ಹೃದ್ರೋಗಿಗಳಿಗೆ ಯಾವ ಬಗೆಯ ಆಹಾರ ಕ್ರಮ ಒಳ್ಳೆಯದು?
ಹಣ್ಣು-ತರಕಾರಿಗಳ ಸೇವನೆಯನ್ನು ಹೆಚ್ಚಿಸಿ: ಸೊಪ್ಪು, ವಿಟಮಿಟ್ ಸಿ ಇರುವ ತರಕಾರಿಗಳು ಹೀಗೆ ಹಸಿರು ತರಕಾರಿಗಳು ಹಾಗೂ ಹಣ್ಣುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿ ಹೃದ್ರೋಗದ ಅಪಾಯದಿಂದ ಪಾರಾಗಿ.
ಧಾನ್ಯಗಳು: ಹೃದ್ರೋಗಿಗಳ ಆಹಾರ ಕ್ರಮದಲ್ಲಿ ಓಟ್ಸ್, ಜೋಳ, ರಾಗಿ, ಕೆಂಪಕ್ಕಿಯನ್ನು ಬಳಸುವುದು ಅವಶ್ಯಕ. ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ವಿಟಮಿನ್ ಬಿ ಕಂಡುಬರುತ್ತದೆ ಆದ್ದರಿಂದ ಧಾನ್ಯಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ.
ಬೀನ್ಸ್: ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒದಗಿಸುವಲ್ಲಿ ಬೀನ್ಸ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹ ಬೀನ್ಸ್ ಸಹಾಯ ಮಾಡುತ್ತವೆ.
ಮೀನು: ಮೀನು ಸೇವನೆ ಹೃದ್ರೋಗಿಗಳ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಮೀನನ್ನು ಪ್ರೈ ಮಾಡಿ ತಿನ್ನುವುದಕ್ಕಿಂತ ಬಾಯಿಲ್ ಮಾಡಿ ಸೇವಿಸಿ.
ಅಡುಗೆಗೆ ಉತ್ತಮ ಎಣ್ಣೆಯನ್ನು ಬಳಸಿ: ಹೃದ್ರೋಗಿಗಳು ತಮ್ಮ ಅಡುಗೆಯಲ್ಲಿ ಬಳಸುವ ಎಣ್ಣೆ ಬಗ್ಗೆಯೂ ಎಚ್ಚರ ವಹಿಸಬೇಕು. ಹೊರಗಡೆ ಆಹಾರವನ್ನು ಸೇವಿಸುವಾಗ ಎಣ್ಣೆಯಲ್ಲಿ ಕರಿದ ಆಹಾರದಿಂದ ದೂರವಿರಿ.