ಹೆಚ್ಚು ಅನ್ನ ತಿನ್ನುತ್ತಿದ್ದೀರಾ..? ಹಾಗಿದ್ರೆ ಇವಾಗ್ಲೇ ಆಸ್ಪತ್ರೆಯ ಬೆಡ್ ಬುಕ್‌ ಮಾಡಿಬಿಡಿ.. ಏಕೆ ಗೊತ್ತೆ..?

Wed, 13 Nov 2024-9:55 pm,

ಪ್ರತಿದಿನ ಅನ್ನ ತಿನ್ನುವುದು ಒಳ್ಳೆಯದೇ ಆದರೂ.. ಕೆಲವು ಸಂದರ್ಭಗಳಲ್ಲಿ ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಅನೇಕ ಜನರು ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನ್ನವನ್ನು ತಿನ್ನುತ್ತಾರೆ. ಮೂರು ಹೊತ್ತಿಗೂ ಅನ್ನವನ್ನೇ ಸೇವಿಸುತ್ತಾರೆ..  

ವಾಸ್ತವವಾಗಿ, ಹೆಚ್ಚು ಅನ್ನವನ್ನು ತಿನ್ನುವುದು ಒಳ್ಳೆಯದಲ್ಲ. ಅದರಲ್ಲೂ 60 ವರ್ಷ ಮೇಲ್ಪಟ್ಟವರು ಅನ್ನ ತಿನ್ನುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ವಿವಿಧ ಆರೋಗ್ಯ ಸಮಸ್ಯೆಗಳ ಹೊರೆ ಬೀಳುವ ಸಾಧ್ಯತೆ ಇದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ಅನ್ನವನ್ನು ತಿನ್ನುವುದು ಕೆಲವು ಜನರಲ್ಲಿ ವಿವಿಧ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಆದರೆ ಹೆಚ್ಚು ಅನ್ನ ತಿನ್ನುವುದರಿಂದ ಬರುವ ರೋಗಗಳೇನು? ಬನ್ನಿ ತಿಳಿಯೋಣ..  

ಬೊಜ್ಜು:  ಅನೇಕರು ಹೆಚ್ಚು ಅನ್ನ ತಿನ್ನುತ್ತಾರೆ. ವಾಸ್ತವವಾಗಿ ಈ ರೀತಿ ತಿನ್ನುವುದು ತುಂಬಾ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ನೀವು ಹೆಚ್ಚಿನ ಪ್ರಮಾಣದಲ್ಲಿ ಅನ್ನವನ್ನು ಸೇವಿಸಿದರೆ, ದೇಹದಲ್ಲಿ ಕಾರ್ಬೋಹೈಡ್ರೇಟ್ಗಳ ಪ್ರಮಾಣವು ವಿಪರೀತವಾಗಿ ಹೆಚ್ಚಾಗುತ್ತದೆ. ಅಲ್ಲದೆ, ದೇಹದ ತೂಕ ಹೆಚ್ಚಿ, ಕೊಬ್ಬಿನ ಪ್ರಮಾಣ ದ್ವಿಗುಣಗೊಳ್ಳುತ್ತದೆ. ಇದರಿಂದ ಇತರೆ ದೀರ್ಘಕಾಲದ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.   

ಮಧುಮೇಹ: ಅಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿವೆ.. ಆದ್ದರಿಂದ ಇದನ್ನು ದಿನಕ್ಕೆ ಮೂರು ಹೊತ್ತು ತಿನ್ನುವುದರಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ಇದು ಮಧುಮೇಹದ ಅಪಾಯವನ್ನೂ ಹೆಚ್ಚಿಸುತ್ತದೆ. ಅಲ್ಲದೇ ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.   

ಜೀರ್ಣಕಾರಿ ಸಮಸ್ಯೆಗಳು: ಇತ್ತೀಚಿನ ಅಧ್ಯಯನಗಳು ಹೆಚ್ಚು ಅನ್ನವನ್ನು ತಿನ್ನುವುದರಿಂದ ವಿವಿಧ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತೋರಿಸಿದೆ. ಹೆಚ್ಚು ಅನ್ನವನ್ನು ತಿನ್ನುವುದರಿಂದ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿಯಂತಹ ಸಮಸ್ಯೆಗಳು ಉಂಟಾಗುತ್ತವೆ. ಈಗಾಗಲೇ ವಿವಿಧ ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಚ್ಚು ಅನ್ನವನ್ನು ತಿನ್ನುವುದನ್ನು ತಪ್ಪಿಸಬೇಕು.   

ಹೃದಯ ಸಂಬಂಧಿ ಕಾಯಿಲೆಗಳು: ಹೆಚ್ಚು ಅನ್ನ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳೂ ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ದೇಹದಲ್ಲಿ ಸಕ್ಕರೆಯ ಮಟ್ಟ ಮತ್ತು ಕೊಲೆಸ್ಟ್ರಾಲ್ ಮಟ್ಟವು ಹಠಾತ್ ಹೆಚ್ಚಳವು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.  

ಪಿತ್ತಜನಕಾಂಗದ ಕಾಯಿಲೆಗಳು: ಕೆಲವರಲ್ಲಿ, ಹೆಚ್ಚು ಅನ್ನವನ್ನು ತಿನ್ನುವುದರಿಂದ ಉತ್ಪತ್ತಿಯಾಗುವ ಕೆಲವು ರಾಸಾಯನಿಕಗಳು ಯಕೃತ್ತಿನ ಮೇಲೂ ಪರಿಣಾಮ ಬೀರುತ್ತವೆ. ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಯಕೃತ್ತು ಹಾನಿ ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ಸಾಧ್ಯತೆಯಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.   

ದೇಹದ ದೌರ್ಬಲ್ಯ: ಹೆಚ್ಚಿನ ಪ್ರಮಾಣದಲ್ಲಿ ಅನ್ನವನ್ನು ತಿನ್ನುವುದರಿಂದ ದೇಹಕ್ಕೆ ಕಾರ್ಬೋಹೈಡ್ರೇಟ್‌ಗಳು ಮಾತ್ರ ದೊರೆಯುತ್ತವೆ. ಇದರಿಂದಾಗಿ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ಇದರಿಂದ ದೇಹ ದೌರ್ಬಲ್ಯದಂತಹ ಸಮಸ್ಯೆಗಳು ಹೆಚ್ಚಾಗಿ ದೇಹವು ಶಕ್ತಿಯನ್ನು ಕಳೆದುಕೊಳ್ಳುತ್ತದೆ.. ಅದಕ್ಕೆ ರಾಗಿ ಮುದ್ದೆ, ಚಪಾತಿ, ರೊಟ್ಟಿಯನ್ನೂ ಸೇವಿಸಿ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link