ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂಡಲ್‌ ಈಗ ಎಲ್ಲಿದ್ದಾರೆ.. ಹೇಗಿದ್ದಾರೆ.. ಏನ್‌ ಮಾಡ್ತಿದಾರೆ ಗೊತ್ತಾ!

Fri, 16 Aug 2024-4:57 pm,

ರಾನು ಮಂಡಲ್‌ ಧ್ವನಿಗೆ ಮನಸೋತ ಸಂಗೀತ ನಿರ್ದೇಶಕ, ಗಾಯಕ ಹಿಮೇಶ್ ರಶ್ಮಿಯಾ ಬಾಲಿವುಡ್‌ ನಲ್ಲಿ ಒಂದು ಅವಕಾಶವನ್ನೂ ನೀಡಿದರು. ಹಿಮೇಶ್ ರಶ್ಮಿಯಾ ಕೊಟ್ಟ ಚಾನ್ಸ್‌ನಲ್ಲಿ ರಾನು ಅದ್ಭುತವಾಗಿ ಹಾಡಿ, ಫೇಮಸ್ ಆದರು. 

ಹಿಮೇಶ್ ರಶ್ಮಿಯಾ ನೀಡಿದ ಮೂರು ಹಾಡುಗಳಲ್ಲಿ ಆಶೀಕಿ ಮೇರಿ ಹಾಡು ಕ್ರೇಜ್‌ ಕ್ರಿಯೇಟ್‌ ಮಾಡಿತು. ಒಂದೇ ಹಾಡಿನ ಮೂಲಕ ರಾತ್ರೋ ರಾತ್ರಿ ರಾನು ಮಂಡಲ್‌ ಸ್ಟಾರ್‌ ಆದರು.

2019ರಲ್ಲಿ ಪ್ರತಿನಿತ್ಯ ಸುದ್ದಿಯಲ್ಲಿರುತ್ತಿದ್ದ ರಾನು ಮಂಡಲ್‌ ಇದೀಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಅನೇಕರನ್ನು ಕಾಡುತ್ತಿದೆ. 

ರಾನು ಮಂಡಲ್‌ ಮುಂಬೈನಲ್ಲಿದ್ದ ಮನೆ ಬಿಟ್ಟು ಮತ್ತೆ ಕೋಲ್ಕತ್ತಾ ಸೇರಿಕೊಂಡಿದ್ದಾರೆ. 

ಮುಂಬೈನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ರಾನು ಮಂಡಲ್‌ ಅವಕಾಶಗಳು ಕಡಿಮೆಯಾದಾಗ ಬಾಡಿಗೆ ಕಟ್ಟಲು ಸಹ ಹಣವಿಲ್ಲದೇ ಪರದಾಡಿದರು. ಈ ಹಿನ್ನೆಲೆ ರಾನು ಮಂಡಲ್‌ ಇದೀಗ ಮತ್ತೆ ಕೋಲ್ಕತ್ತಾದಲ್ಲಿಯೇ ನೆಲೆಸಿದ್ದಾರೆ. 

ಕೋಲ್ಕತ್ತಾದ ಹೊರವಲಯದಲ್ಲಿರುವ ಪುಟ್ಟ ಮನೆಯಲ್ಲಿ ರಾನು ಮಂಡಲ್‌ ವಾಸಿಸುತ್ತಿದ್ದಾರೆ. ಭೇಟಿಗೆ ಬರುವ ಜನರ ಬಳಿ ವಿಚಿತ್ರ ಬೇಡಿಕೆಗಳನ್ನು ರಾನು ಮಂಡಲ್‌ ಇಡುತ್ತಾರೆಂದು ವ್ಲಾಗರ್ ಒಬ್ಬರು ಹೇಳಿದ್ದಾರೆ. 

ವ್ಲಾಗರ್‌ ತಮ್ಮ ವಿಡಿಯೋದಲ್ಲಿ ರಾನು ಮಂಡಲ್ ಹೇಗಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಾನು ಮಂಡಲ್ ತಮ್ಮನ್ನು ಭೇಟಿಯಾಗಲು ಬಂದವರ ಬಳಿ ಊಟ ಮತ್ತು ಅಡುಗೆ ಮಾಡಲು ಸಾಮಾಗ್ರಿ ತಂದುಕೊಡುವಂತೆ ಬೇಡುತ್ತಾರಂತೆ.

ಬಟ್ಟೆ, ದಿನನಿತ್ಯ ಬಳಕೆಗೆ ಬೇಕಾಗುವ ವಸ್ತು ಕೊಡಿಸಿ ಎಂದು ರಾನು ಮಂಡಲ್‌ ಮನವಿ ಮಾಡುತ್ತಾರಂತೆ. ಹೀಗೆ ಕೇಳಿದಾಗ ಯಾರಾದರೂ ನಿರಾಕರಿಸಿದರೆಪೊರಕೆ ಹಿಡಿದು ಹೊಡೆಯಲು ಬರುತ್ತಾರಂತೆ. 

ಒಂದು ಕಾಲದಲ್ಲಿ ರಾತ್ರೋ ರಾತ್ರಿ ಬಾಲಿವುಡ್‌ನ ಸಿಂಗಿಂಗ್‌ಸ್ಟಾರ್‌ ಆದ ರಾನು ಮಂಡಲ್‌ ಇದೀಗ ಒಪ್ಪತ್ತಿನ ಊಟಕ್ಕೂ ಗತಿಯಿಲ್ಲದೇ ಪರದಾಡುವಂತಾಗಿದೆ ಎಂದು ಹೇಳಲಾಗುತ್ತಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link