ಈ ಎರಡು ರಾಶಿಗಳ ಸಂಬಂಧ ಕೂಡಿಬಂದರೆ ಸಾಕ್ಷಾತ್‌ ಮಹಾವಿಷ್ಣು-ಲಕ್ಷ್ಮೀಯೇ ವಿವಾಹವಾದಂತೆ! ವೈಕುಂಠದ ಪ್ರೀತಿ ಭೂಲೋಕದಲ್ಲಿ ಸಾಕಾರಗೊಂಡ ಸಮ!

Sat, 30 Nov 2024-6:17 pm,

 ರಾಶಿಗಳು ನಮ್ಮ ವ್ಯಕ್ತಿತ್ವ, ಜೀವನಶೈಲಿ ಮತ್ತು ನಮ್ಮ ಭವಿಷ್ಯದ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳುವ ಮಾಧ್ಯಮವಾಗಿದೆ. ಆದರೆ ಪರಿಪೂರ್ಣ ಸಂಗಾತಿಯನ್ನು ಆಯ್ಕೆಮಾಡಲು ರಾಶಿಯ ಸಹಾಯವನ್ನು ಸಹ ತೆಗೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ?

ಸಂಗಾತಿಯೊಂದಿಗೆ ಪರಿಪೂರ್ಣ ಹೊಂದಾಣಿಕೆಯನ್ನು ಹೊಂದಿರಬೇಕು ಮತ್ತು ನಿಮ್ಮ ಸಂಬಂಧದಲ್ಲಿ ಯಾವುದೇ ಸಂಘರ್ಷವಿರಬಾರದು ಎಂದು ಭಾವಿಸಿದರೆ, ಖಂಡಿತವಾಗಿಯೂ ನಿಮ್ಮ ಸಂಗಾತಿಯ ರಾಶಿಯನ್ನು ಪರಿಶೀಲಿಸಬೇಕು. ಕೆಲವು ರಾಶಿಗಳ ಸಂಯೋಜನೆಯು ತುಂಬಾ ಪರಿಪೂರ್ಣವಾಗಿರುತ್ತದೆ. ಅಂತಹ ರಾಶಿಗಳ ಮದುವೆ, ಶಿವ-ಪಾರ್ವತಿ ಅಥವಾ ವಿಷ್ಣು-ಮಹಾಲಕ್ಷ್ಮಿಯ ಸಮಾಗಮಕ್ಕೆ ಸಮ ಎನ್ನಲಾಗುತ್ತದೆ.

 

ಮೇಷ ರಾಶಿಯ ಜನರು ಪ್ರೀತಿ ಮತ್ತು ಲವಲವಿಕೆಯಿಂದ ತುಂಬಿರುತ್ತಾರೆ. ಅವರು ತುಂಬಾ ಬಹಿರ್ಮುಖಿಗಳು ಮತ್ತು ಉತ್ಸಾಹಭರಿತ ಸ್ವಭಾವದವರು. ಯಾವಾಗಲೂ ಹೊಸ ಮತ್ತು ವಿಭಿನ್ನವಾದದ್ದನ್ನು ಮಾಡುವ ಬಯಕೆಯನ್ನು ಹೊಂದಿರುತ್ತಾರೆ. ಈ ರಾಶಿಯ ಜನರು ಸಿಂಹ, ಧನು ಮತ್ತು ವೃಶ್ಚಿಕ ರಾಶಿಯ ಜನರೊಂದಿಗೆ ಮದುವೆಯಾಗಬೇಕು.

 

ವೃಷಭ ರಾಶಿ- ಸರಳ ಮತ್ತು ಡೌನ್ ಟು ಅರ್ಥ್ ಸ್ವಭಾವದವರು ವೃಷಭ ರಾಶಿಯ ಜನರು. ಭಾವನಾತ್ಮಕ ಮಟ್ಟದಲ್ಲಿ ಅವರೊಂದಿಗೆ ಸಂಪರ್ಕ ಸಾಧಿಸುವ ವ್ಯಕ್ತಿತ್ವಗಳನ್ನು ವರಿಸಲು ಇವರು ಬಯಸುತ್ತಾರೆ. ಆದ್ದರಿಂದ, ಈ ರಾಶಿಯವರು ಕರ್ಕ, ಮೀನ ಅಥವಾ ಕನ್ಯಾ ರಾಶಿಯ ಜನರನ್ನು ಮದುವೆಯಾದರೆ ಬದುಕೇ ಬಂಗಾರವಾಗುತ್ತದೆ.

 

ಮಿಥುನ: ಮಿಥುನ ರಾಶಿಯ ಜನರು ತುಂಬಾ ಬುದ್ಧಿವಂತರು. ಬುದ್ಧಿವಂತಿಕೆ ಮತ್ತು ಜ್ಞಾನವು ಅವರಿಗೆ ಪ್ರಮುಖ ಅಂಶಗಳಾಗಿವೆ. ಈ ಎರಡು ಗುಣಗಳು ಅವರನ್ನು ಹೆಚ್ಚು ಆಕರ್ಷಿಸುತ್ತವೆ. ಪ್ರತಿ ಸಂದರ್ಭಕ್ಕೂ ಹೊಂದಿಕೊಳ್ಳುವ ವ್ಯಕ್ತಿಯನ್ನು ಅವರು ಬಯಸುತ್ತಾರೆ. ಆದ್ದರಿಂದ ಸಿಂಹ, ತುಲಾ ಅಥವಾ ಮಿಥುನ ರಾಶಿಯವರನ್ನು ಮದುವೆಯಾಗಬಹುದು.

 

ಕಟಕ: ಕರ್ಕಾಟಕ ರಾಶಿಯ ಜನರಿಗಿಂತ ಹೆಚ್ಚು ಭಾವನಾತ್ಮಕವಾಗಿರಲು ಯಾರಿಂದಲೂ ಸಾಧ್ಯವಿಲ್ಲ. ಅವರು ತುಂಬಾ ಪ್ರಾಮಾಣಿಕ ಮತ್ತು ಭಾವನಾತ್ಮಕವಾಗಿ ತಮ್ಮ ಸಂಗಾತಿಯ ಮೇಲೆ ಅವಲಂಬಿತರಾಗಿದ್ದಾರೆ. ಗಂಭೀರವಾಗಿ ಪರಿಗಣಿಸುವ ಪಾಲುದಾರನನ್ನೇ ಹುಡುಕುತ್ತಾರೆ. ಹೀಗಿರುವಾಗ ಕರ್ಕಾಟಕ, ವೃಶ್ಚಿಕ, ಕನ್ಯಾ ಅಥವಾ ವೃಷಭ ರಾಶಿಯವರೊಂದಿಗೆ ಮದುವೆಯಾದರೆ ಒಳ್ಳೆಯದು

 

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link