IPL 2024: ಚೊಚ್ಚಲ IPLನಲ್ಲಿ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ ಪಡೆದ ಸಂಬಳವೆಷ್ಟು ಗೊತ್ತಾ? ಈಗೆಷ್ಟಾಗಿದೆ?
ಐಪಿಎಲ್ ಪ್ರತಿ ಋತುವಿನಲ್ಲಿ ಫ್ರಾಂಚೈಸಿಯನ್ನು ಪ್ರತಿನಿಧಿಸುವ ಏಕೈಕ ಆಟಗಾರ ಕೊಹ್ಲಿ. ವಿರಾಟ್ ಕೊಹ್ಲಿ ಮೊದಲ IPLನಲ್ಲಿ ಪಡೆದ ಸಂಭಾವನೆ 12 ಲಕ್ಷ ರೂ.
2008 ರಿಂದ 2010 ರವರೆಗೆ ಪ್ರತಿ ವರ್ಷ 12 ಲಕ್ಷ ರೂ. ನೀಡಲಾಗುತ್ತಿತ್ತು. 2010ರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಕೊಹ್ಲಿಯನ್ನು ಮಾತ್ರ ಉಳಿಸಿಕೊಂಡು, ಅವರಿಗೆ ಭರ್ಜರಿ ವೇತನವನ್ನೂ ನೀಡಲಾಯಿತು. ಅಂದರೆ ಆಗ ಅವರ ಸಂಭಾವನೆ ರೂ.8.28 ಕೋಟಿಗೆ ಏರಿತು.
ವಿರಾಟ್ ಕೊಹ್ಲಿ 2011 ರಿಂದ 2013 ರವರೆಗೆ ಪ್ರತಿ ವರ್ಷ 8.28 ಕೋಟಿ ರೂ.ಗೆ ಆರ್ ಸಿ ಬಿ ಪರ ಆಡಿದ್ದರು. 2014ರಲ್ಲಿ ಮೆಗಾ ಹರಾಜು ನಡೆದಿತ್ತು. ಐಪಿಎಲ್’ನ ಏಳನೇ ಆವೃತ್ತಿಗೆ ಮುನ್ನ ಕೊಹ್ಲಿ ಮತ್ತೊಂದು ಬಾರಿ ವೇತನ ಹೆಚ್ಚಳ ಪಡೆದರು.
ಐಪಿಎಲ್ 2014 ರ ಮೆಗಾ ಹರಾಜಿನ ಮೊದಲು RCB ಉಳಿಸಿಕೊಂಡಿರುವ ಮೂವರು ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ನಂತರ ನಾಲ್ಕು ಸೀಸನ್’ಗಳಲ್ಲಿ ರೂ.12.5 ಕೋಟಿ ಸಂಭಾವನೆ ಪಡೆದರು. ಆರ್’ಸಿಬಿ ಕೂಡ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಅವರನ್ನು ಉಳಿಸಿಕೊಂಡಿತ್ತು.
ಅದಾದ ನಂತರ ಆರ್’ಸಿಬಿ ಕೊಹ್ಲಿಗೆ ರೂ. 17 ಕೋಟಿ ನೀಡಿ ಉಳಿಸಿಕೊಂಡಿತು. ಈ ಮೂಲಕ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎಂದೆನಿಸಿಕೊಂಡರು.
ಐಪಿಎಲ್ 2018 ರಿಂದ 2021 ರವರೆಗೆ ಪ್ರತಿ ವರ್ಷ ರೂ.17 ಕೋಟಿ ಗಳಿಸುತ್ತಿದ್ದಾರೆ. ಐಪಿಎಲ್ 2021 ರ ನಂತರ, ಅವರು RCB ನಾಯಕರಾಗಿಯೂ ಅಧಿಕಾರ ವಹಿಸಿಕೊಂಡರು. 2013ರಿಂದ 2021ರವರೆಗೆ ಕೊಹ್ಲಿ ತಂಡದ ನಾಯಕತ್ವವನ್ನು ವಹಿಸಿದ್ದರು.
ಐಪಿಎಲ್ 2022 ರ ಮೆಗಾ ಹರಾಜಿಗೆ ಮುಂಚಿತವಾಗಿ ಆರ್’ಸಿಬಿ ವಿರಾಟ್ ಕೊಹ್ಲಿಯನ್ನು ಉಳಿಸಿಕೊಂಡಿದ್ದರೂ ಸಹ, ಅವರ ಸಂಭಾವನೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದೆ. ಅಂದರೆ ಆರ್ ಸಿ ಬಿ ಪರ್ಸ್ ಉತ್ತಮವಾಗಿರಲೆಂದು ಕೊಹ್ಲಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅಂದಹಾಗೆ ಇದೀಗ ಕೊಹ್ಲಿ ಸಂಭಾವನೆ ರೂ. 17 ಕೋಟಿಯಿಂದ ರೂ. 15 ಕೋಟಿ ಕುಸಿದಿದೆ. ಆದರೆ, ಆರ್‌ಸಿಬಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಕೊಹ್ಲಿ ಎಂಬುದು ಗಮನಾರ್ಹ