ಕರುನಾಡ ಮನೆಮಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಿರಿ ಮಗಳು ಧೃತಿ ವಿದೇಶದಲ್ಲಿ ಓದುತ್ತಿರುವ ಕಾಲೇಜು ಯಾವುದು? ಅಲ್ಲಿನ ಫೀಸ್ ಎಷ್ಟು ಗೊತ್ತೇ?
)
ಪ್ರಸ್ತುತ ಭಾರತದಲ್ಲಿ ಎಷ್ಟೇ ಉತ್ತಮ ಶಿಕ್ಷಣ ಲಭ್ಯವಿದ್ದರೂ ಸಹ ಅನೇಕರು ವಿದೇಶಕ್ಕೆ ಶಿಕ್ಷಣ ಪಡೆಯಲು ತೆರಳುತ್ತಾರೆ. ಮುಖ್ಯವಾಗಿ ಸೆಲೆಬ್ರಿಟಿಗಳ ಮಕ್ಕಳು ವಿದೇಶದಲ್ಲಿ ಶಿಕ್ಷಣ ಪಡೆಯುತ್ತಾರೆ. ಅಧ್ಯಯನವೊಂದರ ಪ್ರಕಾರ, 2023ರಲ್ಲಿ ಸುಮಾರು 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲೆಂದು ವಿದೇಶಕ್ಕೆ ತೆರಳಿದ್ದಾರೆ. ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ಹೀಗೆ ಅನೇಕ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
)
ಇನ್ನು ಕನ್ನಡದ ಮನೆಮಗ, ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಹಿರಿಯ ಮಗಳು ಧೃತಿ ಕೂಡ ವಿದೇಶದಲ್ಲೇ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇತ್ತೀಚಿಗೆ ಮೈನಸ್ 8 ಡಿಗ್ರಿ ಚಳಿಯಲ್ಲಿ ಫೋಟೋ ಕ್ಲಿಕ್ಕಿಸಿ ಫೋಟೋ ಶೇರ್ ಮಾಡಿದ್ದರು ಧೃತಿ.
)
ವಿದೇಶದಲ್ಲಿ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಅವುಗಳಲ್ಲಿ ಹೆಚ್ಚಾಗಿ ಕೇಳಿಬರುವುದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಮ್ಯಾಸಚೂಸೆಟ್ಸ್ ಸಂಸ್ಥೆ, ಹೀಗೆ ಹಲವಾರು. ಅಂತಹದರಲ್ಲಿ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಕೂಡ ಒಂದು. ಇದನ್ನು ಪಾರ್ಸನ್ಸ್ ಎಂದೂ ಸಹ ಕರೆಯಲಾಗುತ್ತದೆ. ಇದೇ ಶಿಕ್ಷಣ ಸಂಸ್ಥೆಯಲ್ಲಿ ಧೃತಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
ನ್ಯೂಯಾರ್ಕ್ ನಗರದ ಗ್ರೀನ್‌ವಿಚ್ ವಿಲೇಜ್ ಬಳಿಯಿರುವ ಪಾರ್ಸನ್ಸ್ ಸ್ಕೂಲ್ ಕಲೆ ಮತ್ತು ವಿನ್ಯಾಸ ಕಲಿಸಿಕೊಡು ಕಾಲೇಜಾಗಿದೆ. 1896ರಲ್ಲಿ ಸ್ಥಾಪಿಸಲಾದ ಪಾರ್ಸನ್ಸ್, ನ್ಯೂಯಾರ್ಕ್‌ನ ಅತ್ಯಂತ ಹಳೆಯ ಕಲೆ ಮತ್ತು ವಿನ್ಯಾಸ ಶಾಲೆಗಳಲ್ಲಿ ಒಂದಾಗಿದೆ. ಇಲ್ಲಿ ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್, ಜಾಹೀರಾತು, ಗ್ರಾಫಿಕ್ ಡಿಸೈನ್, ಟ್ರಾನ್ಸ್‌ಡಿಸಿಪ್ಲಿನರಿ ಡಿಸೈನ್ ಮತ್ತು ಲೈಟಿಂಗ್ ಡಿಸೈನ್ ಕಲಿಸಿಕೊಡಲಾಗುತ್ತದೆ.
