Inflation: ಹಣದುಬ್ಬರ ನಿಯಂತ್ರಿಸಲು RBI ಏನು ಮಾಡುತ್ತಿದೆ ಗೊತ್ತಾ..?

Fri, 10 Nov 2023-3:57 pm,

ಲೋಕಸಭೆ ಚುನಾವಣೆಗೂ ಮುನ್ನ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ‘ಕೇಂದ್ರೀಯ ಬ್ಯಾಂಕ್ ಸಂಪೂರ್ಣವಾಗಿ ಜಾಗರೂಕವಾಗಿದ್ದು, ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವುದು ಮತ್ತು ಹಣದುಬ್ಬರ ನಿಯಂತ್ರಿಸುವುದು ವಿತ್ತೀಯ ನೀತಿಯ ನಿಲುವಾಗಿದೆ’ ಎಂದು ಅವರು ಹೇಳಿದ್ದಾರೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವನ್ನು ಶೇ.2ರಷ್ಟು ವ್ಯತ್ಯಾಸದೊಂದಿಗೆ ಶೇ.4 ಪರ್ಸೆಂಟ್‌ನಲ್ಲಿ ಇರಿಸಲು ಸರ್ಕಾರವು ಕೇಂದ್ರ ಬ್ಯಾಂಕ್‌ಗೆ ಜವಾಬ್ದಾರಿಯನ್ನು ನೀಡಿದೆ. ಟೋಕಿಯೊದಲ್ಲಿ ನಡೆದ ಸೆಮಿನಾರ್‌ನಲ್ಲಿ ಆರ್‌ಬಿಐನ ಹಣಕಾಸು ತಂತ್ರಜ್ಞಾನ (ಫಿನ್ ಟೆಕ್) ಪರಿಸರವನ್ನು ಉಲ್ಲೇಖಿಸಿದ ದಾಸ್, ‘ಇದು ಗ್ರಾಹಕ ಕೇಂದ್ರಿತವಾಗಿದೆ’ ಎಂದು ಹೇಳಿದರು. ಉತ್ತಮ ಆಡಳಿತ ವ್ಯವಸ್ಥೆಗಳು, ಪರಿಣಾಮಕಾರಿ ಮೇಲ್ವಿಚಾರಣೆ, ನೈತಿಕವಾಗಿ ಸೂಕ್ತವಾದ ಚಟುವಟಿಕೆಗಳು, ಅಪಾಯ ನಿರ್ವಹಣೆ ಮತ್ತು ಸ್ವಯಂ-ನಿಯಂತ್ರಕ ಸಂಸ್ಥೆಗಳ (SROs) ಮೂಲಕ ಫಿನ್‌ಟೆಕ್‌ಗಳ ಸ್ವಯಂ-ನಿಯಂತ್ರಣವನ್ನು ಉತ್ತೇಜಿಸುವತ್ತ ಗಮನಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿತ್ತೀಯ ನೀತಿ ಸಮಿತಿಯು (MPC) ತನ್ನ ಅಕ್ಟೋಬರ್ ಸಭೆಯಲ್ಲಿ ಚಿಲ್ಲರೆ ಹಣದುಬ್ಬರವನ್ನು 2023-24ಕ್ಕೆ ಶೇ.5.4ರಷ್ಟು ಎಂದು ಅಂದಾಜಿಸಿದೆ. ಇದು 2022-23ಕ್ಕೆ ಶೇ.6.7ಕ್ಕಿಂತ ಕಡಿಮೆಯಾಗಿದೆ ಎಂದು ದಾಸ್ ಹೇಳಿದ್ದಾರೆ. ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ 3 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಅಕ್ಟೋಬರ್ ತಿಂಗಳ ಹಣದುಬ್ಬರ ಅಂಕಿಅಂಶಗಳನ್ನು ನವೆಂಬರ್ 13ರಂದು ಬಿಡುಗಡೆ ಮಾಡಲಾಗುತ್ತದೆ.

ಮುಖ್ಯ ಹಣದುಬ್ಬರವು ಆಹಾರದ ಬೆಲೆ ಆಘಾತಗಳಿಗೆ ಸಂವೇದನಾಶೀಲವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಅದೇ ರೀತಿ ಕೋರ್ ಹಣದುಬ್ಬರವು ಜನವರಿ 2023ರಲ್ಲಿ ಅದರ ಉನ್ನತ ಮಟ್ಟವನ್ನು ತಲುಪಿದ ನಂತರ ಶೇ.1.70ಕ್ಕೆ ಇಳಿದಿದೆ. ಆರ್‌ಬಿಐ ಗವರ್ನರ್ ದಾಸ್ ಈ ಬಗ್ಗೆ ಮಾತನಾಡಿ, ‘ಈ ಸಂದರ್ಭಗಳಲ್ಲಿ ವಿತ್ತೀಯ ನೀತಿಯ ನಿಲುವು ಜಾಗರೂಕತೆಯಿಂದ ಉಳಿದಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವಾಗ ಗುರಿಗೆ ಅನುಗುಣವಾಗಿ ಹಣದುಬ್ಬರವನ್ನು ಇರಿಸಲು ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.

ವಿತ್ತೀಯ ನೀತಿ ಸಮಿತಿಯು (MPC) ಅಕ್ಟೋಬರ್‌ನಲ್ಲಿ ನಡೆದ ದ್ವೈ-ಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಪ್ರಮುಖ ನೀತಿ ದರ ರೆಪೊವನ್ನು ಶೇ.6.5ರಲ್ಲಿ ಇರಿಸಿದೆ. ಇದು ಸತತ 4ನೇ ಬಾರಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮುಂದಿನ ಎಂಪಿಸಿ ಸಭೆಯನ್ನು ಡಿಸೆಂಬರ್ ಆರಂಭದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಭಾರತದಲ್ಲಿ ಫಿನ್ಟೆಕ್ ಕ್ರಾಂತಿಯಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅಭೂತಪೂರ್ವ ಪಾತ್ರವನ್ನು ವಹಿಸಿದೆ ಎಂದು ದಾಸ್ ಹೇಳಿದ್ದಾರೆ.

ಜಪಾನ್‌ನ ಉದ್ಯಮ ಸಂಸ್ಥೆಯಾದ ಟೋಕಿಯೊ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಲ್ಲಿ ಭಾರತೀಯ ಆರ್ಥಿಕ ಅಧ್ಯಯನ ಸಂಸ್ಥೆಯ ಭಾರತೀಯ ಆರ್ಥಿಕತೆ ಕುರಿತು ವಿಚಾರ ಸಂಕಿರಣ ಉದ್ದೇಶಿಸಿ ಮಾತನಾಡಿದ ದಾಸ್, ‘ಇದರ ಯಶೋಗಾಥೆ ನಿಜಕ್ಕೂ ಅಂತಾರಾಷ್ಟ್ರೀಯ ಮಾದರಿಯಾಗಿದೆ’ ಎಂದರು. 'ಮೊಬೈಲ್ ಅಪ್ಲಿಕೇಶನ್‌ಗಳ' ಮೂಲಕ ಬ್ಯಾಂಕ್ ಖಾತೆಗಳ ನಡುವೆ ತ್ವರಿತವಾಗಿ ಹಣ ವರ್ಗಾಯಿಸುವ ಸಾಮರ್ಥ್ಯವು ಜನರು ಡಿಜಿಟಲ್ ವಹಿವಾಟು ನಡೆಸುವ ವಿಧಾನವನ್ನು ಬದಲಾಯಿಸಿದೆ. ಇದಲ್ಲದೆ ಯುಪಿಐನ್ನು ಇತರ ದೇಶಗಳ ವೇಗದ ಪಾವತಿ ವ್ಯವಸ್ಥೆಗಳೊಂದಿಗೆ ಜೋಡಿಸುವ ಕೆಲಸವೂ ನಡೆಯುತ್ತಿದೆ’ ಎಂದು ಹೇಳಿದ್ದಾರೆ. "ಭಾರತ ಮತ್ತು ಜಪಾನ್‌ನ ವೇಗದ ಪಾವತಿ ವ್ಯವಸ್ಥೆಗಳನ್ನು ಲಿಂಕ್ ಮಾಡುವ ಸಾಧ್ಯತೆಯನ್ನು ಫಿನ್‌ಟೆಕ್ ನಿಯಂತ್ರಿಸಲು ಮತ್ತು ಗಡಿಯಾಚೆಗಿನ ಪಾವತಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಅಗ್ಗವಾಗಿಸಲು ಅನ್ವೇಷಿಸಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಆರ್ಥಿಕತೆಯ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಮಾತನಾಡಿದ ದಾಸ್, ‘ಇತ್ತೀಚಿನ ವರ್ಷಗಳಲ್ಲಿ ಏರಿಳಿತಗಳ ನಡುವೆಯೂ ಅದು ಸುಗಮವಾಗಿ ಬೆಳೆದಿರುವುದು 'ತೃಪ್ತಿಯ ವಿಷಯ' ಎಂದು ಹೇಳಿದ್ದಾರೆ. “ನೀತಿ ಕ್ರಮಗಳು ಅವುಗಳ ಅಂತರ್ಗತ ಶಕ್ತಿ ಮತ್ತು ಬುದ್ಧಿವಂತಿಕೆಯೊಂದಿಗೆ, ಬೆಳವಣಿಗೆಗೆ ಆವೇಗ ಮತ್ತು ಶಕ್ತಿಯನ್ನು ನೀಡುತ್ತಿವೆ. ಜೊತೆಗೆ ಹಣದುಬ್ಬರವೂ ನಿಯಂತ್ರಣಕ್ಕೆ ಬರುತ್ತಿದೆ. ಚಿಂತನಶೀಲ ಕ್ರಮಗಳು ಮತ್ತು ಸೂಕ್ತವಾದ ವಿತ್ತೀಯ ಮತ್ತು ಹಣಕಾಸಿನ ನೀತಿಗಳ ಆಧಾರದ ಮೇಲೆ ಸಾಂಕ್ರಾಮಿಕ ಅವಧಿಯಿಂದಲೂ ನಮ್ಮ ಆರ್ಥಿಕ ಕಾರ್ಯಕ್ಷಮತೆ ಉತ್ತಮವಾಗಿದೆ. ಆದರೆ ಪ್ರಸ್ತುತ ಅನಿಶ್ಚಿತ ವಾತಾವರಣದಲ್ಲಿ ತೃಪ್ತಿಗೆ ಯಾವುದೇ ಅವಕಾಶವಿಲ್ಲ’ವೆಂದು ಅವರು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link