ಮನೆ ಮುಂದೆ ಪಪ್ಪಾಯಿ ಗಿಡ ಬೆಳೆಸುತ್ತಿದ್ದೀರಾ..? ಮೊದಲು ಅದರಿಂದಾಗುವ ದುಷ್ಪರಿಣಾಮಗಳನ್ನು ತಿಳಿಯಿರಿ..
)
ಪ್ರತಿಯೊಬ್ಬರೂ ಮನೆಯನ್ನು ಸುಂದರವಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಅದಕ್ಕಾಗಿ ಅನೇಕರು ಮನೆಯಲ್ಲಿ ವಿವಿಧ ರೀತಿಯ ಗಿಡ, ಮರಗಳನ್ನು ನೆಡುತ್ತಾರೆ. ಮನೆಯಲ್ಲಿ ಮರ, ಗಿಡಗಳನ್ನು ಬೆಳೆಸಿದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಆದರೆ, ಕೆಲವು ಗಿಡಗಳನ್ನು ಮನೆ ಆವರಣದಲ್ಲಿ ಬೆಳೆಸಬಾರದು.. ಅವುಗಳು ನಿಮಗೆ ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ ಎಂದು ನಂಬಲಾಗಿದೆ. ಈ ಪೈಕಿ ಪಪ್ಪಾಯಿ ಮರ ಒಂದು..
)
ವಾಸ್ತು ಶಾಸ್ತ್ರದ ಪ್ರಕಾರ.. ಮನೆಯ ಮುಂದೆ ಪಪ್ಪಾಯಿ ಮರ ಬೆಳೆಸುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ನಿಮ್ಮ ಮನೆಯ ಮುಂದೆ ಅಪ್ಪಿ ತಪ್ಪಿಯೂ ಈ ಮರ ಬೆಳೆದರೆ ಕಿತ್ತು ಬೇರೆಡೆ ನೆಡಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಏಕೆಂದರೆ ಮನೆ ಮುಂದೆ ಪಪ್ಪಾಯಿ ಗಿಡ ನೆಟ್ಟರೆ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆಯಂತೆ..
)
ವಾಸ್ತು ತಜ್ಞರ ಪ್ರಕಾರ ಪಪ್ಪಾಯಿ ಗಿಡವನ್ನು ಮನೆಯ ಮುಂದೆ ನೆಟ್ಟರೆ ಮನೆಯಿಂದ ಶಾಂತಿ ನೆಮ್ಮದಿ ದೂರವಾಗುತ್ತದೆ. ಆದ್ದರಿಂದಲೇ ಮನೆ ಮುಂದೆ ಈ ಗಿಡ ನೆಡಬಾರದು ಎನ್ನುತ್ತಾರೆ. ಆದರೆ, ಇದರ ಹಿಂದೆ ಬಲವಾದ ಕಾರಣವಿದೆ ಎನ್ನಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ.. ಪಪ್ಪಾಯಿ ಮರವನ್ನು ಪೂರ್ವಜರ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಈ ಮರವನ್ನು ಮನೆಯ ಹತ್ತಿರ ಅಥವಾ ಮನೆಯ ಮುಂದೆ ನೆಡಬಾರದು ಎಂದು ಹೇಳಲಾಗುತ್ತದೆ. ಈ ಗಿಡವನ್ನು ನೆಡುವುದರಿಂದ ಮಕ್ಕಳಿಗೆ ಯಾವಾಗಲೂ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ..
ಮೇಲಾಗಿ.. ವಾಸ್ತು ಪ್ರಕಾರ.. ಮನೆಯ ಸುತ್ತಮುತ್ತಲೂ ಪಪ್ಪಾಯಿ ಮರವನ್ನು ನೆಡಬಾರದು ಎಂದು ಹೇಳಲಾಗುತ್ತದೆ. ಏಕೆಂದರೆ ಇದು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೆಟ್ಟರೆ ಹಣದ ಸಮಸ್ಯೆ ಸದಾ ಮನೆಯನ್ನು ಕಾಡುತ್ತದೆ ಎನ್ನುತ್ತಾರೆ. ಇದಲ್ಲದೆ, ಜಗಳಗಳು ಮತ್ತು ಕಿರಿಕಿರಿಗಳು ಉದ್ಭವಿಸುತ್ತವೆಯಂತೆ..