ಮೊದಲ ಬಾರಿಗೆ S*X ಮಾಡಿದ ಹೆಣ್ಣಿನ ದೇಹದಲ್ಲಿ ಈ ಬದಲಾವಣೆಗಳಾಗುತ್ತವೆ..! ತಿಳಿದಿರಲಿ...
ಲೈಂಗಿಕ ಸಂಬಂಧದ ಅನುಭವವನ್ನು ಅನುಭವಿಸಿದವರಿಗೆ ಅದರ ಬಗ್ಗೆ ತಿಳಿದಿರುತ್ತದೆ. ಉತ್ತಮ ಲೈಂಗಿಕ ಸಂಬಂಧವು ಸಾಕಷ್ಟು ಹಾರ್ಮೋನುಗಳ ಬಿಡುಗಡೆ ಮತ್ತು ಇತರ ಅನೇಕ ವಿಷಯಗಳಿಗೆ ಕಾರಣವಾಗುತ್ತದೆ.
ಇನ್ನು ದೈಹಿಕ ಸಂಬಂಧ ಮಾಡಿದ ಬಳಿಕ ದೇಹದ ಮೇಲೆ ಕೆಲವು ಪರಿಣಾಮಗಳು ಬೀರುತ್ತವೆ. ಇನ್ನು ಅಂತಹ ಬದಲಾವಣೆಗಳು ಸಂಪೂರ್ಣವಾಗಿ ಸಾಮಾನ್ಯವಾಗಿರುತ್ತವೆ. ಲೈಂಗಿಕ ಸಂಬಂಧದ ನಂತರ ಮಹಿಳೆಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಲೈಂಗಿಕ ಸಂಬಂಧಗಳು ಸಿರೊಟೋನಿನ್, ಎಂಡಾರ್ಫಿನ್ ಮತ್ತು ಆಕ್ಸಿಟೋಸಿನ್‌ನಂತಹ ಹ್ಯಾಪಿ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತವೆ. ಈ ಎಲ್ಲಾ ಹಾರ್ಮೋನುಗಳು ಲೈಂಗಿಕ ಕ್ರಿಯೆಯ ನಂತರ ದೇಹದಲ್ಲಿ ಬಿಡುಗಡೆಯಾಗುತ್ತವೆ. ಇವು ಮನಸ್ಸನ್ನು ಹಗುರಗೊಳಿಸುವುದು ಮಾತ್ರವಲ್ಲ, ಆರಾಮದಾಯಕ ಮತ್ತು ನಮ್ಮೊಂದಿಗೆ ಪ್ರೀತಿಯಿಂದ ಇರುವಂತೆ ಮಾಡುತ್ತವೆ
ಲೈಂಗಿಕ ಸಂಬಂಧದ ಸ್ವಲ್ಪ ಸಮಯದ ನಂತರ ಹೃದಯ ಬಡಿತ ಮತ್ತು ಬಿಪಿ ಸಹಜ ಸ್ಥಿತಿಗೆ ಬರಲು ಪ್ರಾರಂಭಿಸುತ್ತದೆ. ಆಗ ದೇಹದಲ್ಲಿ ಬಹಳಷ್ಟು ವಿಶ್ರಾಂತ ಭಾವವುಂಟಾಗುತ್ತದೆ. ಸ್ನಾಯುಗಳು ಸಾಮಾನ್ಯ ಸ್ಥಿತಿಗೆ ಮರಳುತ್ತವೆ.
ಲೈಂಗಿಕ ಸಂಬಂಧದ ಸಮಯದಲ್ಲಿ ಮತ್ತು ನಂತರ ಬಿಡುಗಡೆಯಾಗುವ ರಾಸಾಯನಿಕಗಳ ಬದಲಾವಣೆಗಳಿಗೆ ನೀವು ಪ್ರತಿಕ್ರಿಯಿಸುತ್ತಿರುವುದರಿಂದ ನೀವು ಹೆಚ್ಚಿನ ಭಾವನೆ ಹೊಂದುವ ಸಾಧ್ಯತೆಯಿದೆ.
