೆ ಭೂಮಿಯ ಒಳಗೆ ಬೆಳೆಯುವ ತರಕಾರಿಗಳಲ್ಲಿ ಹೆಚ್ಚಾಗಿ ವಿಟಮಿನ್ ಎ ಅಂಶ ಹೆಚ್ಚಾಗಿವಿತ್ತದೆ. ಕ್ಯಾರೆಟ್‌ಗಳು ಬೀಟಾ ಕ್ಯಾರೋಟಿನ್, ಪೊಟ್ಯಾಸಿಯಮ್, ಫೈಬರ್, ಆಂಟಿಆಕ್ಸಿಡೆಂಟ್‌ಗಳನ್ನು ಒದಗಿಸುತ್ತವೆ ಹಾಗೂ ಇವುಗಳಿಂದ ಮಾನವನ ದೇಹಕ್ಕೆ ವಿಟಮಿನ್ ಕೆ ಸಿಗುತ್ತದೆ. ಕ್ಯಾರೆಟ್ ಮನುಷ್ಯನಿಗೆ ಬೇಕಾದಂತಹ ಆಮೈನೋ ಆಮ್ಲಗಳನ್ನು ಕೊಡುವ ಉತ್ತಮ ಮೂಲ. ಕ್ಯಾರೆಟ್‌ನಲ್ಲಿರುವ ಫೈಟೊಕೆಮಿಕಲ್ ಅಂಶಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕರಿಸುತ್ತದೆ.
ಕ್ಯಾರೆಟ್ ಚರ್ಮದ ಕಾಂತಿಯನ್ನು ಹೆಚ್ಚಿಸುವುದಷ್ಟೆ ಅಲ್ಲದೆ ಚರ್ಮವನ್ನು ಹಳದಿ ಅಥಾವ ಕಿತ್ತಳೆ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ.
ಬ್ರೊಕೊಲಿ: ಈ ತರಕಾರಿ ಮಾನವನ ದೇಹಕ್ಕೆ ಉಪಯುಕ್ತವಾಗಿ ಸಿಗುವಂತಹ ಅಂಶಗಳು ಫೈಬರ್ ಮತ್ತು ವಿಟಮಿನ್ ಎ, ಸಿ ಮತ್ತು ಕೆ ಅಂಶಗಳಲ್ಲಿ ಸಮೃದ್ಧವಾಗಿದೆ. ಅಷ್ಟೆ ಅಲ್ಲದೆ, ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣ ಪೋಷಕಂಶಗಳ ಮೂಲವಾಗಿದ್ದು, ಶಕ್ತಿಯುತವಾದ ಉತ್ಕರ್ಷಣ ನಿರೋಧಕ, ಉರಿಯೂತದ ಮತ್ತು ಕ್ಯಾನ್ಸರ್ ತಡೆಗಟ್ಟಲು ಬೇಕಾದಂಹತ ಕ್ಯಾನ್ಸರ್ ವಿರೋಧಿ ಗುಣಲಕ್ಷಣಳನ್ನು ಒಳಗೊಂಡಿದೆ.
ಹಸಿರು ಬಟಾಣಿ : ಒಂದು ಕಪ್ ಬೇಯಿಸಿದ ಹಸಿರು ಬಟಾಣಿ ಸೇವಿಸಿದರೆ ದೇಹಕ್ಕೆ 31% ಡಿವಿ ಪೈಬರ್ ದೊರೆಯುತ್ತದೆ. ಅಲ್ಲದೆ, ಪ್ರೋಟಿನ್ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಜೊತೆಗೆ ಇತರ ಪೋಷಕಾಂಶಗಳನ್ನು ಸಹ ಸಿಗುತ್ತದೆ. ಈ ತರಕಾರಿಯು ಮಧುಮೇಹ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೊಮಾಟೊ : ಈ ಹಣ್ಣುಗಳು ಹೆಚ್ಚಿನ ವಿಟಮಿನ್ ಸಿ ಮತ್ತು ಉತ್ಕರ್ಷಣ ರೋಗನಿರೋಧಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ. ಟೊಮಾಟೊ ಹೃದಯದ, ನ್ಯೂರೋ ಡಿಜೆನೆರೇಟಿವ್ ಮತ್ತು ಕರುಳಿನ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದ ಕಾಂತಿಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಈರುಳ್ಳಿ: ಇದು ಹೆಚ್ಚಾಗಿ ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಗೆ ಸಹಾಯ ಮಾಡುತ್ತದೆ, ಇದರ ಸೇವನೆಯಿಂದ ಮನುಷ್ಯನ ಜೀರ್ಣಶಕ್ತಿ ಹೆಚ್ಚಾಗುತ್ತದೆ, ಇದರಲ್ಲಿನ ಬಯೋಆಕ್ಟಿವ್ ಸಂಯುಕ್ತ ಅಂಶಗಳು ಮಧುಮೇಹ, ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ತಡೆಗಟ್ಟುವ ಹಾಗೂ ಇನ್ನೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಶತಾವರಿ: ಶತಾವರಿಯಲ್ಲಿ ವಿಟಮಿನ್ ಎ, ಸಿ, ಇ,ಕೆ, ಮತ್ತು ಬಿ6 ಅಂಶಗಳು ಏರಳವಾಗಿವೆ. ಇದು ಫೋಲೇಟ್, ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ಫೈಬರ್ನನ ಅಂಶಗಳು ಇದರಲ್ಲಿ ಸಮೃದ್ಧವಾಗಿದ್ದು, ತೂಕ ನಿರ್ವಹಣೆ ಜೊತೆಗೆ ರಕ್ತ ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಕ್ಯಾನ್ಸರ್ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ.