ಸಿನಿಮಾ ಇರಲಿ ಯಾವುದೇ ಪ್ರೋಗ್ರಾಮ್ ಇರಲಿ ಐಶ್ವರ್ಯ ರೈ ಈ ಉಂಗುರ ಮಾತ್ರ ಕೈಯಿಂದ ತೆಗೆಯುವುದಿಲ್ಲ!ಮದುವೆ ರಿಂಗ್ ಅಲ್ಲ ಅದು
ಐಶ್ವರ್ಯ ರೈ ಮಾಜಿ ವಿಶ್ವ ಸುಂದರಿಯಾದರೂ ಇಂದಿಗೂ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಸುಂದರಿ.
ಯಾವ ರೀತಿಯ ಕಾಸ್ಟ್ಯೂಮ್ ಆದರೂ ಸರಿ ಐಶ್ ಅದರಲ್ಲಿ ಕಂಗೊಳಿಸಿ ಬಿಡುತ್ತಾರೆ.
ಸಿಂಪಲ್ ಸಾರಿಯಿಂದ ಹಿಡಿದು, ಅದೆಂಥಾ ಮಾಡರ್ನ್ ಬಟ್ಟೆಯಾದರೂ ಸರಿ ಐಶ್ವರ್ಯಾ ರೈ ಪ್ರತಿ ಬಟ್ಟೆಯಲ್ಲಿಯೂ ದಂತದ ಗೊಂಬೆಯೇ.
ಧಿರಿಸಿಗೆ ತಕ್ಕಂತೆ ಆಭರಣ ತೊಡುವುದು ಕೂಡಾ ಈ ನಟಿಯರು ಫ್ಯಾಷನ್. ಐಶ್ವರ್ಯಾ ರೈ ಕೂಡಾ ಅದಕ್ಕೆ ಹೊರತಾಗಿಲ್ಲ. ಆದರೆ ಅದ್ಯಾವ ರೀತಿಯ ಕಾಸ್ಟ್ಯೂಮೇ ಆಗಿರಲಿ ಐಶ್ ಈ ಒಂದು ಉಂಗುರ ತೊಟ್ಟೆ ಇರುತ್ತಾರೆ.
ಐಶ್ವರ್ಯ ಈ ಉಂಗುರವನ್ನು ತನ್ನ ಕೈಯಿಂದ ತೆಗೆಯುವುದಿಲ್ಲ. ಅದೇ ಒಡ್ಡು ಉಂಗುರ. ದಕ್ಷಿಣ ಕನ್ನಡದ ಬಂಟ ಸಮುದಾಯದಲ್ಲಿ ಮದುವೆ ಸಮಯದಲ್ಲಿ ಇದನ್ನು ತೊಡಿಸಲಾಗುತ್ತದೆ.
ಈ ಉಂಗುರು ವಿ ಅಥವಾ ಯು ಆಕಾರದಲ್ಲಿ ಇರುತ್ತದೆ. ಈ ಒಡ್ಡು ಉಂಗುರ ಯಾವ ಹೆಣ್ಣು ಮಗಳ ಕೈಯಲ್ಲಿ ಇದೆಯೋ ಅವಳಿಗೆ ಮದುವೆಯಾಗಿದೆ ಎಂದೇ ಅರ್ಥ.
ಇದನ್ನು ಮದುವೆಯ ದಿನ ವಧುವಿನ ಅತ್ತಿಗೆ ವಧುವಿನ ಕೈಗೆ ತೊಡಿಸುತ್ತಾಳೆ. ಇದು ತುಳುನಾಡಿನ ಹೆಣ್ಣು ಮಕ್ಕಳ ಹೆಮ್ಮೆ ಗೌರವ ಕೂಡಾ.
ಹಾಗಾಗಿಯೇ ಐಶ್ವರ್ಯಾ ಅದೆಂಥಾ ಮಾರ್ಡನ್ ಬಟ್ಟೆಯೇ ತೊಟ್ಟಿರಲಿ ತನ್ನ ಕೈಯ್ಯಿಂದ ಈ ಉಂಗುರವನ್ನು ಮಾತ್ರ ಕಳಚುವುದಿಲ್ಲ.