ಲೈಂಗಿಕ ಸಂಬಂಧದ ಸಂದರ್ಭದಲ್ಲಿ ರಕ್ತದ ಹರಿವು ಹೆಚ್ಚಾಗಿ, ಹೃದಯವು ವೇಗವಾಗಿ ಬಡಿಯುತ್ತಿದೆ ಎಂದು ನೀವು ಭಾವಿಸಬಹುದು. ಇದಕ್ಕೆ ಕಾರಣ ದೇಹದಲ್ಲಿನ ಅಡ್ರಿನಾಲಿನ್ ಉಲ್ಬಣ
ಲೈಂಗಿಕ ಸಂಬಂಧ ಬೆಳೆಸಿದ ನಂತರ ಯೋನಿಯು ನಯವಾಗಲು ಪ್ರಾರಂಭಿಸುತ್ತದೆ. ಕೆಲವೊಮ್ಮೆ ಇದು ಪೀರಿಯಡ್ಸ್, ಆಹಾರ ಪದ್ದತಿ, ಇತ್ಯಾದಿಗಳಂತಹ ಇತರ ಅಂಶಗಳನ್ನು ಸಹ ಅವಲಂಬಿಸಿ ಬದಲಾಗುತ್ತದೆ.
ಲೈಂಗಿಕ ಸಂಬಂಧದ ವೇಳೆ ದೇಹದಾದ್ಯಂತ ರಕ್ತದ ಹರಿವು ಹೆಚ್ಚಾಗುತ್ತದೆ. ವಿಶೇಷವಾಗಿ ಎರೋಜೆನಸ್ ಪ್ರದೇಶಗಳಿಗೆ... ಹೀಗಾಗಿ ಲೈಂಗಿಕ ಸಂಬಂಧದ ಬಳಿಕ ಮಹಿಳೆಯ ಸ್ತನಗಳು ಮತ್ತು ಜನನಾಂಗಗಳು ಊದಿಕೊಳ್ಳಲು ಪ್ರಾರಂಭಿಸುತ್ತವೆ.
ಮುಲುಂಡ್‌ನ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಮತ್ತು ಸೆಕ್ಸಲಾಜಿಸ್ಟ್ ಡಾ. ಸಂಜಯ್ ಕುಮಾವತ್ ಹೇಳುವಂತೆ, 'ಲೈಂಗಿಕ ಸಂಬಂಧವು ಜೋಡಿಗಳಿಗೆ ತುಂಬಾ ತೃಪ್ತಿಕರ ಅನುಭವವಾಗಿದೆ. ಇದು ವಿಶೇಷವಾಗಿ ಮಹಿಳೆಯರಿಗೆ ವಿಶ್ರಾಂತಿ ಮತ್ತು ಒತ್ತಡ ನಿವಾರಕ ಮೂಲವಾಗಿದೆ. ಅಷ್ಟೇ ಅಲ್ಲದೆ, ಮಹಿಳೆಯರಿಗೆ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
"ಆದರೆ, ಕೆಲವು ಸಂದರ್ಭಗಳಲ್ಲಿ, ಇದು ಮೈಗ್ರೇನ್ ಮತ್ತು ತಲೆನೋವು ಸೇರಿದಂತೆ ಹೆಚ್ಚಿದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಅವರು ಹೆಚ್ಚು ಶ್ರಮವಹಿಸಿದರೆ. ಹೆಚ್ಚುವರಿಯಾಗಿ, ಯೋನಿ ಊದಿಕೊಳ್ಳಬಹುದು ಮತ್ತು ಒಳಗಿನ ಪದರವು ಲೈಂಗಿಕ ಸಂಬಂಧಗಳ ನಂತರ ಕೆಲವು ಗಂಟೆಗಳವರೆಗೆ ಕೆಂಪಾಗಬಹುದು. ಲೈಂಗಿಕ ಕ್ರಿಯೆಯ ನಂತರ ದೇಹವು ದಣಿದಿರುವುದರಿಂದ ಇದು ಸಂಭವಿಸುತ್ತದೆ" ಎಂದಿದ್ದಾರೆ
ಜೊತೆಗೆ, ಪಾಲುದಾರರ ನಡುವಿನ ಸಂಬಂಧವನ್ನು ಉತ್ತೇಜಿಸುವಾಗ ದೇಹದ ಸ್ನಾಯುಗಳನ್ನು ಬಲಪಡಿಸಲು ಲೈಂಗಿಕ ಚಟುವಟಿಕೆಯು ಉತ್ತಮ ದೈಹಿಕ ವ್ಯಾಯಾಮವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಜೋಡಿಗಳ ನಡುವೆ ಭಾವನಾತ್ಮಕ ಮತ್ತು ದೈಹಿಕ ಸಂಪರ್ಕವನ್ನು ಸೃಷ್ಟಿಸಲು ಇದು ಸಹಾಯ ಮಾಡುತ್ತದೆ.