WhatsApp ಪರಿಚಯಿಸುತ್ತಿದೆ ಐದು ಹೊಸ ವೈಶಿಷ್ಟ್ಯ, ಚಾಟಿಂಗ್ ಆಗಲಿದೆ ಇನ್ನಷ್ಟು ಆಹ್ಲಾದಕರ
ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದಾಗಿನಿಂದ, ನೀವು ಅನ್ ನೋನ್ ಬಿಸ್ ನೆಸ್ ಅಕೌಂಟ್ಸ್ ನಿಂದ ಸಂದೇಶವನ್ನು ಪಡೆದರೆ, ಅದರ ಬಗ್ಗೆ ನಿಮಗೆ ತಿಳಿಯುತ್ತದೆ.
ವಾಟ್ಸಾಪ್‌ನ ಸಂದೇಶ ಡಿಲೀಟ್ ವೈಶಿಷ್ಟ್ಯದಲ್ಲಿ ಡಿಲೀಟ್ ಫಾರ್ ಎವ್ರಿ ವನ್ ಆಯ್ಕೆಯ ಸಮಯ ಮಿತಿಯನ್ನು ಒಂದು ಗಂಟೆ ವಿಸ್ತರಿಸಲಾಗುತ್ತಿದೆ. ಈಗ ಸಂದೇಶವನ್ನು ಕಳುಹಿಸಿದ ನಂತರ ಯಾವುದೇ ಸಮಯದಲ್ಲಿ ಅದನ್ನು ಡಿಲೀಟ್ ಮಾಡುವುದು ಸಾಧ್ಯವಾಗುತ್ತದೆ.
ಹೊಸ ಅಪ್ಡೇಟ್ ನಂತರ, ಈಗ WhatsApp ಬಳಕೆದಾರರು ಯಾರೊಂದಿಗಾದರೂ ಫೋಟೋಗಳನ್ನು ಹಂಚಿಕೊಂಡಾಗ, ಆ ಚಿತ್ರಗಳ ಗುಣಮಟ್ಟವು ಕಡಿಮೆಯಾಗುವುದಿಲ್ಲ. ನೀವು HD ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಬೇಕಾದರೆ, ನೀವು ಅವುಗಳನ್ನು 'ಡೇಟಾ ಸೇವಿಂಗ್ ಮೋಡ್' ಅಥವಾ 'ಸೆಲ್ಪ್ ಮೋಡ್' ನಲ್ಲಿಯೂ ಕಳುಹಿಸಬಹುದು.
WhatsApp ತನ್ನ ಅಪ್‌ಡೇಟ್‌ನಲ್ಲಿ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಸಹ ತರಲಿದೆ. ಇದರಿಂದ ನಿಮ್ಮ ಪ್ರೊಫೈಲ್ ಫೋಟೋವನ್ನು ಮರೆಮಾಡಲು ನಿಮಗೆ ಸಾಧ್ಯವಾಗುತ್ತದೆ. ಪ್ರೊಫೈಲ್ ಫೋಟೋದ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಬಳಕೆದಾರರಿಗೆ 'ಮೈ ಕಾಂಟಾಕ್ಟ್ ಆಕ್ಸೆಪ್ಟ್’ ಆಯ್ಕೆಯನ್ನು ಸಹ ನೀಡಲಾಗುತ್ತದೆ.
ಈ ಹೊಸ ವೈಶಿಷ್ಟ್ಯದೊಂದಿಗೆ, ಯಾರಿಗಾದರೂ ಧ್ವನಿ ಸಂದೇಶವನ್ನು ಕಳುಹಿಸುವಾಗ, ಮಧ್ಯದಲ್ಲಿ ಪಾಸ್ ಮಾಡಬಹುದಾಗಿದೆ. ಇದರೊಂದಿಗೆ, ಯಾವುದೇ ತಪ್ಪುಗಳಾಗಿದ್ದರೆ, ಸಂಪೂರ್ಣ ಸಂದೇಶವನ್ನು ಮರು-ರೆಕಾರ್ಡ್ ಮಾಡಬೇಕಾಗಿಲ್ಲ.