whatsapp ತಂದಿರುವ 5 ಹೊಸ features ಅನ್ನು ನೀವೂ ಬಳಸಿದ್ದೀ ರಾ ?
ವಾಟ್ಸಾಪ್ ಇತ್ತೀಚೆಗೆ ಬ್ಯಾಕಪ್ ಚಾಟ್‌ಗಳಿಗೂ ಪಾಸ್‌ವರ್ಡ್ ಹಾಕುವ ಫೀಚರ್ ಅನ್ನು ಪರಿಚಯಿಸಿದೆ . ಈಗ ನಿಮ್ಮ ಬ್ಯಾಕಪ್ ಚಾಟ್‌ಗಳನ್ನು ಸಹ Encrypted ಮಾಡಲಾಗಿದೆ. ಅಂದರೆ, ನಿಮ್ಮ ಬ್ಯಾಕಪ್ ವೀಕ್ಷಿಸಲು ಪಾಸ್‌ವರ್ಡ್ ಬಳಸಬೇಕಾಗುತ್ತದೆ.
ಈಗ ನೀವು ಈ ಚಾಟಿಂಗ್ ಅಪ್ಲಿಕೇಶನ್‌ನಲ್ಲಿ ಸಣ್ಣ ವೀಡಿಯೊಗಳನ್ನು ವೀಕ್ಷಿಸಬಹುದು. ವಾಟ್ಸಾಪ್ ಇತ್ತೀಚೆಗೆ Instagram Reels ಅನ್ನು ಪ್ಲಾಟ್‌ಫಾರ್ಮ್‌ಗೆ ಸೇರಿಸಿದೆ.
ವಾಟ್ಸಾಪ್ ಇತ್ತೀಚೆಗೆ ಚಾಟ್‌ಗಳಲ್ಲಿ Archived ಫೀಚರ್ ಅನ್ನು ಬಿಡುಗಡೆ ಮಾಡಿದೆ. ಹೊಸ update ನ ನಂತರ ನೀವು ಆರ್ಕೈವ್ ಮಾಡಿದ ಪಟ್ಟಿಯಲ್ಲಿ ಚಾಟ್ ಮಾಡಿದರೆ, ಸಂದೇಶವನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ ನೀವು ಯಾವಾಗ ಬೇಕಾದರೂ ಸಂದೇಶವನ್ನು ಪ್ರತ್ಯೇಕವಾಗಿ ನೋಡಬಹುದು.
ವಾಟ್ಸಾಪ್ ಕೆಲವೇ ದಿನಗಳ ಹಿಂದೆ Multiple Device Support ಅನ್ನು ಸಹ ಪ್ರಾರಂಭಿಸಿದೆ. ಅಂದರೆ, ಒಂದೇ ಸಮಯದಲ್ಲಿ ಎರಡು ಡಿವೈಸ್ ಗಳಲ್ಲಿ ವಾಟ್ಸಾಪ್ ಬಳಸ ಬಹುದು.
ಈಗ ಪದೇ ಪದೇ ಚಾಟ್‌ಗಳನ್ನು ಡಿಲೀಟ್ ಮಾಡುವ ಅಗತ್ಯವಿಲ್ಲ. ಇತ್ತೀಚೆಗೆ ಮೆಸೇಜಿಂಗ್ ಅಪ್ಲಿಕೇಶನ್ Automatic Message Delete ಒಪ್ಶನ್ ನೀಡಿದೆ. ಅಂದರೆ ಸ್ವಲ್ಪ ಸಮಯದ ನಂತರ ಚಾಟ್‌ಗಳು ತನ್ನಷ್ಟಕ್ಕೇ ಡಿಲೀಟ್ ಆಗುತ್ತವೆ.