Whatsapp : ನೀವು ವಾಟ್ಸಾಪ್ ಬಳಸುತ್ತಿದ್ದರೆ ನಿಮಿಗಿದು ಬಿಗ್ ನ್ಯೂಸ್..!
ಅಂಡ್ರಾಯಿಡ್ ಮತ್ತು ಐಒಎಸ್ ಬಳಕೆದಾರರಿಗೆ ಬಹುಮುಖ್ಯ ಸುದ್ದಿ: ನಮ್ಮ ಸಹಯೋಗಿ website bgr.in ಪ್ರಕಾರ ಹಳೆಯ ಅಪರೇಟಿಂಗ್ ಸಿಸ್ಟಮ್ ಹೊಂದಿರುವ ಸ್ಮಾರ್ಟ್ ಫೋನಿನಲ್ಲಿ ಇನ್ನು ವಾಟ್ಸಾಪ್ ಸಪೋರ್ಟ್ ಮಾಡುವುದಿಲ್ಲ. ಅಂಥಾ ಫೋನುಗಳಲ್ಲಿ ವಾಟ್ಸಾಪ್ ಸೇವೆ ಸ್ಥಗಿತಗೊಳ್ಳಬಹುದು.
ಐಫೋನ್ ಗಳಲ್ಲೂ ಸರ್ವಿಸ್ ಬಂದ್ ಆಗಬಹುದು..! ಲಭ್ಯ ಮಾಹಿತಿಗಳ ಪ್ರಕಾರ ವಾಟ್ಸಾಪ್ ಇನ್ನು ಮುಂದೆ ಕೆಲವು ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ಸಪೋರ್ಟ್ ಮಾಡುವುದಿಲ್ಲ. ಐಒಎಸ್ 9 ಮತ್ತು ಅದಕ್ಕೂ ಹಳೆಯ ಅಪರೇಟಿಂಗ್ ಸಿಸ್ಟಮ್ ಗಳಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ.
ಅಂಡ್ರಾಯಿಡ್ ಫೋನಿನಲ್ಲೂ ಸಿಗಲ್ಲ ವಾಟ್ಸಾಪ್: ಲಭ್ಯ ಮಾಹಿತಿ ಪ್ರಕಾರ ಕೆಲವು ಹಳೆಯ ಅಂಡ್ರಾಯಿಡ್ ಅಪರೇಟಿಂಗ್ ಸಿಸ್ಟಮ್ ಗಳಲ್ಲೂ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಅಂಡ್ರಾಯಿಡ್ 4.0.3 ಗಿಂತಲೂ ಹಳೆಯ ಅಪರೇಟಿಂಗ್ ಸಿಸ್ಟಮ್ ಗಳುಳ್ಳ ಅಂಡ್ರಾಯಿಡ್ ಫೋನಿನಲ್ಲಿ ವಾಟ್ಸಾಪ್ ಕೆಲಸ ಮಾಡುವುದಿಲ್ಲ.
ಲೈನಕ್ಸ್ ಅಪರೇಟಿಂಗ್ ಸಿಸ್ಟಮ್ ಕೂಡಾ ಸಪೋರ್ಟ್ ಮಾಡುವುದಿಲ್ಲ: ಹಳೆಯ ಲೈನಕ್ಸ್ ಅಪರೇಟಿಂಗ್ ಸಿಸ್ಟಮಲ್ಲೂ ವಾಟ್ಸಾಪ್ ಕೆಲಸ ಮಾಡುವುದಿಲ್ಲ. ಲಭ್ಯ ಮಾಹಿತಿ ಪ್ರಕಾರ KaiOS 2.5.1 ಅಥವಾ ಅದಕ್ಕೂ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮಲ್ಲಿ ಮಾತ್ರ ವಾಟ್ಸಾಪ್ ಕೆಲಸ ಮಾಡುತ್ತದೆ.
ಶೀಘ್ರ ಬಿಡುಗಡೆಯಾಗಲಿದೆ ಸಪೋರ್ಟಿಂಗ್ ಅಪರೇಟಿಂಗ್ ಸಿಸ್ಟಮ್ ಮಾಹಿತಿ: ಶೀಘ್ರದಲ್ಲಿ FAQ ಅಪಡೇಟ್ ಆಗಲಿದೆ. ಅದರಲ್ಲಿ ವಾಟ್ಸಾಪ್ ಸಪೋರ್ಟ್ ಮಾಡುವ ಅಪರೇಟಿಂಗ್ ಸಿಸ್ಟಮ್ ಗಳ ಮಾಹಿತಿ ಇರಲಿದೆ.
ವಾಟ್ಸಾಪ್ ಬಳಕೆ ಮಾಡುವುದು ಹೇಗೆ..? ಹಳೆಯ ಸ್ಮಾರ್ಟ್ ಫೋನಿನಲ್ಲಿ ವಾಟ್ಸಾಪ್ ಬಳಸಬೇಕಾದರೆ ಹಳೆಯ ಐಒಎಸ್ ಅನ್ನು ಅಪ್ಡೇತಟ್ ಮಾಡಬೇಕಾಗುತ್ತದೆ. ಐಫೋನಿನಲ್ಲಿ ಐಒಎಸ್ 9 ಗಿಂತ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮ್ ಅಪ್ಡೇಳಟ್ ಮಾಡಬೇಕಾಗುತ್ತದೆ. ಅಂಡ್ರಾಯಿಡ್ನದಲ್ಲಿ ಸೆಟ್ಟಿಂಗ್ ಗೆ ಹೋಗಿ ಲೇಟೆಸ್ಟ್ ಅಪರೇಟಿಂಗ್ ಸಿಸ್ಟಮ್ ಡೌನ್ ಲೋಡ್ ಮಾಡಬೇಕಾಗುತ್ತದೆ..