ವಿಶ್ವಕಪ್’ನಲ್ಲಿ ಬೌಲಿಂಗ್’ನಿಂದಲೇ ಧೂಳೆಬ್ಬಿಸಿದ್ದ ಮೊಹಮ್ಮದ್ ಶಮಿ ಎಷ್ಟು ಕೋಟಿ ಆಸ್ತಿಯ ವಾರಸುದಾರ ಗೊತ್ತಾ?
ಮೊಹಮ್ಮದ್ ಶಮಿ ಭಾರತ ಕ್ರಿಕೆಟ್ ತಂಡವನ್ನು ವಿಶ್ವಕಪ್ ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂದಹಾಗೆ ನಾವಿಂದು ಈ ವರದಿಯಲ್ಲಿ ಮೊಹಮ್ಮದ್ ಶಮಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ವೆಬ್‌ಸೈಟ್ cknowledge.com ಪ್ರಕಾರ, ಮೊಹಮ್ಮದ್ ಶಮಿ ಅವರ ಆಸ್ತಿ ಮೌಲ್ಯವು ಸುಮಾರು 55 ಕೋಟಿ ರೂ.ಗೆ ಏರಿದೆ. 2022 ರಲ್ಲಿ ಸುಮಾರು 45 ಕೋಟಿ ರೂ. ಇದ್ದ ಆದಾಯ, ಇಂದು 55 ಕೋಟಿಗೆ ಏರಿದೆ. ಇನ್ನು ಶಮಿ ಅವರ ವಾರ್ಷಿಕ ಆದಾಯ 8 ಕೋಟಿ ರೂ.ಗಿಂತ ಹೆಚ್ಚಿದ್ದು, ತಿಂಗಳ ಆದಾಯ 55 ಲಕ್ಷ ರೂ. ಇದೆ.
ಮೊಹಮ್ಮದ್ ಶಮಿ ಐಪಿಎಲ್ ಮತ್ತು ಜಾಹೀರಾತುಗಳಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ 6.25 ಕೋಟಿ ರೂ.ಗೆ ಖರೀದಿಸಿತ್ತು. ಶಮಿಯನ್ನು ಬಿಸಿಸಿಐನ ಎ ಗ್ರೇಡ್’ಗೆ ಸೇರಿಸಲಾಗಿದ್ದು, ಅಲ್ಲಿಂದ ವಾರ್ಷಿಕ 5 ಕೋಟಿ ರೂ. ಪಡೆಯುತ್ತಾರೆ. ಮೊಹಮ್ಮದ್ ಶಮಿ ಟೆಸ್ಟ್ ಪಂದ್ಯವನ್ನು ಆಡುವುದಕ್ಕಾಗಿ 15 ಲಕ್ಷ ರೂಪಾಯಿ, ODI ಪಂದ್ಯಗಳಿಗೆ 6 ಲಕ್ಷ ರೂಪಾಯಿ ಮತ್ತು ಟಿ20 ಪಂದ್ಯವಾಡಲು 3 ಲಕ್ಷ ರೂ. ಪಡೆಯುತ್ತಾರೆ. ಇನ್ನು ವೆಬ್‌ಸೈಟ್ ಪ್ರಕಾರ, ಜಾಹೀರಾತುಗಳಿಂದ ಸುಮಾರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ದೆಹಲಿಯಿಂದ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಅಮ್ರೋಹಾದ ಸಹಸ್ಪುರ್ ಗ್ರಾಮದಲ್ಲಿ ಮೊಹಮ್ಮದ್ ಶಮಿ ಅವರ ದೊಡ್ಡ ಫಾರ್ಮ್ ಹೌಸ್ ಇದೆ. ಈ ಫಾರ್ಮ್‌ಹೌಸ್’ನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.
33 ವರ್ಷದ ಬಲಗೈ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಕಾರುಗಳೆಂದರೆ ತುಂಬಾ ಇಷ್ಟ. ಶಮಿ ಬಳಿ ಟೊಯೊಟಾ ಫಾರ್ಚುನರ್, ಬಿಎಂಡಬ್ಲ್ಯು 5 ಸಿರೀಸ್ ಮತ್ತು ಆಡಿಯಂತಹ ದುಬಾರಿ ಕಾರುಗಳಿವೆ. ಜಾಗ್ವಾರ್ ಎಫ್-ಟೈಪ್ ಸ್ಪೋರ್ಟ್ಸ್ ಕಾರ್ ಕೂಡ ಇದೆ. ಇದರ ಬೆಲೆ ಸುಮಾರು 1 ಕೋಟಿ ರೂ. ಕಳೆದ ವರ್ಷ ಈ ಕಾರನ್ನು ಖರೀದಿಸಿದ್ದರು. ಮೊಹಮ್ಮದ್ ಶಮಿ ಕೂಡ ರಿಯಲ್ ಎಸ್ಟೇಟ್ ನಲ್ಲಿ ಸುಮಾರು 12 ರಿಂದ 15 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.
ಮೊಹಮ್ಮದ್ ಶಮಿ ವಿಶ್ವಕಪ್ ಇತಿಹಾಸದಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಮೊಹಮ್ಮದ್ ಶಮಿ. ಇವರು 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದರೆ, 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 24 ವಿಕೆಟ್‌ಗಳನ್ನು ಪಡೆದಿದ್ದಾರೆ.