Turmeric Milk: ಅತಿಯಾಗಿ ಅರಿಶಿನ ಹಾಲು ಸೇವಿಸಿದ್ರೆ ಏನಾಗುತ್ತೆ? ಇಂತಹವರು ಅಪ್ಪಿತಪ್ಪಿಯೂ ಸೇವಿಸಬಾರದು!

Mon, 28 Oct 2024-6:19 pm,

ಅರಿಶಿನ ಹಾಲು ಆರೋಗ್ಯಕ್ಕೆ ವರದಾನವಾಗಿದ್ದರೂ ಸಹ ಇದನ್ನು ಅತಿಯಾಗಿ ಕುಡಿಯುವುದರಿಂದ ಕೆಲವರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಬದಲು ನಕಾರಾತ್ಮಕ ಪರಿಣಾಮ ಬೀರಬಹುದು.

ಗ್ಯಾಸ್ ಅಥವಾ ಹೊಟ್ಟೆಯುಬ್ಬರದಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿರುವವರು ಅರಿಶಿನ ಹಾಲನ್ನು ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿರುವ ಪದಾರ್ಥಗಳು ನಿಮ್ಮ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

ಮಧುಮೇಹದಂತಹ ಸೈಲೆಂಟ್ ಕಿಲ್ಲರ್ ಕಾಯಿಲೆಗಳಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸದೆ ಅರಿಶಿನ ಹಾಲನ್ನು ಕುಡಿಯಬಾರದು.

ನೀವು ಆಗಾಗ ಕಡಿಮೆ ರಕ್ತದೊತ್ತಡದಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅರಿಶಿನ ಹಾಲು ತುಂಬಾ ಹಾನಿಕಾರಕವಾಗಿದ್ದು, ಇದು ರಕ್ತದೊತ್ತಡವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಕೆಲವರಿಗೆ ಹಾಲಿನಿಂದ ಅಲರ್ಜಿ ಇದ್ದರೆ ನಿಮ್ಮ ಆಹಾರದಲ್ಲಿ ಅರಿಶಿನ ಹಾಲನ್ನು ಸೇರಿಸುವುದನ್ನು ತಪ್ಪಿಸುವುದು ಒಳ್ಳೆಯದು.

ಮಳೆಗಾಲ ಅಥವಾ ಚಳಿಗಾಲದ ಸಮಯದಲ್ಲಿ ಅರಿಶಿನ ಹಾಲನ್ನು ಅತಿಯಾಗಿ ಸೇವನೆ ಮಾಡಬಾರದು. ಆಯುರ್ವೇದದ ಪ್ರಕಾರ ಅರಿಶಿನ ಹಾಲನ್ನು ಮಿತಿಯೊಳಗೆ ಸೇವಿಸಿದರೆ ಮಾತ್ರ ನಿಮಗೆ ಪ್ರಯೋಜನಕಾರಿ. ಯಾವುದನ್ನಾದರೂ ಅತಿಯಾಗಿ ಸೇವಿಸುವುದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link