ಗಂಡ-ಹೆಂಡತಿ ನಡುವೆ ವಯಸ್ಸಿನ ಅಂತರ ಎಷ್ಟಿದ್ದರೆ ಉತ್ತಮ? ಇಷ್ಟು ವ್ಯತ್ಯಾಸವಿದ್ದರಷ್ಟೇ ಜೀವನ ಸುಖಕರವಾಗಿರುತ್ತೆ!!

Tue, 17 Dec 2024-2:27 pm,

ಹುಡುಗಿಯ ವಯಸ್ಸು ಹೆಚ್ಚು ಇರುವ ಜೋಡಿಗಳನ್ನ ನೋಡಿದಾಗ ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಬರುವುದು ಸಹಜ. ಕ್ರಿಕೆಟ್‌ ದೇವರು ಖ್ಯಾತಿಯ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್‌ಗಿಂತಲೂ ಅವರ ಪತ್ನಿ ಅಂಜಲಿ ದೊಡ್ಡವರು, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ನಿಕ್ ಜೋನಾಸ್‌ಗಿಂತ 10 ವರ್ಷ ದೊಡ್ಡವರು. ದಂಪತಿ ನಡುವೆ ಇಷ್ಟು ದೊಡ್ಡ ವಯಸ್ಸಿನ ವ್ಯತ್ಯಾಸವಿದೆಯೇ ಅಥವಾ ಇಲ್ಲವೇ ಅಂತಾ ಜನರು ಆಶ್ಚರ್ಯ ಪಡುತ್ತಾರೆ. ನೀವೂ ಈ ರೀತಿಯ ಗೊಂದಲದಲ್ಲಿದ್ದರೆ ಚಾಣಕ್ಯ ನೀತಿಯ ಬಗ್ಗೆ ತಿಳಿದುಕೊಳ್ಳಬೇಕು. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಜನರು ಹೆಚ್ಚಾಗಿ ಆಚಾರ್ಯ ಚಾಣಕ್ಯರ ಸಲಹೆಗಳನ್ನು ಅನುಸರಿಸುತ್ತಾರೆ. ಚಾಣಕ್ಯ ನೀತಿಯಲ್ಲಿ ಪತಿ-ಪತ್ನಿಯರ ನಡುವಿನ ನಿಖರ ವಯಸ್ಸಿನ ವ್ಯತ್ಯಾಸ ತಿಳಿಸಲಾಗಿದೆ.

ಚಾಣಕ್ಯರ ನೀತಿಯ ಪ್ರಕಾರ, ಪತಿ-ಪತ್ನಿಯ ನಡುವಿನ ವಯಸ್ಸಿನ ವ್ಯತ್ಯಾಸವು ಕಡಿಮೆ ಇರಬೇಕು. 3 ರಿಂದ 5 ವರ್ಷಗಳ ಅಂತರ ಉತ್ತಮವೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ, ಕಡಿಮೆ ವಯಸ್ಸಿನ ವ್ಯತ್ಯಾಸದಿಂದ ಪತಿ-ಪತ್ನಿ ಪರಸ್ಪರ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಅವರ ದಾಂಪತ್ಯ ಜೀವನವೂ ಸುಖಮಯವಾಗಿರುತ್ತದೆ. ಹೀಗಾಗಿ ಮದುವೆಗೆ ವಯಸ್ಸಿನ ವ್ಯತ್ಯಾಸವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಆಚಾರ್ಯ ಚಾಣಕ್ಯರ ಪ್ರಕಾರ, ಪತಿ-ಪತ್ನಿಯರ ನಡುವಿನ ಸಂಬಂಧವು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಬಹಳ ಮುಖ್ಯ. ಗಂಡ-ಹೆಂಡತಿಯ ನಡುವಿನ ದೊಡ್ಡ ವಯಸ್ಸಿನ ವ್ಯತ್ಯಾಸವು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದ ಜಗಳ ಹೆಚ್ಚಾಗುತ್ತದೆ. ದಿನನಿತ್ಯದ ಸಂಘರ್ಷದಿಂದ ಇಬ್ಬರ ಸಂಬಂಧ ದುರ್ಬಲವಾಗುತ್ತದೆ. ಬಳಿಕ ದಂಪತಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವುದಿಲ್ಲವಂತೆ.

ಚಾಣಕ್ಯ ನೀತಿಯಲ್ಲಿ ಹುಡುಗ-ಹುಡುಗಿಯ ವಯಸ್ಸನ್ನು ಸಹ ಉಲ್ಲೇಖಿಸಲಾಗಿದೆ. ಅದರ ಪ್ರಕಾರ, ಹಿರಿಯ ಹುಡುಗ ಹೆಚ್ಚು ಕಿರಿಯ ಹುಡುಗಿಯನ್ನು ಮದುವೆಯಾಗಬಾರದು ಅಂತಾ ಹೇಳಲಾಗಿದೆ. ಹೀಗೆ ಮಾಡಿದ್ರೆ ಅವರ ದಾಂಪತ್ಯ ಜೀವನ ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ನೀವು 3 ರಿಂದ 5 ವರ್ಷ ವ್ಯತ್ಯಾಸದ ಪ್ರಕಾರ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಬೇಕು. ಇದರಿಂದ ಮದುವೆಯ ನಂತರ ಯಾವುದೇ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಚಾಣಕ್ಯ ನೀತಿಯ ಪ್ರಕಾರ, ವಯಸ್ಸಾದ ವ್ಯಕ್ತಿಯನ್ನು ಪ್ರೀತಿಸಿದರೆ ಏನು ಮಾಡಬೇಕು? ಅನ್ನೋದರ ಬಗ್ಗೆಯೂ ತಿಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ಮದುವೆಗೆ ಮುಂಚೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಸುಲಭವಾಗುತ್ತದೆ. ವಯಸ್ಸಿನ ವ್ಯತ್ಯಾಸವು ನಿಮ್ಮ ಸಂಬಂಧದಲ್ಲಿ ಉದ್ವಿಗ್ನತೆ ತರುತ್ತಿದೆಯೋ ಇಲ್ಲವೋ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ. ನಿಮ್ಮ ನಡುವೆ ಉತ್ತಮ ಬಾಂಧವ್ಯವಿದ್ದರೆ ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗುವುದು ತಪ್ಪು ನಿರ್ಧಾರ ಎನಿಸುವುದಿಲ್ಲ. ಹೀಗಾಗಿ ಮದುವೆಗೂ ಮೊದಲೇ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link