ʼಕಾಳ ಸರ್ಪ ದೋಷʼ ಎಂದರೇನು.. ಇದು ಮನುಷ್ಯನನ್ನ ಹೇಗೆ ಕಾಡುತ್ತೆ ಅಂತ ಗೊತ್ತೆ..?.. ಬದುಕಿದ್ದು ಸತ್ತಂತೆ ಮಾಡುತ್ತೆ...
ನಾಗಲೋಗಂ, ನಾಗಕನ್ನಿಕೆ ಹೀಗೆ ಹಾವಿನ ಬಗ್ಗೆ ಹಲವಾರು ಕಥೆಗಳಿವೆ.. ಜಗತ್ ರಕ್ಷಕ ಶಿವ ತನ್ನ ಕೊರಳನ್ನು ಹಾವಿನಿಂದ ಅಲಂಕರಿಸಿದ್ದಾನೆ.. ಹೀಗೆ ಹಾವಿಗೆ ಹಿಂದೂ ಧರ್ಮದಲ್ಲಿ ಅನೇಕ ಕಥೆಗಳಿವೆ. ನಾಗರಹಾವನ್ನು ದೇವರು ಅಂತ ಪೂಜಿಸಲಾಗುತ್ತದೆ.. ಹಾವನ್ನು ಕೊಲ್ಲುವುದು ಅಥವಾ ಅದನ್ನ ಹಿಂಸಿಸುವುದು ಪಾಪವೆಂದು ಪರಿಗಣಿಸಲಾಗಿದೆ.
ತಿಳಿದೋ ತಿಳಿಯದೆಯೋ ಹಾವನ್ನು ಕೊಂದರೆ ಶಾಪಕ್ಕೆ ಗುರಿಯಾಗಬೇಕಾಗುತ್ತದೆ ಅಂತ ತಲೆಮಾರುಗಳು ಹೇಳುತ್ತವೆ. ಹಣದ ಸಮಸ್ಯೆ, ಸಂಸಾರದಲ್ಲಿ ಸಮಸ್ಯೆ, ಮದುವೆ ಕುಂಠಿತ, ಮದುವೆಯೇ ಆಗದಿರುವುದು, ಕೆಲಸದಲ್ಲಿ ಹಿನ್ನಡೆ, ನಿರಾಸೆ, ಕುಟುಂಬಸ್ಥರಿಂದ ದ್ರೋಹ, ಸಂತಾನಹೀನತೆ, ಮಗು ಹುಟ್ಟಿದರೂ ಸರ್ಪದೋಷದಿಂದ ಸಮಸ್ಯೆಗಳು ಉಂಟಾಗುತ್ತವೆ ಎನ್ನುತ್ತದೆ ಜ್ಯೋತಿಷ್ಯ.
ನಾಗರ ಹಾವು ಮತ್ತು ಅನೇಕ ಜಾತಿಯ ಹಾವುಗಳು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ಆಹಾರ ಹಡುಕಿಕೊಂಡು ಬರುವ ನಾಗರಹಾವನ್ನು ಕೆಲವರು ಹೊಡೆದು ಸಾಯಿಸುತ್ತಾರೆ.. ಇಲ್ಲಿಂದಲೇ ಇವರಿಗೆ ಕಷ್ಟದ ದಿನಗಳು ಶುರುವಾಗುತ್ತವೆ.. ಏಕೆಂದರೆ.. ಹಾವು ಸತ್ತಾಗ ಶಪಿಸುತ್ತದೆಯಂತೆ..
ಅಲ್ಲದೆ, ಎಷ್ಟು ಜನ ಅದನ್ನು ಬಡಿಗೆಯಿಂದ ಬಡಿದು ಸಾಯಿಸಿರುತ್ತಾರೋ ಅವರೆಲ್ಲರಿಗೂ ಸರ್ಪದೋಷ ಬರುತ್ತದೆ. ಇದು ಅವರ ವಂಶದಲ್ಲಿ ಮುಂದುವರಿಯುತ್ತದೆ. ನಾಗದೋಷದಿಂದ ಅನೇಕ ರಾಜವಂಶಗಳು ಸರ್ವನಾಶವಾದ ಇತಿಹಾಸವೂ ಇದೆ.
ಸರ್ಪದೋಷ ಬಗ್ಗೆ ಜಾತಕ ನೋಡಿದ್ರೆ ಗೊತ್ತಾಗುತ್ತೆ. ಬಹಳಷ್ಟು ಜನರ ಹಿನ್ನೆಲೆ ನೋಡಿದರೆ ನಾಗರಹಾವು ಕೊಂದ ದಿನದಿಂದಲೂ ಈ ದೋಷ ಅಂಟಿಕೊಂಡಿರುತ್ತದೆ. ಹಾಗಾಗಿ ಹಾವಿಗೆ ಯಾರೂ ತೊಂದರೆ ಕೊಡಬಾರದು ಅಂತ ಹಿರಿಯರು ಹೇಳುತ್ತಾರೆ.
ಮನೆಗೆ ಹಾವು ಬಂದರೆ ಉರಗ ರಕ್ಷಕರಿಗೆ ಮಾಹಿತಿ ನೀಡಿ.. ಅವರು ಸುರಕ್ಷಿತವಾಗಿ ಅದನ್ನು ಹಿಡಿದು ಕಾಡಿಗೆ ಬಿಡುತ್ತಾರೆ. ಇಲ್ಲದಿದ್ದರೆ ಅದು ಬೇರೆ ಕಡೆ ಹೋಗುವವರೆಗೂ ಸುಮ್ಮನಿರಿ.. ನೆನಪಿರಲಿ ಅದಕ್ಕೆ ಹಾನಿ ಮಾಡುವುದು.. ಕೊಲ್ಲುವುದು ಸರ್ಪದೋಷಕ್ಕೆ ಕಾರಣವಾಗುತ್ತದೆ..