Health Tipes : ಗರ್ಭಿಣಿಯರ ಆಹಾರ ಪದ್ಧತಿ ಹೇಗಿರಬೇಕು?
ಅರ್ಧ ಚಮಚ ಅರಿಶಿನವನ್ನು ಹಾಲು ಅಥವಾ ನಿಮ್ಮ ಆಹಾರದೊಂದಿಗೆ ದಿನನಿತ್ಯ ಸೇರಿಸುವುದು ಅನಿವಾರ್ಯವಾಗಿರುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ, ಮಹಿಳೆಯರಲ್ಲಿ ಸ್ತನ್ಯಪಾನಕ್ಕಾಗಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ.
. ಒಣಗಿದ ಧಾನ್ಯಗಳಲ್ಲಿ ಹೆಚ್ಚಾಗಿ ಪೋಷಾಕಾಂಶಗಳು ಇಲ್ಲದೇ ಇರುವುದರಿಂದ ರಾಗಿ, ಗೋಧಿ, ಜೋಳ ಮುಂತಾದ ಧಾನ್ಯಗಳನ್ನು ಮೊಳಕೆ ಭರಿಸಿ ಸೇವಿಸುವುದು ಬಹಳ ಉತ್ತಮ
ಎದೆಹಾಲು ಹೆಚ್ಚಳ ಹೆಚ್ಚು ಹೆಚ್ಚು ಪೋಷಾಕಾಂಶ ಇರುವ ಆಹಾರ ಅಥವಾ ಆರೋಗ್ಯಕರವಾದ ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸಿದರೆ ಎದೆ ಹಾಲು ಹೆಚ್ಚುತ್ತದೆ.ಆದರೆ ಜಂಕ್‌ಫುಡ್ ಅಥವಾ ಫಾಸ್ಟ್ ಫುಡ್ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ.
ಸೊಪ್ಪು, ಮಾಂಸ, ದ್ವಿದಳ ಧಾನ್ಯಗಳು, ಕರ್ಜೂರ, ಅಂಜೂರವನ್ನು ಸೇವಿಸಬೇಕು. ಈ ರೀತಿಯ ಆಹಾರ ಸೇವನೆ ಬಾಣಂತಿಯರಿಗೆ ಬಹಳ ಒಳ್ಳೆಯದು.
ಮೆಂತೆಬೀಜವನ್ನು ಹಲವಾರು ಕಾರಣಗಳಿಗಾಗಿ ಬಳಸುತ್ತಾರೆ ಮತ್ತು ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ ಪ್ರಮಾಣವೂ ಇದೆ. ಅಲ್ಲದೇ ಹೆರಿಗೆ ಆದ ನಂತರ ಸುಮಾರು ಆರು ತಿಂಗಳು ಇದನ್ನು ಆಹಾರದಲ್ಲಿ ಬಳಸಿದರೆ ಎದೆ ಹಾಲಿನ ಪ್ರಮಾಣ ಹೆಚ್ಚಾಗುವುದಲ್ಲದೇ ಸುಸ್ತು ನಿಶ್ಯಕ್ತಿಯಿಂದ ಮುಕ್ತಿ ಪಡೆಯಬಹುದು.