ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ಅವರಿಗೆ ನಟ ದರ್ಶನ್ ಪರಿಚಯವಾಗಿದ್ದು ಎಲ್ಲಿ? ಇವರ ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತೇ?
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರ ವಶದಲ್ಲಿದ್ದಾರೆ.. ಈ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಬೇಸರಗೊಂಡು ಮೌನ ತಾಳಿದ್ದರು.. ಅಲ್ಲದೇ ಪತಿಯನ್ನು ಇನ್‌ಸ್ಟಾಗ್ರಾಂನಿಂದ ಅನ್‌ಫಾಲೋ ಮಾಡಿದ್ದರು.. ಇತ್ತೀಚೆಗೆ ತಮ್ಮ ಇನ್‌ಸ್ಟಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.. ಇದೆಲ್ಲವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ..
ಇದೆಲ್ಲವನ್ನು ಹೊರತುಪಡಿಸಿ ಸದ್ಯ ದರ್ಶನ್ ಹಾಗೂ ವಿಜಯಲಕ್ಷ್ಮೀ ಲವ್ ಸ್ಟೋರಿ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಹುಡುಕಾಟಗಳು ನಡೆದಿವೆ.. ಹಾಗಾದ್ರೆ ಇಂಜಿನಿಯರಿಂಗ್ ಓದಿರುವ ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀಗೆ ನಟ ದರ್ಶನ್‌ಗೆ ಸಿಕ್ಕಿದ್ದು ಎಲ್ಲಿ? ಇವರ ಪ್ರೀತಿ ಶುರುವಾಗಿದ್ದು ಹೇಗೆ? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
ವರದಿಯ ಪ್ರಕಾರ ನಟ ದರ್ಶನ್ ತಮ್ಮ ಸ್ನೇಹಿತೆ ರೀನಾ ಎಂಬುವವರ ಬರ್ತಡೇ ಪಾರ್ಟಿಗೆ ಹೋಗಿದ್ದಾಗ ಚಾಚೆಂಜಿಂಗ್ ಸ್ಟಾರ್ ವಿಜಯಲಕ್ಷ್ಮೀ ಅವರನ್ನು ಮೊದಲ ಬಾರಿಗೆ ಭೇಟಿಯಾಗುತ್ತಾರೆ.. ಅಲ್ಲಿ ರೀನಾ ಇಬ್ಬರಿಗೂ ಪರಿಚಯ ಮಾಡಿ ಕೊಡುತ್ತಾರೆ.. ಅಲ್ಲಿಂದ ಇವರಿಬ್ಬರ ನಡುವೆ ಸ್ನೇಹ ಬೆಳೆದು ದಿನದಿಂದ ದಿನಕ್ಕೆ ಹತ್ತಿರವಾಗುತ್ತಾ ಹೋಗುತ್ತಾರೆ..
ನಂತರ ಲವ್ ಮ್ಯಾರೇಜ್‌ಗೆ ತಾಯಿಯ ಒಪ್ಪಿಗೆ ಪಡೆದಿದ್ದ ದರ್ಶನ್ ಒಂದು ದಿನ ವಿಜಯಲಕ್ಷ್ಮೀ ಅವರಿಗೆ ಲವ್ ಪ್ರಪೋಸ್ ಮಾಡುತ್ತಾರೆ.. ಕೂಡಲೇ ವಿಜಯಲಕ್ಷ್ಮೀ ಒಪ್ಪಿಕೊಳ್ಳುತ್ತಾರೆ.. ನಂತರ ಹೆಚ್ಚು ಸಮಯ ತೆಗೆದುಕೊಳ್ಳದೇ ದರ್ಶನ್ ತಮ್ಮ ತಾಯಿಗೆ ಅವರನ್ನು ಪರಿಚಯಿಸಿ ಕೆಲವು ದಿನಗಳ ಬಳಿಕ ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ..
ನಟ ವಿಜಯ್‌ಲಕ್ಷ್ಮೀ ಅವರನ್ನು ಮದುವೆಯಾದ ಬಳಿಕವೇ ಮೆಜೆಸ್ಟಿಕ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ.. ಅಲ್ಲಿಂದ ಹಿಂದಿರುಗಿ ನೋಡೆ ಇಲ್ಲ.. ಸದ್ಯ ದಂಪತಿಗೆ ಒಬ್ಬ ಮಗನಿದ್ದಾನೆ..
ಇನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಆಗ್ಗಾಗೆ ದರ್ಶನ್ ಅವರನ್ನು ನೋಡಲು ಜೈಲಿಗೆ ಹೋಗುತ್ತಿರುತ್ತಾರೆ.. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಅವರ ಈ ವಿಡಿಯೋಗಳೇ ಸಖತ್ ಸದ್ದು ಮಾಡುತ್ತಿವೆ..
ಸದ್ಯ ನಟ ದರ್ಶನ್ ವಿಚಾರವಾಗಿ ವಿಜಯಲಕ್ಷ್ಮೀ ಹೋರಾಡುತ್ತಿದ್ದಾರೆ. ಅಲ್ಲದೇ ಅವರ ಅಭಿಮಾನಿಗಳು ಕೂಡ ಬಾಸ್ ಬೇಗ ಹೊರಬರಲಿ ಎನ್ನುವ ಆಶಯದಲ್ಲಿದ್ದಾರೆ.. ಆದ್ರೆ ರೇಣುಕಾಸ್ವಾಮಿ ಕೇಸ್ ದಿನದಿಂದ ದಿನಕ್ಕೆ ಒಂದೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಯಾವಾಗ ದರ್ಶನ್ ಹೊರಬರುತ್ತಾರೋ ಕಾದುನೋಡಬೇಕಿದೆ..