ಮೇ 15ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ WhataApp ಬಂದ್ ಆಗಲಿದೆ..!
ವಾಟ್ಸಾಪ್ ಮತ್ತೆ ತನ್ನ ಗೌಪ್ಯತೆ ನೀತಿಯನ್ನು ಸಿದ್ಧಪಡಿಸಿದೆ. ಹೊಸ ನೀತಿಯ ಪೂರ್ಣ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತಿದೆ. ಹಿಂದಿನ ಗೌಪ್ಯತಾ ನೀತಿಯಿಂದ ಉಂಟಾಗಿದ್ದ ವಿವಾದಗಳ ಕಾರಣದಿಂದ ಈ ಬಾರಿ ಕಂಪನಿ ಸಂಪೂರ್ಣ ಕಾಳಜಿ ವಹಿಸಿದೆ.
ವಾಟ್ಸಾಪ್ ನ ಹೊಸ ನೀತಿಯಲ್ಲಿ, ಬಳಕೆದಾರರನ್ನು ಸಂಪೂರ್ಣವಾಗಿ ತೃಪ್ತಿಪಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಬಳಕೆದಾರರ ಗೌಪ್ಯತೆ ಹಕ್ಕನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಎಂದು ವಾಟ್ಸಾಪ್ ಹೇಳಿದೆ. ಬಳಕೆದಾರರ ಒಪ್ಪಿಗೆಯಿಲ್ಲದೆ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ವೈಯಕ್ತಿಕ ಚಾಟ್ Encrypted ರೂಪದಲ್ಲಿಯೇ ಇರಲಿದೆ. ಇದು ವಾಟ್ಸಾಪ್ ಅಥವಾ ಫೇಸ್‌ಬುಕ್‌ನ ಯಾವೊಬ್ಬ ಮೂರನೇ ವ್ಯಕ್ತಿಗೆ ಕಾಣಿಸುವುದಿಲ್ಲ.
ಈ ವರ್ಷದ ಜನವರಿಯಲ್ಲಿ ಬಂದ ವಾಟ್ಸಾಪ್ ಗೌಪ್ಯತೆ ನೀತಿಯಲ್ಲಿ, ಬಳಕೆದಾರರ ಡೇಟಾಗಳಾದ ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಸ್ಥಳ ಮಾಹಿತಿಯನ್ನು , ಫೇಸ್‌ಬುಕ್ ಒಡೆತನದ ಕಂಪನಿಗಳಾದ ಮೆಸೆಂಜರ್, ಇನ್‌ಸ್ಟಾಗ್ರಾಮ್ ಮತ್ತು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವ ಬಗ್ಗೆ ಹೇಳಲಾಗಿತ್ತು. ಈ ಕಾರಣದಿಂದಾಗಿ ಈ ನೀತಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ಅನುಮೋದಿಸಲು ಗಡುವನ್ನು ನಿಗದಿಪಡಿಸಲಾಗಿದೆ. ಮೇ 15 ರೊಳಗೆ ಹೊಸ ಗೌಪ್ಯತೆ ನೀತಿಯನ್ನು ಅನುಮೋದಿಸದಿದ್ದರೆ, ನಿಮ್ಮ ವಾಟ್ಸಾಪ್ ಸೇವೆಯನ್ನು ಸ್ಥಗಿತಗೊಳಿಸಬಹುದು.
ಹೊಸ ನೀತಿಯನ್ನು ಅನುಮೋದಿಸಲು ವಾಟ್ಸಾಪ್ ಬಳಕೆದಾರರಿಗೆ ಬಹಳಷ್ಟು ಸಮಯಾವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಬಳಕೆದಾರರು ಹೊಸ ಗೌಪ್ಯತಾ ನೀತಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಬಳಕೆದಾರರು ನೀತಿಯನ್ನು ಒಪ್ಪದಿದ್ದರೆ ಅವರ ವಾಟ್ಸಾಪ್ ಸೇವೆಗಳನ್ನು ಸೀಮಿತಗೊಳಿಸಬಹುದು. ಆದರೆ ಯಾವ ಸೇವೆಗಳು ಸೀಮಿತವಾಗಿರುತ್ತವೆ ಮತ್ತು ಅವುಗಳು ಅಲ್ಲ ಎಂಬುದರ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.