ಹೃದಯದ ಆರೋಗ್ಯಕ್ಕಾಗಿ ಈ 5 ಡೈರಿ ಉತ್ಪನ್ನಗಳಿಗೆ `NO` ಹೇಳಿ..!
ಹಾಲು ದೇಹಕ್ಕೆ ಒಳ್ಳೆಯದಾದರೂ ಹಾಲಿನಿಂದ ತಯಾರಿಸಿದ ಕೆಲವು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕರ. ಆದ್ದರಿಂದ ಈ ಕೆಳಗೆ ನೀಡಿರುವ ಡೈರಿ ಆಹಾರ ಪದಾರ್ಥಗಳಿಂದ ದೂರು ಇರುವುದು ಬಹಳ ಉತ್ತಮ.
ಎಲ್ಲಾ ಡೈರಿ ಉತ್ಪನ್ನಗಳು ಒಳ್ಳೆಯದು ಎಂದು ನಂಬಬಾರದು. ಕೆಲವು ಡೈರಿ ಉತ್ಪನ್ನಗಳು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಅಲ್ಲದೆ, ಹೃದ್ರೋಗದ ಅಪಾಯವನ್ನು ಉಂಟು ಮಾಡುತ್ತದೆ. ಆದ್ದರಿಂದ, ಈ 5 ವಸ್ತುಗಳಿಂದ ದೂರವಿರಿ.
ಸಿಹಿ ಮಂದಗೊಳಿಸಿದ ಹಾಲು: ಈ ರೀತಿಯ ಹಾಲಿನಲ್ಲಿ ಸಕ್ಕರೆ ಮತ್ತು ಕ್ಯಾಲೋರಿಗಳಲ್ಲಿ ಹೆಚ್ಚಾಗಿರುತ್ತದೆ. ಇದು ತೂಕವನ್ನು ಹೆಚ್ಚಿಸಬಹುದು ಹಾಗೂ ಹೃದ್ರೋಗದ ಅಪಾಯವನ್ನು ಅಧಿಕಗೊಳಿಸುತ್ತದೆ.
ಸಂಸ್ಕರಿಸಿದ ಚೀಸ್: ಈ ರೀತಿಯ ಚೀಸ್‌ನಲ್ಲಿ ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಕೆಟ್ಟದು.
ಸಕ್ಕರೆಯುಕ್ತ ಮೊಸರು: ಈ ರೀತಿಯ ತುಂಬಾ ಟೇಸ್ಟಿ ಆದರೆ ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗಲು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
ಐಸ್ ಕ್ರೀಂ: ಐಸ್ ಕ್ರೀಂನಲ್ಲಿ ಹೆಚ್ಚಿನ ಕ್ಯಾಲೋರಿಗಳು, ಅಧಿಕ ಸಕ್ಕರೆ ಅಂಶ ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುವುದರಿಂದ ಇದು ಹೃದಯಕ್ಕೆ ಹಾನಿಕಾರಕವಾಗಿದೆ.
ಹಕ್ಕು ನಿರಾಕರಣೆ: ಈ ಪೋಸ್ಟ್ ಅನ್ನು ಸಾಮಾನ್ಯ ಮಾಹಿತಿಯ ಆಧಾರದ ಮೇಲೆ ಬರೆಯಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸಿಲ್ಲ.