ಬಾಯ್ಸ್‌ ಅಲರ್ಟ್‌..!! 30ರ ನಂತ್ರ ಮದುವೆಯಾದ್ರೆ ʼಆʼ ವಿಚಾರದಲ್ಲಿ ಸಮಸ್ಯೆ ಉದ್ಭವಿಸುತ್ತೆ..!

Sat, 23 Nov 2024-7:01 pm,

ಪ್ರಸ್ತುತ ಪೀಳಿಗೆಯ ಜನರು ಹೆಚ್ಚು ವೃತ್ತಿ ಆಧಾರಿತವಾಗಿದ್ದಾರೆ. ಇಂದಿನ ಯುವಕರು ವಿದ್ಯಾಭ್ಯಾಸ ಮತ್ತು ಉದ್ಯೋಗದ ಜೊತೆಗೆ ಬಿಡುವಿಲ್ಲದ ಜೀವನಶೈಲಿಯಿಂದ ಮದುವೆಯನ್ನು ವಿಳಂಬ ಮಾಡುತ್ತಿದ್ದಾರೆ. ಮದುವೆಯಾಗುವ ಮನಸ್ಸು ಇದ್ದರೂ ಒಳ್ಳೆಯ ಕೆಲಸ, ಸ್ಥಾನಮಾನ ಸಿಗುವವರೆಗೂ ಕಾಯುತ್ತಾರೆ. ಹೀಗಾಗಿ 35 ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸುತ್ತಾರೆ. ಮದುವೆಯ ನಂತರ ಸಮಸ್ಯೆಗಳಾಗುವ ಬದಲು, ಮದುವೆಗೆ ಮುನ್ನವೇ ಎಚ್ಚರ ವಹಿಸಿ, ಸೆಟಲ್ ಆದ ನಂತರ ಮದುವೆಯಾಗುವುದು ಒಳ್ಳೆಯದು ಎಂದು ಅನೇಕರು ಭಾವಿಸುತ್ತಾರೆ.

ಹಿಂದಿನ ದಿನಗಳಲ್ಲಿ ತಂದೆ ದುಡಿಯುತ್ತಿದ್ದರೆ ಮಾತ್ರ ಮಕ್ಕಳು ಬದುಕುತ್ತಿದ್ದರು. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ತಮ್ಮ ಆಸೆ-ಆಕಾಂಕ್ಷೆ, ಐಷಾರಾಮಿ ಜೀವನಕ್ಕಾಗಿ ಪ್ರತಿಯೊಬ್ಬರೂ ಓಡುತ್ತಿದ್ದಾರೆ. ಪ್ರತಿ ಮನೆಯಲ್ಲೂ ಪ್ರತಿಯೊಬ್ಬ ವ್ಯಕ್ತಿಗೂ ದೊಡ್ಡ ದೊಡ್ಡ ಜವಾಬ್ದಾರಿಗಳಿವೆ. ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ ನಂತರ ಮದುವೆಯಾಗಲು ಬಯಸುತ್ತಿದ್ದಾರೆ. ಇಡೀ ಕುಟುಂಬದ ಜವಾಬ್ದಾರಿ, ಆರ್ಥಿಕವಾಗಿ ಬೆಳೆಯುವುದು, ಮನೆ ಕಟ್ಟುವುದು… ಹೀಗೆ ಜವಾಬ್ದಾರಿಗಳ ಮೂಟೆ ಹೆಗಲು ಏರಿರುತ್ತದೆ. 

