ಮದುವೆಯಾಗ್ತಿದ್ದೇನೆ... ಎಂದು ಫುಲ್‌ ಖುಷಿಯಾಗಿ ಡೇಟ್‌ ಅನೌನ್ಸ್‌ ಮಾಡಿದ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು?

Sun, 27 Oct 2024-6:43 pm,

ಕನ್ನಡದ ಹೆಸರಾಂತ ನಿರೂಪಕಿ ಅನುಶ್ರೀ ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್‌ನಲ್ಲಿ ತಾನು ಮುಂದಿನ ವರ್ಷ ಮದುವೆಯಾಗುತ್ತಿದ್ದೇನೆ ಎಂದು ಅನೌನ್ಸ್‌ ಮಾಡಿದ್ದಾರೆ. ಈ ಸಿಹಿಸುದ್ದಿ ಕೇಳಿ ಅವರ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರಲ್ಲಿ ಅನುಶ್ರೀ ಕೂಡ ಒಬ್ಬರು. ಒಂದಷ್ಟು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಇವರು,  ಮುರಳಿ ಮೀಟ್ಸ್ ಮೀರಾ ಚಿತ್ರಕ್ಕಾಗಿ ಅತ್ಯುತ್ತಮ ಡಬ್ಬಿಂಗ್ ಕಲಾವಿದೆ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.

 

ಅನುಶ್ರೀ ಹುಟ್ಟಿದ್ದು ಮಂಗಳೂರಿನ ಸುರತ್ಕಲ್‌ನಲ್ಲಿ. ಸಂಪತ್ ಮತ್ತು ಶಶಿಕಲಾ ದಂಪತಿ ಮಗಳಾಗಿ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದ ಅನುಶ್ರೀ ಇದೀಗ ತಮ್ಮ ಮಾತಿನ ಶೈಲಿಯಿಂದಲೇ ಕರುನಾಡ ಮನೆ ಮಗಳಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಅನುಶ್ರೀ ಅವರಿಗೆ ಅಭಿಜೀತ್ ಎಂಬ ಕಿರಿಯ ಸಹೋದರನಿದ್ದಾನೆ.

 

ಬಾಲ್ಯದಲ್ಲಿಯೇ ಇವರನ್ನು ಬಿಟ್ಟು ಹೋದ ತಂದೆಯ ಬಗ್ಗೆ ಅನುಶ್ರೀ ಮಾತನಾಡುವುದೇ ಕಡಿಮೆ. ಅವರ ಸಂಪರ್ಕದಲ್ಲೂ ಇಲ್ಲ ಎಂದು ಕೆಲವೊಂದು ಕಡೆ ಅನುಶ್ರೀಯವರೇ ಹೇಳಿದ್ದಾರೆ.

 

ಅನುಶ್ರೀ ತಮ್ಮ ವೃತ್ತಿಜೀವನವನ್ನು ಮಂಗಳೂರಿನಲ್ಲಿರುವ ನಮ್ಮ ಟಿವಿ ವಾಹಿನಿಯಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಫೋನ್-ಇನ್ ಸಂಗೀತ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಪ್ರಾರಂಭಿಸಿದರು. ಅದಾದ ನಂತರ ಈಟಿವಿ ಕನ್ನಡದ ದೂರದರ್ಶನ ಕಾರ್ಯಕ್ರಮ ಡಿಮ್ಯಾಂಡಪ್ಪೋ ಡಿಮ್ಯಾಂಡುನಲ್ಲಿ ನಿರೂಪಕಿಯಾದರು. ಈ ಬಳಿಕ ಅನುಶ್ರೀ ಜನಪ್ರಿಯತೆ ಹೆಚ್ಚಿತು.

 

ಇನ್ನು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 1 ರಲ್ಲೂ ಅನುಶ್ರೀ ಭಾಗವಹಿಸಿ 80 ದಿನಗಳನ್ನು ಪೂರೈಸಿದ್ದರು. ಸುವರ್ಣ ಫಿಲ್ಮ್ ಅವಾರ್ಡ್ಸ್, ಫಿಲ್ಮ್‌ ಫೇರ್ ಅವಾರ್ಡ್ಸ್, ಟಿವಿ9 ಫಿಲ್ಮ್ ಅವಾರ್ಡ್ಸ್, ಝೀ ಮ್ಯೂಸಿಕ್ ಅವಾರ್ಡ್ಸ್, ಸೈಮಾ ಅವಾರ್ಡ್ಸ್, ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಂತಹ ಹಲವಾರು ಸ್ಟೇಜ್ ಶೋಗಳನ್ನು ಅನುಶ್ರೀ ನಿರೂಪಿಸಿದ್ದಾರೆ. ಅಷ್ಟೇ ಅಲ್ಲದೆ, ಕಾಮಿಡಿ ಕಿಲಾಡಿಗಳು, ಟ್ವೆಂಟಿ-ಟ್ವೆಂಟಿ ಕಾಮಿಡಿ ಕಪ್, ಕುಣಿಯೋಣ ಬಾರಾ, ಸರಿಗಮಪ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

 

ಅಂದಹಾಗೆ ಕೊನೆಗೂ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿರುವ ಆಂಕರ್‌ ಅನುಶ್ರೀ ಅವರ ನಿಜವಾದ ವಯಸ್ಸು 36 ವರ್ಷ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link