Facebook, twiteer ನಿದ್ದೆಗೆಡಿಸುತ್ತಿದೆ Clubhouse ; ಈ ಆಪ್ ನ ವಿಶೇಷತೆ ತಿಳಿಯಿರಿ
ಏನಿದು ಕ್ಲಬ್ ಹೌಸ್ ಆಪ್ ? : Clubhouse ಅನ್ನು ಕಳೆದ ವರ್ಷ ಏಪ್ರಿಲ್ ನಲ್ಲಿ ಲಾಂಚ್ ಮಾಡಲಾಗಿತ್ತು. ಇದೊಂದು ಸಾಮಾಜಿಕ ಮಾಧ್ಯಮ ಆಪ್ ಆಗಿದ್ದರೂ ಇತರ ಆಪ್ ಗಳಿಗಿಂತ ಭಿನ್ನವಾಗಿದೆ. ಈ ಆಪ್ ಮೂಲಕ ಬರೀ ವಾಯ್ಸ್ ಮೂಲಕವೇ ಪೋಸ್ಟ್ ಮಾಡುವುದು ಸಾಧ್ಯ. ಅಂದರೆ ಟೆಕ್ಸ್ಟ್ ಮತ್ತು ವಿಡಿಯೋಗಳನ್ನು ಈ ಆಪ್ ನಲ್ಲಿ ಬಳಸಲು ಸಾಧ್ಯವಿಲ್ಲ. ಕ್ಲಬ್ ಹೌಸ್ ಆಪ್ ನ ಇನ್ನೊಂದು ವಿಶೇಷ ಅಂದರೆ, ಇದರಲ್ಲಿ ಕ್ಯಾಮರಾ ಬಳಸುವ ಅಗತ್ಯವೂ ಇಲ್ಲ.
Tesla ಮಾಲೀಕ Elon Musk ಕೂಡಾ ಈ ಆಪ್ ಬಳಸುತ್ತಿದ್ದಾರೆ: ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ Tesla ಮಾಲೀಕ Elon Musk ಕೂಡಾ ಈ ಆಪ್ ಬಳಸುತ್ತಿದ್ದಾರೆ. Elon Musk ಅವರ Good Time Show ಅನ್ನು ಬಹಳಷ್ಟು ಜನರು ಫಾಲೋ ಮಾಡುತ್ತಿದ್ದಾರೆ. ಕ್ಲಬ್ ಹೌಸ್ ನಲ್ಲಿ Elon Musk ಪೋಸ್ಟ್ ಹಾಕುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಈ ಆಪನ್ನು ಡೌನ್ ಲೋಡ್ ಮಾಡುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.
ಪ್ರತಿಯೊಬ್ಬರೂ ಈ ಆಪ್ ಬಳಸುವಂತಿಲ್ಲ : Clubhouse ಆಪ್ ನ ಮತ್ತೊಂದು ವಿಶೇಷವೆಂದರೆ, ಈ ಆಪ್ ಅನ್ನು ಡೌನ್ ಲೋಡ್ ಮಾಡಿದ ಕೂಡಲೇ ಇದನ್ನು ಬಳಸಲು ಸಾಧ್ಯವಿಲ್ಲ. ಇದೊಂದು Invite-Only ಆಪ್. ಇದರರ್ಥ Clubhouseನ ಸಕ್ರೀಯ ಬಳಕೆದಾರರು ಮಾತ್ರ ಆಪ್ ಅನ್ನು ಬಳಸುವಂತೆ Invite ಮಾಡಬಹುದು.
Clubhouse ಆಪ್ ಅನ್ನು ಬಳಸುವುದು ಹೇಗೆ ?: ಪ್ರಸ್ತುತ ಬಳಕೆಯಲ್ಲಿರುವ Facebook, Instagram, Twitter, WhatsApp, TikTokಗಳಿಗೆ ಹೋಲಿಸಿದರೆ ಕ್ಲಬ್ ಹೌಸ್ ಕೇವಲ ಮಾತನಾಡಲು ಇರುವಂಥಹ ಆಪ್. ಇದರಲ್ಲಿ ತಮ್ಮದೇ ಆದ Room ಕ್ರಿಯೇಟ್ ಮಾಡಿಕೊಳ್ಳಬಹುದು. ಈ ಮೂಲಕ ಯಾವುದೇ ವಿಷಯದ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಬಹುದು. ಜನರ ಅಭಿಪ್ರಾಯಗಳನ್ನು ಕೂಡಾ ಪಡೆದುಕೊಳ್ಳಬಹುದು. ಇದರ ನ್ನೊಂದು ವಿಶೇಷವೆಂದರೆ, ಇಲ್ಲಿ ಯಾವುದೇ ರೀತಿಯ ಫೋಟೋ, ವಿಡಿಯೋ, ಟೆಕ್ಸ್ಟ್ ಗಳನ್ನು ಶೇರ್ ಮಾಡಲು ಸಾಧ್ಯವಾಗುವುದಿಲ್ಲ.
ಇದ್ದಕ್ಕಿದ್ದಂತೆ ಜನಪ್ರಿಯವಾಗಲು ಕಾರಣ : ಕ್ಲಬ್ ಹೌಸ್ ಲಾಂಚ್ ಆಗಿ ಒಂದು ವರ್ಷವೂ ಆಗಿಲ್ಲ. ಈಗಲೇ ಇದರ ಮೌಲ್ಯ ಒಂದು ಬಿಲಿಯನ್ ಡಾಲರ್ ಅನ್ನೂ ದಾಟಿದೆ. Elon Musk ಮಾತ್ರವಲ್ಲದೆ ಫೇಸ್ ಬುಕ್ ನ ಮಾಲೀಕರಾದ Mark Zuckerberg ಕೂಡಾ ಈ ಆಪ್ ಅನ್ನು ಬಳಸುತ್ತಿದ್ದಾರೆ. ಸೆಲೆಬ್ರಿಟಿ Oprah Winfrey ಕೂಡಾ Clubhouse ಬಳಸಲು ಆರಂಭಿಸಿದ್ದಾರೆ.