2022 ರಲ್ಲಿ, ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ಯುನೈಟೆಡ್ ಸ್ಟೇಟ್ಸ್‌ನ ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕದಲ್ಲಿ ಉನ್ನತ ಕಲೆ ಮತ್ತು ವಿನ್ಯಾಸ ಶಾಲೆಯಾಗಿ ಶ್ರೇಯಾಂಕವನ್ನು ಪಡೆದಿದೆ. ಈ ವರದಿಯ ಪ್ರಕಾರ, ಪಾರ್ಸನ್ಸ್ ಸ್ಕೂಲ್ ಕಲೆ ಮತ್ತು ವಿನ್ಯಾಸ ವಿಭಾಗದಲ್ಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೆ 2021 ರಲ್ಲಿ ಫೋರ್ಬ್ಸ್, ಪಾರ್ಸನ್ಸ್ ಅನ್ನು ಅಮೆರಿಕಾದ ಉನ್ನತ ವಿನ್ಯಾಸ ಶಾಲೆಗಳಲ್ಲಿ ಒಂದೆಂದು ಹೆಸರಿದೆ.
ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನ ಶುಲ್ಕದ ಬಗ್ಗೆ ಹೇಳುವುದಾದರೆ ಒಂದೊಂದು ರೀತಿಯಲ್ಲಿದೆ. ಟ್ಯೂಷನ್, ಬುಕ್ಸ್ ಆಂಡ್ ಸಪ್ಲೈ ಮತ್ತು ಊಟದ ಯೋಜನೆಗಳನ್ನು ಒಳಗೊಂಡಂತೆ ವಿವಿಧ ರೀತಿಯಲ್ಲಿ ಫೀಸ್‌ಗಳನ್ನು ಹೊಂದಿದೆ.
ಪೂರ್ಣ ಸಮಯದ ವಿವಿಧ ವಿಭಾಗಗಳ ಟ್ಯೂಷನ್ ಫೀಸ್ ಪ್ರತಿ ಸೆಮಿಸ್ಟರ್ ಬದಲಾಗುತ್ತದೆ. ಅಂದರೆ ಒಂದು ಸೆಮಿಸ್ಟರ್‌ಗೆ $28,013–$28,989 ವರೆಗೆ ಇದ್ದೇ ಇರುತ್ತದೆ. ಇನ್ನು ಪುಸ್ತಕಗಳು ಮತ್ತು ಸರಬರಾಜುಗಳ ಫೀಸ್ ವರ್ಷಕ್ಕೆ ಸರಾಸರಿ $2,050 ವೆಚ್ಚವಾಗುತ್ತದೆ. ಇನ್ನು ಊಟದ ವಿಚಾರದಲ್ಲಿ ಪ್ಲಾನ್‌ಗಳಿದ್ದು, ವನ್ ಮೀಲ್, ಟು ಮೀಲ್, ತ್ರಿ ಮೀಲ್ ಅಥವಾ ಎಕ್ಸ್‌ಪ್ರೆಸ್ ಪ್ಲಾನ್ ಎಂಬಂತೆ ವಿವಿಧ ರೀತಿಯ ಊಟದ ಯೋಜನೆಗಳಿವೆ. ಅವುಗಳಲ್ಲಿ ಒಂದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಬಹುದು. ವನ್ ಮೀಲ್ ಪ್ಲಾನ್‌ಗೆ $1,700, ಟು ಮೀಲ್ ಪ್ಲಾನ್‌ಗೆ $2,940, ತ್ರಿ ಮೀಲ್ ಪ್ಲಾನ್‌ಗೆ $3,425 ಮತ್ತು ಎಕ್ಸ್‌ಪ್ರೆಸ್ ಪ್ಲಾನ್‌ಗೆ $850 ವೆಚ್ಚವಾಗುತ್ತದೆ.
ಇಲ್ಲಿನ ವಸತಿ ವೆಚ್ಚವು ಹಾಲ್, ಕೋಣೆಯ ಪ್ರಕಾರ ನಿಗದಿಯಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಯು ಹೊಸಬರಗಾಗಿದ್ದರೆ ಒಂದು ರೀತಿಯ ಫೀಸ್, ಮುಂದುವರಿಯುವ ವಿದ್ಯಾರ್ಥಿಯಾಗಿದ್ದರೆ ಮತ್ತೊಂದು ವಿಧಾನದ ಫೀಸ್ ಇರುತ್ತದೆ. ಜೊತೆಗೆ ಈ ಶಿಕ್ಷಣ ಸಂಸ್ಥೆಯಲ್ಲಿ ಹಣಕಾಸಿನ ನೆರವು ಪ್ಯಾಕೇಜ್‌ಗಳು ಕೂಡ ಲಭ್ಯವಿದೆ. ಅಂದರೆ ಅನುದಾನಗಳು, ಸಾಲಗಳು, ವಿದ್ಯಾರ್ಥಿವೇತನಗಳು ಮತ್ತು ಕೆಲಸದ ಜೊತೆಗೆ ಅಧ್ಯಯನ ಉದ್ಯೋಗಗಳನ್ನು ಸಹ ಒಳಗೊಂಡಿದೆ.