ರೈಲಿನ ಕೊನೆಯ ಬೋಗಿಯ ಹಿಂಭಾಗದಲ್ಲಿ ಬರೆದಿರುವ ಈ ʼXʼ ಚಿಹ್ನೆಯ ಅರ್ಥವೇನು...? ಹೀಗೆ ಬರೆಯೋದು ಯಾಕೆ ಎಂದು ನಿಮಗೆ ತಿಳಿದಿದೆಯೇ?
ಸಾಮಾನ್ಯವಾಗಿ ಎಲ್ಲರೂ ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ಪ್ರಯಾಣಿಸದಿದ್ದರೂ, ರೈಲು ಹಾದುಹೋಗುವುದನ್ನು ನೋಡಿರಲೇಬೇಕು. ಆ ಸಮಯದಲ್ಲಿ ರೈಲು ಬೋಗಿಗಳಲ್ಲಿ ಕೆಲವು ಚಿಹ್ನೆಗಳನ್ನು ಮಾಡಿರುವುದನ್ನು ಗಮನಿಸಿರುತ್ತೀರಲ್ಲವೇ! ಅಂತಹ ಚಿಹ್ನೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಈ ಲೇಖನದಲ್ಲಿ ರೈಲ್ವೆನಲ್ಲಿ ಬರೆದಿರುವ ಕೆಲವು ಚಿಹ್ನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಭಾರತದಲ್ಲಿ ಓಡುವ ಎಲ್ಲಾ ಪ್ಯಾಸೆಂಜರ್ ರೈಲುಗಳ ಕೊನೆಯ ಕಂಪಾರ್ಟ್‌ಮೆಂಟ್‌ನಲ್ಲಿ ದೊಡ್ಡ 'X' ಗುರುತು ಇರುವುದನ್ನು ನೀವು ಗಮನಿಸಿರಬಹುದು. ಇಲ್ಲವಾದರೆ ಮುಂದೊಂದು ದಿನ ರೈಲು ಕಂಡರೆ ಅಥವಾ ಪ್ರಯಾಣಿಸಿದರೆ ಗಮನಿಸಿ.
ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ಎಲ್ಲಾ ಪ್ರಯಾಣಿಕ ರೈಲುಗಳ ಕೊನೆಯ ಬೋಗಿಯಲ್ಲಿ ಈ ಗುರುತು ಕಡ್ಡಾಯವಾಗಿದೆ. ಈ ದೊಡ್ಡ X ಅನ್ನು ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳಲ್ಲಿ ಬರೆಯಲಾಗಿದೆ. ಅಂದರೆ ಇದು ಆ ರೈಲಿನ ಕೊನೆಯ ಕಂಪಾರ್ಟ್ ಮೆಂಟ್ ಎಂಬ ಗುರುತಾಗಿದ್ದು, ಬಿಳಿ ಮತ್ತು ಹಳದಿ ಬಣ್ಣದಲ್ಲಿರುತ್ತವೆ.
ರೈಲು ಕಂಪಾರ್ಟ್‌ಮೆಂಟ್‌ನಲ್ಲಿ 'ಎಕ್ಸ್' ಎಂಬ ಮತ್ತೊಂದು ಚಿಹ್ನೆ ಇದೆ. ಅದರ ಮೇಲೆ ಎಲ್‌ವಿ ಎಂದು ಬರೆಯಲಾಗಿದೆ. LV ಯ ಪೂರ್ಣ ರೂಪವು 'ಲಾಸ್ಟ್ ವೆಹಿಕಲ್' ಎಂದರ್ಥ. ಇದು ರೈಲ್ವೆಯ ಕೋಡ್ ಆಗಿದ್ದು, ಸೇಫ್ಟಿ ಆಂಡ್ ಸೆಕ್ಯುರಿಟಿ ಉದ್ದೇಶಕ್ಕಾಗಿ ರೈಲಿನ ಕೊನೆಯ ಕಂಪಾರ್ಟ್‌ಮೆಂಟ್‌ನಲ್ಲಿ ಬರೆಯಲಾಗಿದೆ. ಇದು ರೈಲಿನ ಕೊನೆಯ ಕೋಚ್ ಎಂಬ ಸೂಚನೆಯನ್ನು ರೈಲ್ವೇ ನೌಕರರಿಗೆ ನೀಡುತ್ತದೆ.
ಇದಲ್ಲದೆ, ರೈಲಿನ ಹಿಂದೆ ಕೆಂಪು ದೀಪವಿದೆ. ಹಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅದೇ ಸ್ಥಳದಿಂದ ಹೊರಟು ಹೋಗಿರುವ ಸೂಚನೆಯನ್ನು ಈ ಬೆಳಕು ನೀಡುತ್ತದೆ. ಕೆಟ್ಟ ಹವಾಮಾನ ಮತ್ತು ದಟ್ಟವಾದ ಮಂಜಿನಲ್ಲಿ ಇವು ವಿಶೇಷವಾಗಿ ಸಹಾಯಕವಾಗಿವೆ. ಏಕೆಂದರೆ ಅಂತಹ ಪರಿಸ್ಥಿತಿಗಳಲ್ಲಿ ರೈಲನ್ನು ಸ್ಪಷ್ಟವಾಗಿ ನೋಡುವುದು ತುಂಬಾ ಕಷ್ಟ.