ಐಷಾರಾಮಿ 5-ಸ್ಟಾರ್ ಹೋಟೆಲ್‌ಗಳ ಭಯಾನಕ ರಹಸ್ಯಗಳ ಬಗ್ಗೆ ತಿಳಿಯಿರಿ..!

Fri, 05 Nov 2021-2:18 pm,

ಹೋಟೆಲ್ ಉದ್ಯೋಗಿಯೊಬ್ಬರು ಹೇಳಿದ ವಿಷಯ ತುಂಬಾ ಭಯಾನಕವಾಗಿವೆ. ಹೋಟೆಲ್‌ಗಳಲ್ಲಿನ ಹಾಸಿಗೆಗಳಲ್ಲಿ ಕನಿಷ್ಠ ಶೇ.40ರಷ್ಟು ಯಾರಾದರೂ ಸಾವನ್ನಪ್ಪಿರುತ್ತಾರೆ ಎಂದು ಅವರು ಹೇಳಿದ್ದಾರೆ. ಬಹುಶಃ ನೀವು ಹೋಟೆಲ್ ಕೋಣೆಯಲ್ಲಿ ಮಲಗಿರುವ ಹಾಸಿಗೆಯ ಮೇಲೆ ಯಾರಾದರೂ ಕೊನೆಯುಸಿರೆಳೆದಿರಬಹುದು ಎಂದು ಅವರು ಹೇಳಿದ್ದಾರೆ. ‘ನಿಸ್ಸಂಶಯವಾಗಿ ಇದು ಯಾವ ಪ್ರಕಾರದ ಹೋಟೆಲ್ ಮತ್ತು ಗ್ರಾಹಕರು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ವಾರಕ್ಕೆ ಒಂದಾದರೂ ಸಾವು ಸಂಭವಿಸುವ ಅನೇಕ ಹೋಟೆಲ್‌ಗಳಿವೆ’ ಅಂತಾ ಹೇಳಿದ್ದಾರೆ.

ಹೋಟೆಲ್ ಉದ್ಯೋಗಿಯೊಬ್ಬರು ಹೇಳುವ ಪ್ರಕಾರ, ‘ಸಖತ್ ಮಜಾ ಮಾಡಲೆಂದು ಅನೇಕರು ರಜೆಯ ಮೇಲೆ ಪ್ರವಾಸಕ್ಕೆ ತೆರಳುತ್ತಿರುತ್ತಾರೆ. ಹೀಗೆ ಹೋದವರಲ್ಲಿ ಕೆಲವರು ಅವರು ಉಳಿದುಕೊಂಡುರುವ ಹೋಟೆಲ್ ನಲ್ಲಿಯೇ ಪ್ರಾಣಬಿಟ್ಟಿರುತ್ತಾರೆ. ಖುಷಿ ಖುಷಿಯಾಗಿ ರಜಾಮಜಾ ಅನುಭವಿಸಲು ಬಂದ ವ್ಯಕ್ತಿ ಹೋಟೆಲ್ ನಲ್ಲಿ ಶವವಾಗಿ ಮಲಗಿರುತ್ತಾನೆ. ಹೋಟೆಲ್ ಕೊಠಡಿಗಳ ಮುಚ್ಚಿದ ಬಾಗಿಲುಗಳ ಹಿಂದೆ ಸುದ್ದಿಗೆ ಬರದ ಇಂತಹ ಅನೇಕ ಘಟನೆಗಳು ನಡೆಯುತ್ತವೆ. ಇವು ಸುದ್ದಿಯೇ ಆಗುವುದಿಲ್ಲ’ವೆಂದು ಅವರು ಹೇಳಿದ್ದಾರೆ.   

ನೀವೂ ಹೋಟೆಲ್ ತಲುಪಿದ ತಕ್ಷಣ ಟೇಬಲ್ ಮೇಲೆ ಇಟ್ಟಿರುವ ಗ್ಲಾಸ್ ನಲ್ಲಿ ನೀರು ಕುಡಿಯುವ ಅಭ್ಯಾಸವಿದ್ದರೆ ಕೂಡಲೇ ನಿಲ್ಲಿಸಿ. ಡೈಲಿ ಮೇಲ್‌ನ ವರದಿಯ ಪ್ರಕಾರ, ನಿಮ್ಮ ಹೋಟೆಲ್ ಕೋಣೆಯಲ್ಲಿ ಇರಿಸಲಾಗಿರುವ ಹೊಳೆಯುವ ಗಾಜು ಎಷ್ಟು ಕೊಳಕು ಎಂದು ನೀವು ಊಹಿಸಲೂ ಸಾಧ್ಯವಿಲ್ಲ ಎಂದು ಹೋಟೆಲ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಸಿಬ್ಬಂದಿಯ ಪ್ರಕಾರ, ‘ಕೊಠಡಿ ಪರಿಚಾರಕರಿಗೆ ಕೆಲಸ ಮತ್ತು ಗಡುವು ತುಂಬಾ ಹೊರೆಯಾಗಿರುತ್ತದೆ. ಅವರು ಸ್ನಾನಗೃಹವನ್ನು ಸ್ವಚ್ಛಗೊಳಿಸುವ ಅದೇ ಸ್ಕ್ರಬ್ ನಿಂದ ಗಾಜಿನ ಲೋಟವನ್ನು ಸ್ವಚ್ಛಗೊಳಿಸುತ್ತಾರೆ. ಅಂತಿಮವಾಗಿ ಕೊಠಡಿಯನ್ನು ಸ್ವಚ್ಛವಾಗಿ ಕಾಣುವಂತೆ ಮಾಡುವುದು ಅವರ ಗುರಿಯಾಗಿರುತ್ತದೆ. ಹೀಗಾಗಿ ಕೆಲಸದ ಒತ್ತಡದಲ್ಲಿ ಅವರು ಗಾಜಿನ ಲೋಟವನ್ನು ಸರಿಯಾಗಿಯೇ ತೊಳೆದಿರುವುದಿಲ್ಲ’ವೆಂದು ಹೇಳಿದ್ದಾರೆ.  

