ಗೂಗಲ್‌ನಲ್ಲಿ ಯಾವ ಕಾರಣಕ್ಕೂ ಈ 4 ವಿಷಯಗಳನ್ನು ಸರ್ಚ್ ಮಾಡಲೇಬಾರದು: ಅಪ್ಪಿತಪ್ಪಿ ಮಾಡಿದರಂತೂ ಜೈಲೇ ಗತಿ
ಗೂಗಲ್.. ಈ ಹೆಸರು ಗೊತ್ತಿಲ್ಲದವರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಯಾವುದೇ ಸಣ್ಣ ಅಗತ್ಯವಿದ್ದರೂ ತಕ್ಷಣ ಗೂಗಲ್ ಸಹಾಯ ಪಡದುಕೊಳ್ಳುವ ಜಮಾನದಲ್ಲಿ ನಾವಿದ್ದೇವೆ. Google ನಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗುತ್ತದೆ ಎಂಬುದು ನಂಬಿಕೆ
ಗೂಗಲ್ ಜೀವನದ ಒಂದು ಭಾಗವಾಗಿದೆ. ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಯಾವ ವಿಚಾರದ ಬಗ್ಗೆ ತಿಳಿದುಕೊಳ್ಳಲು ಕೂಡ ಕಷ್ಟ ಪಡಬೇಕಾಗಿಲ್ಲ ಎನ್ನುತ್ತಾರೆ ತಜ್ಞರು. ಆದರೆ ನಿಮಗೆ ತಿಳಿದಿದೆಯೇ? ಕೆಲವೊಂದು ವಿಷಯದ ಬಗ್ಗೆ ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಸರ್ಚ್ ಮಾಡಬಾರದು. ಒಂದು ವೇಳೆ ಮಾಡಿದ್ರೆ ಜೈಲುವಾಸ ಮಾಡುವ ಪರಿಸ್ಥಿತಿ ಬರಬಹುದು. ಅಷ್ಟಕ್ಕೂ ಗೂಗಲ್‌ನಲ್ಲಿ ಹುಡುಕಬಾರದ ವಿಷಯಗಳು ಯಾವುವು ಎಂದು ತಿಳಿಯೋಣ.
ದೇಶದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರ ಮಕ್ಕಳ ವಿಚಾರದಲ್ಲಿ ಕ್ರಮಕೈಗೊಳ್ಳುತ್ತಿದೆ. Google ಹುಡುಕಾಟದಲ್ಲಿ ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಯಾವುದನ್ನಾದರೂ ಹುಡುಕುವುದು ಅಥವಾ ಹಂಚಿಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದೆ. ಒಂದು ವೇಳೆ ಇಂತಹ ವಿಷಯ ಸರ್ರ್ಚ್ ಮಾಡಿ ಸಿಕ್ಕಿಬಿದ್ದರೆ, ಜೈಲು ಶಿಕ್ಷೆ ಅನುಭವಿಸಬೇಕಾದೀತು.
ಗೂಗಲ್ ಮಾಡಬಾರದ ಇನ್ನೊಂದು ವಿಷಯ.ಬಾಂಬ್ ತಯಾರಿಕೆ ಸಂಬಂಧಿಸಿದ್ದು. ಬಾಂಬ್ ತಯಾರಿಸುವುದು ಹೇಗೆ ಎಂಬ ವಿಚಾರವನ್ನು ಸರ್ಚ್ ಮಾಡಿದರೆ ಅಂಥವರ ಮೇಲೆ ಗುಪ್ತಚರ ಸಂಸ್ಥೆಗಳು ಸದಾ ಕಣ್ಣಿಟ್ಟಿರುತ್ತವೆ.
ಭಾರತದಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ಕಾನೂನುಗಳಿವೆ. ವೈದ್ಯರ ಸಲಹೆಯಿಲ್ಲದೆ ನಿಗದಿತ ಅವಧಿಯ ನಂತರ ಗರ್ಭಪಾತ ಮಾಡುವುದು ಭಾರತೀಯ ಕಾನೂನಿನ ಪ್ರಕಾರ ಅಪರಾಧವಾಗಿದೆ. ಹಾಗಾಗಿ Google ನಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದ ಯಾವುದೇ ಹುಡುಕಾಟವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.
ಗೂಗಲ್ ಸರ್ಚ್ ಮಾಡುವಲ್ಲಿ ಮಾತ್ರವಲ್ಲದೆ ಕೆಲವು ರೀತಿಯ ಕಂಟೆಂಟ್ ಅಪ್ ಲೋಡ್ ಮಾಡುವಲ್ಲಿಯೂ ಜಾಗರೂಕರಾಗಿರಿ. ವಿಶೇಷವಾಗಿ Google ನಲ್ಲಿ ಇತರರ ಖಾಸಗಿ ವೀಡಿಯೊಗಳು ಅಥವಾ ಫೋಟೋಗಳನ್ನು ಹಂಚಿಕೊಳ್ಳುವುದು ಅಪರಾಧ. ಹೀಗೆ ಮಾಡಿದರೆ ಜೈಲಿಗೆ ಹೋಗುವುದು ಖಚಿತ. ಅತ್ಯಾಚಾರ ಸಂತ್ರಸ್ತೆಯ ಹೆಸರು ಅಥವಾ ಆಕೆಯ ವಿವರಗಳನ್ನು ಹುಡುಕುವುದನ್ನೂ ಸಹ ಅಪರಾಧ ಎಂದು ಪರಿಗಣಿಸಲಾಗುತ್ತದೆ.