ʼದಿ ಕೇರಳ ಸ್ಟೋರಿʼ ನಾಯಕಿ ಅದಾ ಶರ್ಮಾ ಚಿತ್ರದ ಬಗ್ಗೆ ಹೇಳಿದ್ದೇನು..?
ʼದಿ ಕೇರಳ ಸ್ಟೋರಿʼ ಸಿನಿಮಾ ಇಂದು (ಮೇ5) ದೇಶದಾದ್ಯಂತ ಬಿಡುಗಡೆಯಾಗಲು ರೆಡಿಯಾಗಿದೆ. ಈ ಸಿನಿಮಾ ಸಾಕಷ್ಟು ವಿವಾದಗಳನ್ನು ಮೀರಿ ತೆರೆಮೇಲೆ ಬರುತ್ತಿದೆ.
ಈ ಸಿನಿಮಾ ಕೇರಳದಲ್ಲಿ ಕಾಣೆಯಾದ 32 ಸಾವಿರ ಮಹಿಳೆಯರ ದುಃಖದ ಕಥೆ. ಈ ಸಿನಿಮಾದ ಮೂಲಕ ಕರಾಳ ಸತ್ಯವನ್ನು ಬಿಚ್ಚಿಡಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ
ಕೇರಳದ 32 ಸಾವಿರ ಕಾಣೆಯಾದ ಮಹಿಳೆಯರು ವಿದೇಶಕ್ಕೆ ಹೋಗಿ, ಅಲ್ಲಿಂದ ಮತಾಂತರವಾಗಿ ಉಗ್ರ ಸೇನೆಯನ್ನು ಸೇರುವ ಸತ್ಯ ಕಥೆ ಎಂದು ನಿರ್ದೇಶಕ ಹೇಳಿಕೊಂಡಿದ್ದಾರೆ
ಈ ಚಿತ್ರದ ನಾಯಕಿ ಅದಾ ಶರ್ಮಾ ತನ್ನ ಟ್ವೀಟರ್ ಅಕೌಂಟ್‌ನಲ್ಲಿ ʼದಿ ಕೇರಳ ಸ್ಟೋರಿʼ ಸಿನಿಮಾ ಕುರಿತು ಬರೆದುಕೊಂಡಿದ್ದಾರೆ
"ಈ ಸಿನಿಮಾ ಯಾವುದೇ ಚುನಾವಣೆ, ಅಜೆಂಡಾ ಮತ್ತು ಧರ್ಮದ ಬಗ್ಗೆ ಅಲ್ಲ. ಇದು ಅದೆಲ್ಲಕ್ಕಿಂತ ದೊಡ್ಡದು, ಇದೊಂದು ಜೀವನ ಮತ್ತು ಮರಣದ ಕಥೆ. ಇದು ಭಯೋತ್ಪಾದನೆ ಮತ್ತು ಮಾನವೀಯಯತೆಯ ಅಸಲಿ ಕಥೆ" ಎಂದು ಬರೆದುಕೊಂಡಿದ್ದಾರೆ
ಈ ಸಿನಿಮಾ ಸಾಕಷ್ಟು ವಿವಾದಗಳಿಗೆ ಕಾರಣವಾದ ಸಿನಿಮಾ. ರಾಜಕೀಯ ರಂಗದಲ್ಲೂ ಚರ್ಚೆಗೆ ಒಳಗಾದ ಸಿನಿಮಾ. ಈ ಚಿತ್ರದ ಬಿಡುಗಡೆಗೆ ಅಣೆಕ ರಾಜಕೀಯ ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದಾರೆ.