Mallika Sherawat: ತನ್ನ ಮೊದಲ ಸಿನಿಮಾದಲ್ಲಿಯೇ 21 ಕಿಸ್ ಕೊಟ್ಟಿದ್ದ ಆ ಬಾಲಿವುಡ್ ಸುಂದರಿ ಈಗ ಏನ್ಮಾಡ್ತಿದ್ದಾರೆ?
ಬಾಲಿವುಡ್‌ನ ಬೋಲ್ಡ್ ಮತ್ತು ಗ್ಲಾಮರಸ್ ನಟಿಯರ ಪಟ್ಟಿಯಲ್ಲಿರುವ ಮಲ್ಲಿಕಾ ಶೆರಾವತ್ ಯಾರಿಗೆ ನೆನಪಿಲ್ಲ ಹೇಳಿ. ಈಕೆಯ ಮೂಲ ಹೆಸರು ರೀಮಾ ಲಂಬಾ. ಚೊಚ್ಚಲ ಸಿನಿಮಾದಿಂದಲೇ ಸುದ್ದಿ ಮಾಡಿದ್ದ ಮಲ್ಲಿಕಾ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ಕಣ್ಮರೆಯಾದರು.
ಮಲ್ಲಿಕಾ ಶೆರಾವತ್ 2003 ರಲ್ಲಿ ನಿರ್ದೇಶಕ ಗೋವಿಂದ್ ಮೆನನ್ ಅವರ 'ಖ್ವಾಹಿಶ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಚಿತ್ರದಲ್ಲೇ 21 ಕಿಸ್ ಕೊಟ್ಟು ಸಂಚಲನ ಮೂಡಿಸಿದ್ದರು. ಆದರೆ ಈ ಚಿತ್ರದಿಂದ ಅವರಿಗೆ ಖ್ಯಾತಿ ಸಿಗಲಿಲ್ಲ. ಆ ಬಳಿಕ 2004 ರಲ್ಲಿ ನಿರ್ದೇಶಕ ಅನುರಾಗ್ ಬಸು ಅವರ 'ಮರ್ಡರ್' ಚಿತ್ರದಲ್ಲಿ ನಟಿಸಿ ಮನ್ನಣೆ ಪಡೆದರು.
ಹರಿಯಾಣ ಮೂಲದ ಮಲ್ಲಿಕಾ ಶೆರಾವತ್, ಸಿನಿಮಾಗಳಿಗಾಗಿ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಬಾಲಿವುಡ್’ಗೆ ಎಂಟ್ರಿ ಕೊಡುವ ಮೊದಲೇ ಮಲ್ಲಿಕಾ ಮದುವೆಯಾಗಿದ್ದರು ಎಂದು ಹೇಳಲಾಗುತ್ತದೆ.
ಮಲ್ಲಿಕಾ ಪ್ರೇಮ ವಿವಾಹ ಮಾಡಿಕೊಂಡಿದ್ದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಅವರು ಏರ್ ಹೊಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಪೈಲಟ್ ಕರಣ್ ಸಿಂಗ್ ಗಿಲ್ ಅವರನ್ನು ಭೇಟಿಯಾಗಿ, ಬಳಿಕ ಸ್ನೇಹ ಬೆಳೆಸಿ, ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು.
ಆದರೆ ಇಬ್ಬರ ಈ ದಾಂಪತ್ಯ ಬಹಳ ದಿನ ಉಳಿಯಲಿಲ್ಲ. ಒಂದು ವರ್ಷದ ನಂತರ, ಮಲ್ಲಿಕಾ ಮತ್ತು ಕರಣ್ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ನಂತರ ಇಬ್ಬರೂ ವಿಚ್ಛೇದನ ಪಡೆದರು. ಆದರೆ, ಸ್ವತಃ ಮಲ್ಲಿಕಾ ಈ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಅಂತಹ ಪ್ರಶ್ನೆಗಳಿಗೆ ಅವರು ಎಂದಿಗೂ ಉತ್ತರವನ್ನು ನೀಡಲಿಲ್ಲ.
ಮಲ್ಲಿಕಾ ಸಂದರ್ಶನವೊಂದರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ಬಗ್ಗೆ ಮಾತನಾಡಿದ್ದರು. “ನಾನು ಜಗತ್ತನ್ನು ಗೆಲ್ಲಬಹುದೆಂದು ಭಾವಿಸಿದೆ. ನಾನು ಹರಿಯಾಣದ ಜಾಟ್ ಮನಸ್ಥಿತಿಗೆ ಸೇರಿದವಳು. ನಾನು ಜಗಳ ಮಾಡಿ ಸೂಟ್’ಕೇಸ್ ಕಟ್ಟಿಕೊಂಡು ಬಾಂಬೆಗೆ ಹೊರಟೆ. ಅದೃಷ್ಟವಶಾತ್ ನನ್ನ ಅದೃಷ್ಟ ನನಗೆ ಒಲವು ತೋರಿತು. ನಾನು ಅಮೇರಿಕಾಕ್ಕೆ ಹೋದಾಗಲೂ ಅದೇ ಮನೋಭಾವನೆ ಹೊಂದಿದ್ದೆ. ನನ್ನ ಈ ನಿರ್ಧಾರವೂ ಚೆನ್ನಾಗಿತ್ತು. ಅಲ್ಲಿ ಎರಡು ಬಾರಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿಯಾಗಿದ್ದೆ” ಎಂದು ಹೇಳಿದ್ದಾರೆ.
ಮಲ್ಲಿಕಾ ಹರಿಯಾಣದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸೇಠ್ ಛಜ್ಜು ರಾಮ್ ಅವರ ಕುಟುಂಬದಲ್ಲಿ ಜನಿಸಿದವರು. ಮಲ್ಲಿಕಾ ಅವರ ತಂದೆ ಮುಖೇಶ್ ಲಂಬಾ ಅವರು ಸಂದರ್ಶನವೊಂದರಲ್ಲಿ “ನಾನು ಅವಳನ್ನು ಐಎಎಸ್ ಮಾಡಲು ಬಯಸಿದ್ದೆ. ಆದರೆ ಅವಳು ನಟಿಸಲು ಬಯಸಿದ್ದಳು. ಇದರಿಂದ ಕೋಪಗೊಂಡ ನಾನು ನಟಿಸುವುದು ನನಗೆ ಇಷ್ಟವಿಲ್ಲ, ನನ್ನ ಉಪನಾಮ ಲಂಬಾವನ್ನು ಎಂದು ಕೈಬಿಡುವಂತೆ ಹೇಳಿದೆ” ಎಂದು ಹೇಳಿದ್ದರು.
ಮಲ್ಲಿಕಾ ಹಾಲಿವುಡ್’ನಂತೆಯೇ ಬಾಲಿವುಡ್‌ನಲ್ಲಿಯೂ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಮಲ್ಲಿಕಾ ಕೂಡ ಜಾಕಿ ಚಾನ್ ಜೊತೆ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಅವರು 'ಕಿಸ್ ಕಿಸ್ ಕಿ ಕಿಸ್ಮತ್', 'ಮರ್ಡರ್', 'ಪ್ಯಾರ್ ಕೆ ಸೈಡ್ ಎಫೆಕ್ಟ್ಸ್', 'ಶಾದಿ ಸೆ ಪೆಹ್ಲೆ', 'ವೆಲ್ಕಮ್', 'ಹಿಸ್ಸ್', 'ಡಬಲ್ ಧಮಾಲ್' ಮತ್ತು 'ಬಿನ್ ಬುಲಾಯೆ ಬರಾತಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಲ್ಲಿಕಾ ಕೊನೆಯದಾಗಿ Rk/RKay ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ಗುಲಾಬೋ ಪಾತ್ರವನ್ನು ನಿರ್ವಹಿಸಿದ್ದಾರೆ.