ವಿರಾಟ್‌ ಕೊಹ್ಲಿ-ಅನುಷ್ಕಾ ಶರ್ಮಾಗೆ ಮದುವೆ ಪ್ರಸ್ತಾಪ ಮಾಡಿದ್ದು ಯಾವಾಗ ಗೊತ್ತಾ..? ಕಿಂಗ್ ಪ್ರಪೋಸಲ್‌ಗೆ ನಟಿ ಕೊಟ್ಟ ಉತ್ತರ ಕೇಳಿದ್ರೆ ಶಾಕ್‌ ಆಗ್ತೀರಾ..!

Sat, 03 Aug 2024-11:22 am,

ಪವರ್ ಜೋಡಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಸಖತ್‌ ಇಂಟ್ರೆಸಿಂಗ್‌ ಲವ್‌ ಸ್ಟೋರಿ ಹೊಂದಿದ್ದಾರೆ. ಜಾಹೀರಾತಿನ ಶೂಟಿಂಗ್‌ನಲ್ಲಿ ಪರಸ್ಪರ ಭೇಟಿಯಾದಾಗಿನಿಂದ ಇಟಲಿಯ ಟಸ್ಕನಿಯಲ್ಲಿ ಮೂರು ಗಂಟು ಕಟ್ಟುವವರೆಗೆ ವಿರುಷ್ಕಾ ಅನೇಕ ತಿರುವುಗಳನ್ನು ಕಂಡಿದ್ದಾರೆ..   

7 ವರ್ಷಗಳ ಹಿಂದೆ ಅನುಷ್ಕಾ ವಿರಾಟ್ ವಿವಾಹವಾದರು ಆದರೆ ಅವರು ತಮ್ಮ ಸಂಬಂಧದಲ್ಲಿ ಮುಂದಿನ ಹಂತವನ್ನು ಹೇಗೆ ಮತ್ತು ಯಾವಾಗ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದರು? ವಿರಾಟ್ ಏಕೆ ಅನುಷ್ಕಾಗೆ ಮದುವೆಯಾಗಲು ಪ್ರಸ್ತಾಪಿಸಿದರು? ಎಂಬುದು ಯಾರಿಗೂ ತಿಳಿದಿಲ್ಲ.. ಇದೀಗ ಈ ವಿಚಾರವನ್ನು ತಿಳಿಯೋಣ..    

ಭಾರತೀಯ ಫುಟ್ಬಾಲ್ ಸೂಪರ್‌ಸ್ಟಾರ್ ಸುನಿಲ್ ಛೆಟ್ರಿ ಅವರೊಂದಿಗಿನ ಸಂಭಾಷಣೆಯಲ್ಲಿ, ಕೊಹ್ಲಿ ಅವರು ಅನುಷ್ಕಾಗೆ ಮದುವೆಯ ಪ್ರಸ್ತಾಪವನ್ನು ಯಾವಾಗ ಮಾಡಿದರು ಎಂದು ಕೇಳಲಾಯಿತು. ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೊಹ್ಲಿ, ಮದುವೆ ಪ್ರಪೋಸಲ್‌ನ್ನು ನಿಜವಾಗಿಯೂ Formal ಆಗಿ ಹೇಳಿಕೊಂಡಿಲ್ಲ ಎಂದು ವಿರಾಟ್‌ ಬಹಿರಂಗಪಡಿಸಿದರು.   

ಎಂದರೇ "ಇಬ್ಬರು ವ್ಯಕ್ತಿಗಳು ಆಳವಾಗಿ ಪ್ರೀತಿಸುತ್ತಿರುವಾಗ, ಔಪಚಾರಿಕತೆಗಳ ಅಗತ್ಯವಿಲ್ಲ.. ಹೀಗಾಗಿ ಹಂತಹಂತವಾಗಿ ಮದುವೆಯಾಗುವ ನಿರ್ಧಾರವನ್ನೂ ಕೈಗೊಂಡೆವು" ಎಂದು ವಿರಾಟ್‌ ಕೊಹ್ಲಿ ಹೇಳಿಕೊಂಡಿದ್ದರು..   

"ಅಲ್ಲದೇ ನಾನು ಹಾಗೂ ಅನುಷ್ಕಾ ಯಾವಾಗಲೂ ಒಂದು ಹೊಂದಾಣಿಕೆಯಿಂದ ಇದ್ದೆವು.. ಅವಳು ತನ್ನ ಜೀವನವನ್ನು ಹೆಚ್ಚು ಖಾಸಗಿಯಾಗಿ ಇಡಲು ಬಯಸುತ್ತಾಳೆ ನಾನು ಹಾಗೇ.. ಹೀಗಾಗಿ ನಮ್ಮಿಬ್ಬರ ಗುಣಗಳು ಹೊಂದಾಣಿಕೆಯಾಗಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದು ನಮಗೆ ಅರಿವಾದ ಮೇಲೆ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿ ಮದುವೆಯಾದೆವು" ಎಂದಿದ್ದರು..   

"ಇನ್ನು ನನ್ನ ಜೀವನದಲ್ಲಿ ಅನುಷ್ಕಾ ಬಂದಾಗಿನಿಂದ ನನ್ನಲ್ಲಿರುವ ಸಾಕಷ್ಟು ನೆಗೆಟಿವ್‌ ಯೋಚನೆಗಳು ದೂರಾವಗಿವೆ.. ನನಗೆ ಅನುಷ್ಕಾ ತುಂಬಾ ಕಫರ್ಟ್‌ ಜೋನ್‌ ಆಗಿದ್ದಾರೆ" ಎಂದು ಪತ್ನಿಯ ಮೇಲಿನ ಪ್ರೀತಿಯನ್ನು ವಿರಾಟ್‌ ಬಹಿರಂಗವಾಗಿಯೇ ಹೇಳಿಕೊಂಡಿದ್ದರು..    

 ಸಾಮಾನ್ಯರಂತೆ ತಮ್ಮ ಜೀವನದಲ್ಲೂ ಸಾಕಷ್ಟು ಏರುಪೇರುಗಳನ್ನು ಕಂಡ ವಿರಾಟ್‌ ಹಾಗೂ ಅನುಷ್ಕಾ ಸದ್ಯ ಎರಡು ಮುದ್ದಾದ ಮಕ್ಕಳಿಗೆ ಪೋಷಕರಾಗಿದ್ದಾರೆ.. ಅಲ್ಲದೇ ಪ್ರಪಂಚದ ಬೆಸ್ಟ್‌ ಕಪಲ್‌ ಎನ್ನುವ ಮಟ್ಟಿಗೆ ಎಕ್ಕರಿಗೂ ಸ್ಫೂರ್ತಿಯಾಗಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link