CSK ಗಾಗಿ ಧೋನಿ ಮಹಾ ತ್ಯಾಗ..8 ಕೋಟಿ ನಷ್ಟವಾದ್ರು ʻಈʼ ಡೀಲ್‌ ಒಪ್ಪಿದೇಕೆ ಮಾಹಿ..?

Tue, 20 Aug 2024-6:58 am,

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ತಲ ಧೋನಿ 8 ಕೋಟಿ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ. 2025 ರ ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ಧೋನಿಯನ್ನು ಅಂತರಾಷ್ಟ್ರೀಯೇತರ ಆಟಗಾರರ ವಿಭಾಗದಲ್ಲಿ ಉಳಿಸಿಕೊಳ್ಳಲು ಸಿಎಸ್‌ಕೆ ಯೋಜನೆ ನಡೆಸುತ್ತಿದೆ  ಎಂದು ವರದಿಯಾಗಿದೆ. 

ಅನ್‌ಕ್ಯಾಪ್ಡ್‌ ಆಟಗಾರನಾಗಿ ಧೋನಿ CSK ತಂಡದಲ್ಲಿ ಆಟಬೇಕಾಗುತ್ತದೆ. ಈ ರೀತಿ ಅನ್‌ಕ್ಯಾಪ್ಡ್‌ ಆಟಗಾರನಾಗಿ ತಂಡದ ಪರ ಆಡಿದರೆ ಮಾಹಿ ಕೇವಲ ನಾಲ್ಕು ಕೋಟಿ ರೂ. ಪಡೆಯಲಿದ್ದಾಎ.  

ಈ ಮುಂಚೆ ಧೋನಿಯವರಿಗೆ 12 ಕೋಟಿ ಸಂಭಾವನೆಯಲ್ಲದೆ ತಂಡದ ಪರ ಅನ್‌ಕ್ಯಾಪ್ಡ್‌ ಆಟಗಾರನಾಹಗಿ ಆಡುವುದಕ್ಕೆ ಕೇವಲ ನಾಲ್ಕು ಕೋಟಿ ಅಷ್ಟೆ ಸಂಬಾವನೆ ಸಿಗಲಿದ್ದು ಇವರಿಗೆ 8 ಕೋಟಿ ನಷ್ಟವಾಗಲಿದೆ.  

2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ತಂಡವು ನಾಲ್ಕು ಅಥವಾ ಐದು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು ಎಂಬ ಬಿಸಿಸಿಐ ನಿಯಮವನ್ನು ಹೊರಡಿಸಿದೆ.   

ಬಿಸಿಸಿಐ ಶೀಘ್ರದಲ್ಲೇ ಈ ಬಗ್ಗೆ ಸಂಪೂರ್ಣ ಘೋಷಣೆ ಮಾಡದ್ದು, ಈ ಪರಿಸ್ಥಿತಿಯಲ್ಲಿ CSK ತಂಡ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ.   

2025ರ ಐಪಿಎಲ್ ಸರಣಿಯಲ್ಲಿ ಧೋನಿ ಎಲ್ಲಾ ಪಂದ್ಯಗಳನ್ನು ಆಡುವುದು ಅನುಮಾನವಾಗಿದ್ದು. ಧೋನಿ ತಂಡದ ಪರ ಆಡಲು ನಿರ್ದರಿಸಿದರೆ, ತಂಡ ಮಾಹಿಗಾಗಿ ಭರ್ಜರಿ ಸ್ವಾಗತ ರೆಡಿ ಮಾಡಿಕೊಂಡಿದೆ.  

ಸದ್ಯ ಧೋನಿ 12 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಮೆಗಾ ಹರಾಜಿನ ಮೊದಲು ಅವರನ್ನು ಉಳಿಸಿಕೊಂಡರೆ, ಅವರು ಅದೇ 12 ಕೋಟಿ ಸಂಬಳ ಅಥವಾ ಬಿಸಿಸಿಐ ಘೋಷಿಸಿದ ಯಾವುದೇ ಹೆಚ್ಚುವರಿ ವೇತನ ದರವನ್ನು ಪಾವತಿಸಬೇಕಾಗುತ್ತದೆ.   

ಹಾಗೆ ಮಾಡಿದರೆ, ಸಿಎಸ್‌ಕೆ ತಂಡದ ಒಂದು ನಿರ್ದಿಷ್ಟ ಮೊತ್ತವು ಧೋನಿಯ ಸಂಬಳಕ್ಕೆ ಹೋಗುತ್ತದೆ. ಹಾಗಾಗಿ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸುವುದು ಕಷ್ಟವಾಗಬಹುದು.  

ಇದನ್ನು ಪರಿಗಣಿಸಿರುವ ಧೋನಿ, ಕಡಿಮೆ ಸಂಬಳಕ್ಕೆ ಸ್ಥಳೀಯ ಆಟಗಾರನಾಗಿ ಉಳಿಸಿಕೊಳ್ಳಲು ಸಾಧ್ಯವಾದರೆ ಮಾತ್ರ 2025ರ ಐಪಿಎಲ್ ಸರಣಿಗೆ ಅವರನ್ನು ಆಯ್ಕೆ ಮಾಡುವಂತೆ ಸಿಎಸ್ ಕೆ ತಂಡದ ಮ್ಯಾನೇಜ್ ಮೆಂಟ್ ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.   

ಧೋನಿ ಆಡಿದರೆ ಅದು ಐಪಿಎಲ್ ಸರಣಿಗೆ ದೊಡ್ಡ ಪ್ರಚಾರವಾಗಲಿದೆ ಎಂದು ಬಿಸಿಸಿಐ ಸ್ಥಳೀಯ ಆಟಗಾರರ ನಿಯಮವನ್ನು ಮರಳಿ ತರಲು ಹೊರಟಿದೆ.  

2021ರ ಮೊದಲು ಇದ್ದ ನಿಯಮವನ್ನು ಈಗ ಬಿಸಿಸಿಐ ಮರಳಿ ತರಲಿದೆ. ಅದರಂತೆ ಐದು ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದ ಆಟಗಾರನನ್ನು ಸ್ಥಳೀಯ ಆಟಗಾರ ಎಂದು ಘೋಷಿಸಲಾಗುತ್ತದೆ.   

ಐಪಿಎಲ್ ನಿಯಮಗಳ ಪ್ರಕಾರ ಸ್ಥಳೀಯ ಆಟಗಾರನಿಗೆ ಗರಿಷ್ಠ 4 ಕೋಟಿ ಸಂಭಾವನೆ ಸಾಕು. ಇದರ ಪ್ರಕಾರ ಧೋನಿ ಈಗಿನ 12 ಕೋಟಿ ಸಂಭಾವನೆಯಿಂದ 8 ಕೋಟಿ ಕಳೆದುಕೊಳ್ಳಲಿದ್ದಾರೆ. ಸಿಎಸ್‌ಕೆಗಾಗಿ 8 ಕೋಟಿ ತ್ಯಾಗ ಮಾಡಲು ಸಿದ್ಧರಿದ್ದಾರೆ ಎನ್ನಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link