ಇದು ಅನ್ನವೋ…? ಚಿನ್ನವೋ…? ವಿರಾಟ್ ಕೊಹ್ಲಿ ಸೇವಿಸುವ ಅಕ್ಕಿ ಬೆಲೆ 1 ಕೆಜಿಗೆ ಎಷ್ಟು ಗೊತ್ತಾ? ತಿಳಿದರೆ ಹೌಹಾರೋದು ಗ್ಯಾರಂಟಿ
ಇಂಡಿಯನ್ ಎಕ್ಸ್’ಪ್ರೆಸ್ ಜೊತೆಗಿನ ವಿಶೇಷ ಸಂವಾದದಲ್ಲಿ ಸ್ಟಾರ್ ಕ್ರಿಕೆಟಿಗ ತಮ್ಮ ಫಿಟ್ನೆಸ್ ಬಗ್ಗೆ ಮಾತನಾಡಿದ್ದಾರೆ.
ಡೈರಿ ಉತ್ಪನ್ನಗಳು ಅಂದರೆ ಹಾಲು, ಮೊಸರು, ಬೆಣ್ಣೆಗಳಂತಹ ಆಹಾರವನ್ನು ವಿರಾಟ್ ಸೇವಿಸುವುದಿಲ್ಲ. ಅಷ್ಟೇ ಅಲ್ಲದೆ, ಯಾವತ್ತೂ ಫುಲ್ ಮೀಲ್ ತಿನ್ನೋದೆ ಇಲ್ಲವಂತೆ. ಅಂದರೆ ಹಸಿವಿನ ಗರಿಷ್ಠ 90 ಪ್ರತಿಶತವಷ್ಟೇ ಊಟ ಮಾಡುತ್ತಾರೆ ಎಂದು ಸ್ವತಃ ಅವರೇ ಹೇಳಿದ್ದಾರೆ.
ಇನ್ನು ವಿರಾಟ್, ಸಾಮಾನ್ಯವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಚಪಾತಿ-ರೊಟ್ಟಿಯನ್ನು ಸೇವಿಸೋದಿಲ್ಲ. ಬದಲಾಗಿ ಬಾದಾಮಿಯನ್ನು ಕೆಲವು ವಿಶೇಷ ಧಾನ್ಯಗಳ ಜೊತೆಗೆ ಬೆರೆಸಿ ತಯಾರಿಸಿದ ಹಿಟ್ಟಿನ ಚಪಾತಿ ತಿನ್ನುತ್ತಾರಂತೆ.
ಆನ್‌ಲೈನ್ ದಿನಸಿ ಶಾಪಿಂಗ್ ವೆಬ್‌ಸೈಟ್’ನಲ್ಲಿ ಬಾದಾಮಿ ಹಿಟ್ಟಿನ ದರ ಕೆಜಿಗೆ 700 ರಿಂದ 1200 ರೂ. ಇದೆ. ಅಂದಹಾಗೆ ಆರೋಗ್ಯ ಮತ್ತು ಪೌಷ್ಟಿಕಾಂಶ ತಜ್ಞರು ಬಾದಾಮಿ ಹಿಟ್ಟನ್ನು ಅತ್ಯುತ್ತಮ ಹಿಟ್ಟು ಎಂದು ಪರಿಗಣಿಸುತ್ತಾರೆ. ಇದರಲ್ಲಿ ಕಾರ್ಬೋಹೈಡ್ರೇಟ್’ಗಳ ಪ್ರಮಾಣ ತುಂಬಾ ಕಡಿಮೆ. ಇದರೊಂದಿಗೆ ಪೌಷ್ಟಿಕಾಂಶದ ಮೌಲ್ಯವು ಹೆಚ್ಚು. ಇದರಿಂದ ತಯಾರಿಸಿದ ರೊಟ್ಟಿಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಉತ್ತೇಜಿಸುತ್ತದೆ.
ಇನ್ನು ಸಾಮಾನ್ಯ ಅನ್ನದ ಬದಲು ಸ್ಪೆಷಲ್ ಅನ್ನವನ್ನು ಕೊಹ್ಲಿ ತಿನ್ನುತ್ತಾರೆ. ಈ ಅಕ್ಕಿಯನ್ನು ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಗ್ಲುಟನ್ ಮುಕ್ತವಾಗಿರುವ ಈ ಅಕ್ಕಿಯು ಕಾರ್ಬೋಹೈಡ್ರೇಟ್’ಗಳಲ್ಲಿ ಕಡಿಮೆ ಮತ್ತು ಸರಳವಾದ ರುಚಿಯನ್ನು ಹೊಂದಿರುತ್ತದೆ. ಈ ಅಕ್ಕಿಯ ಬೆಲೆ ಕೆಜಿಗೆ 400 ರಿಂದ 500 ರೂ.