ಒಮ್ಮೆ ಒಬ್ಬ ಒಬ್ಬ ವ್ಯಕ್ತಿ ಲೈಂಗಿಕ ಕಾರ್ಯಕರ್ತೆಯನ್ನು ಹೋಟೆಲ್‌ಗೆ ಕರೆತಂದಿದ್ದ. ಆತನ ಕೋಣೆಗೆ ಪ್ರವೇಶಿಸಿದ್ದ ಆ ಮಹಿಳೆ ಅವನ ಬಳಿಯಿದ್ದ ಲಕ್ಷಗಟ್ಟಲೆ ಹಣ, ಬೆಲೆಬಾಳುವ ಕೈಗಡಿಯಾರಗಳು ಹಾಗೂ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಳು.  

ಹೋಟೆಲ್ ಸಿಬ್ಬಂದಿಯೊಬ್ಬರು ಹೇಳುವ ಪ್ರಕಾರ, ‘ನೀವು ಎಷ್ಟೇ ದುಬಾರಿ ಹೋಟೆಲ್‌ಗೆ ಹೋದರೂ ನಿಮ್ಮ ಲಗೇಜ್ ಅನ್ನು ಹಾಸಿಗೆಯ ಮೇಲೆ ಇಡಬೇಡಿ’ ಅಂತಾ ಸಲಹೆ ನೀಡಿದ್ದಾರೆ. ಅನೇಕ ಹೋಟೆಲ್‌ಗಳ ಬೆಡ್‌ಗಳಲ್ಲಿ ತಿಗಣೆಗಳು ಇರುತ್ತವೆ.  ನೀವು ಹಾಸಿಗೆಯ ಮೇಲೆ ಲಗೇಜ್ ಮತ್ತು ಬಟ್ಟೆಗಳು ಇನ್ನಿತರ ಸಾಮಾನುಗಳನ್ನು ಇಟ್ಟರೆ ತಿಗಣೆಗಳು ನಿಮ್ಮ ಮನೆಗೆ ಸುಲಭವಾಗಿ ಬರುತ್ತವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿಬ್ಬಂದಿಯೊಬ್ಬರು ಹೇಳುವ ಪ್ರಕಾರ ‘ಹೋಟೆಲ್‌ಗಳಲ್ಲಿ ಕೊಠಡಿ ಪರಿಚಾರಕರು ಅತಿಥಿಗಳ ವಸ್ತುಗಳನ್ನು ಎಂದಿಗೂ ಕದಿಯುವುದಿಲ್ಲ. ವಸ್ತುಗಳು ಕಳೆದುಹೋದರೆ ಪ್ರವಾಸಿಗರು ಮೊದಲು ಕೊಠಡಿಯ ಪರಿಚಾರಕನ ಕಡೆಗೆ ಬೊಟ್ಟು ಮಾಡುತ್ತಾರೆ.  ಆದರೆ ಎಂದಿಗೂ ಅವರು ನಿಮ್ಮ ವಸ್ತುಗಳನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಅವರು ಅತಿಥಿಗಳ ವಸ್ತುಗಳನ್ನು ತೆಗೆದುಕೊಂಡರೆ ಅವರ ಕೆಲಸಕ್ಕೆ ಕುತ್ತು ಬರುತ್ತದೆ. ಯಾರೋ ಅಪರಿಚಿತರು ನಿಮ್ಮ ಬಲೆಬಾಳುವ ವಸ್ತುಗಳನ್ನು ಕಳುವು ಮಾಡಿರುತ್ತಾರೆ, ಇಲ್ಲವೋ ನೀವೋ ಅವುಗಳನ್ನು ಎಲ್ಲೋ ಇಟ್ಟು ಕಳೆದುಕೊಂಡಿರುತ್ತೀರಿ’ ಎಂದು ಹೇಳಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link