ಅಮೆರಿಕದಲ್ಲಿರುವ ಪುನೀತ್ ರಾಜ್‌ಕುಮಾರ್ ಮಗಳು ಧೃತಿ ನಿಜವಾದ ವಯಸ್ಸೆಷ್ಟು ಗೊತ್ತಾ?
)
ನಟ ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಮಗಳು ಧೃತಿ. ಇವರು ವಿದೇಶದಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದೇಶದಲ್ಲಿರುವ ಧೃತಿ ನಿಜವಾದ ವಯಸ್ಸೆಷ್ಟು ಗೊತ್ತಾ?
)
ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಶಿಕ್ಷಣ ಸಂಸ್ಥೆಯಲ್ಲಿ ಧೃತಿ ಪುನೀತ್ ರಾಜ್‌ಕುಮಾರ್ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇಲುಸ್ಟ್ರೇಟರ್ ಮತ್ತು ಡಿಸೈನರ್ ಕೋರ್ಸ್‌ನ್ನು ಮಾಡುತ್ತಿದ್ದಾರೆ.
)
ಅಮೆರಿಕದ ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ವಿಲೇಜ್ ಬಳಿಯಿರುವ ಪಾರ್ಸನ್ಸ್ ಸ್ಕೂಲ್ ನಲ್ಲಿ ಓದುತ್ತಿರುವ ಧೃತಿ ಆಗಾಗೆ ತಮ್ಮ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ.
ಧೃತಿ ಮೈನಸ್ 8 ಡಿಗ್ರಿಯ ತೀವ್ರ ಚಳಿಯಲ್ಲಿ ಬಿಂದಾಸ್ ಆಗಿ ಪೋಸ್ ಕೊಟ್ಟಿದ್ದರು. ವಿದೇಶಿ ಸುತ್ತಾಟದ ಕ್ಷಣವನ್ನೂ ಆಗಾಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಧೃತಿ ಶೇರ್ ಮಾಡುತ್ತಾರೆ.
ಧೃತಿ ಪುನೀತ್ ರಾಜ್‌ಕುಮಾರ್ ಅವರಿಗೆ ಈಗ 21 ವರ್ಷ ವಯಸ್ಸು. ಬೆಂಗಳೂರಿನ ಪ್ರತಿಷ್ಠಿತ ಸೋಫಿಯಾ ಹೈಸ್ಕೂಲ್‌ನಲ್ಲಿ ಧೃತಿ ಶಾಲಾ ಶಿಕ್ಷಣ ಪಡೆದಿದ್ದಾರೆ.