ಇಂದು ಅನೇಕರು ಪ್ರೀತಿಯಲ್ಲಿ ಬಿದ್ದು ಸ್ವಲ್ಪ ಕಾಲ ಒಟ್ಟಿಗೆ ವಾಸಿಸುತ್ತಾರೆ, ನಂತರ ತಮ್ಮ ಸಂಬಂಧವನ್ನು ಕೊನೆಗೊಳಿಸುತ್ತಾರೆ. ಇದರಿಂದ ಅನೇಕರು ಖಿನ್ನತೆಗೆ ಒಳಗಾಗಿ ಮದುವೆಯಿಂದ ದೂರ ಉಳಿಯುತ್ತಿದ್ದಾರೆ. ಇಂತಹ ಕಾರಣಗಳಿಂದಲೂ ಮದುವೆ ವಿಳಂಬವಾಗುತ್ತಿದೆ. ಕೆಲವರು ಮದುವೆ, ಸಂಬಂಧ ಮತ್ತು ಸ್ವಾತಂತ್ರ್ಯದ ಭಯದಿಂದ ಮದುವೆಯಿಂದ ದೂರ ಉಳಿಯುತ್ತಿದ್ದಾರೆ. 30 ವರ್ಷಗಳ ನಂತರ ಮದುವೆಯಾಗುವವರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ ಅಂತಾ ಮನಶ್ಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ತಜ್ಞರ ಅಭಿಪ್ರಾಯವಾಗಿದೆ. ಸಾಮಾನ್ಯವಾಗಿ 30 ವರ್ಷದ ನಂತರ ಪ್ರತಿಯೊಬ್ಬರೂ ಜೀವನದಲ್ಲಿ ಹೇಗೆ ನೆಲೆಸಬೇಕು ಮತ್ತು ಹೇಗೆ ಸಂಪಾದಿಸಬೇಕು ಅನ್ನೋದರ ಕಲ್ಪನೆಯನ್ನು ಹೊಂದಿರುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಹೇಗೆ ಮತ್ತು ಜೀವನವನ್ನು ಆನಂದಿಸುವುದು ಹೇಗೆ? ಅನ್ನೋದರ ತಿಳುವಳಿಕೆ ತಕ್ಕಮಟ್ಟಿಗೆ ಇರುತ್ತದೆ. ನೀವು 25 ವರ್ಷಕ್ಕಿಂತ ಮೊದಲು ಅಥವಾ 25 ವರ್ಷದ ನಂತರ ಮದುವೆಯಾದರೆ ಮಕ್ಕಳನ್ನು ಹೊಂದಲು ಇದು ಸರಿಯಾದ ವಯಸ್ಸು ಎಂದು ಹೇಳಲಾಗುತ್ತದೆ. 

ಮದುವೆ ವಿಳಂಬವಾದರೆ ಮಗು ಪ್ರೌಢಾವಸ್ಥೆಯನ್ನು ತಲುಪುವ ಹೊತ್ತಿಗೆ ಪೋಷಕರು ವಯಸ್ಸಾಗುವ ಅಪಾಯವೂ ಇರುತ್ತದೆ. ಇದು ನಿಮಗೆ ಮುಂದೆ ಸಮಸ್ಯೆಯಾಗಬಹುದು. ಮದುವೆ ಅವರವರ ಸ್ವಂತ ನಿರ್ಧಾರವಾಗಿರುತ್ತದೆ. ಇದು ಯಾವುದೇ ವ್ಯಕ್ತಿ ಮಾಡುತ್ತಿರುವ ವೃತ್ತಿ, ಕೆಲಸ ಮತ್ತು ಇತರ ಕಾರ್ಯಗಳನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ತಡವಾಗಿ ಮದುವೆಯಾದರೆ ಈ ತೊಂದರೆಗಳು ಅನಿವಾರ್ಯವೆಂದು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಜೀನವದಲ್ಲಿ ಪ್ರತಿಯೊಂದು ಸಮಸ್ಯೆಯನ್ನು ಸರಿಯಾಗಿ ನಿಭಾಯಿಸುವ ಕಲೆ ಹೊಂದಿರುವ ವ್ಯಕ್ತಿ ಈ ಮದುವೆ ಮತ್ತು ಸಂಸಾರವೆಂಬ ಸಾಗರದಲ್ಲಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗುತ್ತಾನೆ. ಇಲ್ಲದಿದ್ದರೆ ಆತನ ಬಾಳು ತುಂಬಾ ಸಂಕಷ್ಟದಿಂದ ಕೂಡಿರುತ್ತದೆ ಅಂತಾ ಅವರು ಸಲಹೆ ನೀಡಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link