30 ವರ್ಷ ದಾಟಿದ ನಂತರ ಮದುವೆಯಾಗುವುದು ಒಳ್ಳೆಯದಲ್ಲ, ಯಾಕೆ ಗೊತ್ತಾ..? ಇಲ್ಲಿವೆ ಕಾರಣಗಳು..!
delayed marriage reasons: ಹಿಂದಿನ ದಿನಗಳಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿದ್ದವು. ಆದರೆ 18ನೇ ವಯಸ್ಸಿಗೆ ಮದುವೆ ಮಾಡಬೇಕೆಂಬ ನಿಯಮವಿತ್ತು, 18ನೇ ವಯಸ್ಸಿಗೆ ಹುಡುಗನಿಗೆ ಮದುವೆ ಮಾಡಲು ಪೋಷಕರು ಯೋಚಿಸುತ್ತಿದ್ದರು, ಆದರೆ ಈಗಿನ ಪೀಳಿಗೆ ಬದಲಾಗಿದೆ.
ಹೆಚ್ಚಿನ ಜನರು ಇತ್ತೀಚೆಗೆ 30 ವರ್ಷ ವಯಸ್ಸು ದಾಟಿದ ಮೇಲೆ ಮದುವೆಯಾಗುತ್ತಿದ್ದಾರೆ. ಆದರೆ ಈ ರೀತಿ ವಿಳಂಭವಾಗಿ ಮದುವೆಯಗುವುದು ತಪ್ಪು ಎನ್ನುವುದು ನಿಮಗೆ ಗೊತ್ತಿದೆಯಾ..? ಈ ರೀತಿ ವಿಳಂಬವಾಗಿ ಮದುವೆಯಾಗುವುದರಿಂದ ಆಗುವ ಸಮಸ್ಯೆಗಳೇನು..?
ಈಗಿನ ಪೀಳಿಗೆಯವರು ವೃತ್ತಿಜೀವನದತ್ತ ಹೆಚ್ಚು ಗಮನಹರಿಸುತ್ತಾರೆ. ಶಿಕ್ಷಣ ಕೆಲಸ ಅಂತ ಬ್ಯುಸಿಯಾದ ಜೀವನಶೈಲಿಯ ಕಾರಣ ಈಗಿನ ಯುವಕರು ಮದುವೆ ಮಾಡಿಯಾಗುವುದನ್ನು ವಿಳಂಭ ಮಾಡುತ್ತಾರೆ. ಮದುವೆಯಾಗುವ ಉದ್ದೇಶದಿಂದ ಒಳ್ಳೆ ಕೆಲಸ, ಸ್ಥಾನಮಾನ ಸಿಗುವವರೆಗೂ ಕಾಯುತ್ತಾರೆ. ಇದರಿಂದ 35 ದಾಟಿದ ನಂತರ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾರೆ. ಮದುವೆಯ ನಂತರ ಸಮಸ್ಯೆಗೆ ಸಿಲುಕುವ ಬದಲು ಮದುವೆಗೆ ಮುನ್ನ ಎಚ್ಚರ ವಹಿಸಿ ನಂತರ ಸೆಟಲ್ ಆಗಿ ಮದುವೆಯಾಗುವುದು ಒಳ್ಳೆಯದು ಎಂದು ಹಂಬಲಿಸುತ್ತಾರೆ.
ಪ್ರತಿ ಮನೆಯಲ್ಲೂ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕರು ಆ ಜವಾಬ್ದಾರಿಗಳನ್ನು ಮುಗಿಸಿದ ನಂತರ ಮದುವೆಯಾಗಲು ಬಯಸುತ್ತಾರೆ. ಇಡೀ ಕುಟುಂಬವನ್ನು ನೆಲೆಗೊಳಿಸುವುದು, ಆರ್ಥಿಕವಾಗಿ ಬೆಳೆಯುವುದು, ಮನೆ ಕಟ್ಟುವುದು... ಹೀಗೆ ಹಲವು ಜವಾಬ್ದಾರಿಗಳಿರುತ್ತದೆ.
ಹಿಂದಿನ ದಿನಗಳಲ್ಲಿ ಅಜ್ಜಂದಿರು ತಮ್ಮ ತಂದೆ ಸಂಪಾದಿಸಿದ್ದನ್ನು ಹೊಂದಿಸಿಕೊಂಡು ಬದುಕುತ್ತಿದ್ದರು. ಆದರೆ, ಈಗಿನಂತಲ್ಲ.. ತಮ್ಮ ಇಷ್ಟಾರ್ಥ ಮತ್ತು ಐಷಾರಾಮಿ ಜೀವನಕ್ಕಾಗಿ ಜನ ಕಾಯುತ್ತಾರೆ. ಕೆಲವರು ವಯಸ್ಸಿಗೆ ಬಂದಾಗ ಪ್ರೀತಿಯಲ್ಲಿ ಬಿದ್ದು ಸಂಬಂಧವನ್ನು ಮುರಿದುಕೊಳ್ಳುತ್ತಾರೆ, ಆದ್ದರಿಂದ ಅವರು ಖಿನ್ನತೆಗೆ ಒಳಗಾಗಿ, ಮದುವೆಯಿಂದ ಹಿಂದೆ ಸರಿಯುತ್ತಾರೆ. ಇದರಿಂದ ತಡವಾಗಿ ವಿವಾಹವಾಗುವ ಸಂಭವವೂ ಇದೆ. ಇದಲ್ಲದೆ, ಸಂಬಂಧದ ಭಯವು ಕೂಡ ತಡವಾದ ಮದುವೆಗೆ ಕಾರಣವಾಗುತ್ತದೆ. ಮದುವೆಯಾದರೆ ತಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎನ್ನುವ ಕಾರಣದಿಂದ ಜನರು ಮದುವೆಯಾಗುವುದರಿಂದ ಹಿಂದೆ ಸರಿಯುತ್ತಾರೆ.