ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...

Wed, 10 Jul 2024-8:10 pm,

ನಟಿ ಸೌಂದರ್ಯಾ ತಮ್ಮ ಸುಂದರ ನಗು, ನಟನೆಯಿಂದ ಕೊಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಬೆಂಗಳೂರಿನ ಈ ಚೆಲುವೆ 1972 ರಲ್ಲಿ ಜನಿಸಿದರು. ಸೌಂದರ್ಯ ಎಸ್. ಸಿದ್ದಲಿಂಗಯ್ಯ ನಿರ್ದೇಶನದ ʼಗಂಧರ್ವʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಕನ್ನಡ ಚಿತ್ರ ಏಪ್ರಿಲ್ 1992 ರಲ್ಲಿ ಬಿಡುಗಡೆಯಾಯಿತು.   

ಇದರ ನಂತರ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಲು ಪ್ರಾರಂಭಿಸಿದರು. 90 ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಅಗ್ರ ನಟರಾಗಿದ್ದ ವಿಷ್ಣುವರ್ಧನ್‌, ರವಿಚಂದ್ರನ್‌, ರಜನಿ, ಕಮಲ್, ಚಿರಂಜೀವಿ, ಮೋಹನ್ ಲಾಲ್, ನಾಗಾರ್ಜುನ ಮತ್ತು ವೆಂಕಟೇಶ್ ಅವರೊಂದಿಗೆ ಸೌಂದರ್ಯ ನಟಿಸಿದ್ದಾರೆ.   

ಹಾಗೆಯೇ ಬಾಲಿವುಡ್‌ ಅಂಗಳಕ್ಕೂ ಕಾಲಿಟ್ಟ ನಟಿ ಅಮಿತಾಬ್ ಬಚ್ಚನ್ ಜೊತೆ  ʼಸೂರ್ಯ ವಂಶʼದ ಹಿಂದಿ ರಿಮೇಕ್‌ನಲ್ಲಿ ಸೌಂದರ್ಯ ದೇವಯಾನಿ ನಿರ್ವಹಿಸಿದ ಪಾತ್ರವನ್ನು ಅವರು ನಿರ್ವಹಿಸಿದ್ದರು. ಅಮಿತಾಬ್ ಬಚ್ಚನ್ ಎದುರು ನಟಿಸಿ ಎಲ್ಲರ ಗಮನ ಸೆಳೆದಿದ್ದರು.  

ಈ ಚಿತ್ರವು ಭಾರೀ ಹಿಟ್ ಆಗುತ್ತಿದ್ದಂತೆ, ಹಿಂದಿ ಚಿತ್ರಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದುಕೊಂಡಿದೆ. ಆ ಸಮಯದಲ್ಲಿ, ಕನ್ನಡ, ತಮಿಳು ಮತ್ತು ಮಲಯಾಳಂ ಮುಂತಾದ ದಕ್ಷಿಣ ಭಾರತದ ಭಾಷೆಗಳಲ್ಲಿ ನಟನೆಯಲ್ಲಿ ನಿರತರಾಗಿದ್ದ ಸೌಂದರ್ಯಗೆ ಹಿಂದಿ ಚಲನಚಿತ್ರ ಅವಕಾಶಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ.  

ಸೌಂದರ್ಯ ಸಿನಿಮಾ ಖ್ಯಾತಿಯ ಜೊತೆ ರಾಜಕೀಯ ಪ್ರವೇಶಕ್ಕೂ ಮುಂದಾಗಿದ್ದರು. ಹಾಗಾಗಿ 2004ರಲ್ಲಿ ಬಿಜೆಪಿ ಸೇರಿದರು. 17 ಏಪ್ರಿಲ್ 2004 ರಂದು, ನಟಿ ತಮ್ಮ ಪಕ್ಷದ ಪರ ಮತ ಪ್ರಚಾರಕ್ಕೆ ತಮ್ಮ ಸಹೋದರ ಅಮರನಾಥ್ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತಿದ್ದಾಗ, ತಾಂತ್ರಿಕ ದೋಷದಿಂದ ವಿಮಾನ ಸ್ಫೋಟಗೊಂಡಿತು. ಪರಿಣಾಮ ಸೌಂದರ್ಯ ಮತ್ತು ಆಕೆಯ ಸಹೋದರ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಇಡೀ ದೇಶವನ್ನೇ ದುಃಖಕ್ಕೀಡು ಮಾಡಿತ್ತು.  

ಮದುವೆಯಾದ ಒಂದೇ ವರ್ಷದಲ್ಲಿ ನಟಿ ಸೌಂದರ್ಯ ನಿಧನರಾದರು. ಶಾಕಿಂಗ್‌ ವಿಚಾರ ಅಂದ್ರೆ, ಅವರು ಸಾಯುವ ವೇಳೆಗೆ ಗರ್ಭಿಣಿಯಾಗಿದ್ದರು. ಇದು ಅವರ ಅಭಿಮಾನಿಗಳಿಗೆ ನೋವು ತಂದಿತು. ಇನ್ನು ಕೋಟ್ಯಂತರ ರೂಪಾಯಿ ಆಸ್ತಿಯನ್ನು ಹೊಂದಿದ್ದ ನಟಿ ಉಯಿಲು ಬರೆದಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಅವರ ತಾಯಿ ಮತ್ತು ಪತಿ ಇಬ್ಬರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ..  

ಸೌಂದರ್ಯ ಪತಿ ಮತ್ತು ಅವರ ತಾಯಿಯ ಪ್ರಕಾರ, 31ನೇ ವಯಸ್ಸಿನಲ್ಲಿ ಉಯಿಲು ಬರೆಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸಧ್ಯ ನಟಿ ಸೌಂದರ್ಯ ಅವರ 100 ಕೋಟಿ ವಿಚಾರ ಮತ್ತೆ ಚರ್ಚೆಗೆ ಗ್ರಾಸವಾಗಿರುವಾಗ ಸೌಂದರ್ಯಾ ಅವರ ತಾಯಿ ಹಾಗೂ ಪತಿ ಬರೆದಿರುವ ಉಯಿಲು ಬಚ್ಚಿಟ್ಟು ಆಸ್ತಿಯನ್ನು ಸಮನಾಗಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಈ ಮಾಹಿತಿ ಎಷ್ಟು ಸತ್ಯ ಎಂಬುದು ತಿಳಿದು ಬಂದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link