ನಮ್ಮ ಸಂತೋಷವನ್ನು ಹೆಚ್ಚಿಸುವ ಹಾರ್ಮೋನ್‌ಗಳು ಯಾವುವು? ಈ ಹ್ಯಾಪಿ ಹಾರ್ಮೋನ್‌ಗಳನ್ನು ಹೆಚ್ಚಿಸಲು ಏನು ಮಾಡಬೇಕು?
ಪ್ರತಿಯೊಬ್ಬರೂ ನಾವು ಇರುವಷ್ಟು ದಿನ ಸಂತೋಷದಿಂದ ಇರಬೇಕು ಎಂದು ಇಚ್ಚಿಸುತ್ತಾರೆ. ಸಂತೋಷ ಎಂಬುದು ಉತ್ತಮ ಮನಸ್ಥಿತಿ, ಒಳ್ಳೆಯ ಭಾವನೆ. ಸಾಮಾನ್ಯವಾಗಿ ನಾವು ಸಂತೋಷವಾಗಿರಲು ಹೊರಗಿನ ವಿಷಯಗಳನ್ನು ಅವಲಂಬಿಸಿರುತ್ತೇವೆ. ಆದರೆ, ವಾಸ್ತವದಲ್ಲಿ ಸಂತೋಷ ಎಂಬುದು ನಮ್ಮೊಳಗೆ ಇರುತ್ತದೆ. ನಮ್ಮ ದೇಹದಲ್ಲಿರುವ ಡೋಪಮೈನ್, ಆಕ್ಸಿಟೋಸಿನ್, ಸಿರೊಟೋನಿನ್ ಮತ್ತು ಎಂಡಾರ್ಫಿನ್ ಎಂಬ ನಾಲ್ಕು ಹಾರ್ಮೋನ್‌ಗಳು ನಮ್ಮ ಮನಸ್ಥಿತಿ ಮತ್ತು ಸಂತೋಷವನ್ನು ಸಮತೋಲನಗೊಳಿಸುತ್ತದೆ. ಹಾಗಾಗಿಯೇ ಇವುಗಳನ್ನು ಹ್ಯಾಪಿ ಹಾರ್ಮೋನ್‌ಗಳು ಎಂದು ಕರೆಯಲಾಗುತ್ತದೆ. ಈ ಹಾರ್ಮೋನುಗಳನ್ನು ಹೆಚ್ಚಿಸಲು ಏನು ಮಾಡಬೇಕು ಗೊತ್ತಾ?
ಸಿರೊಟೋನಿನ್: ಸಿರೊಟೋನಿನ್ ಎಂಬ ಹಾರ್ಮೋನ್ ನಮ್ಮ ಮನಸ್ಥಿತಿಯನ್ನು ಸ್ಥಿರಗೊಳಿಸುತ್ತದೆ. ಈ ಹಾರ್ಮೋನ್ ನಿದ್ರೆ ಮತ್ತು ಜೀರ್ಣಕ್ರಿಯೆಯನ್ನು ಸಮತೋಲನಗೊಳಿಸುತ್ತದೆ.
ಸಿರೊಟೋನಿನ್ ಹಾರ್ಮೋನ್ ಹೆಚ್ಚಿಸಲು ನಿತ್ಯ ಬಿಸಿಲಿನಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳಿ. ನಿಯಮಿತವಾಗಿ ಏರೋಬಿಕ್ ವ್ಯಾಯಾಮವನ್ನು ರೂಢಿಸಿಕೊಳ್ಳಿ.
ಡೋಪಮೈನ್: ಡೋಪಮೈನ್ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಸಂತೋಷ ಮತ್ತು ತೃಪ್ತಿಯ ಭಾವನೆಯನ್ನು ಉಂಟು ಮಾಡುವ ಮೆದುಳಿನ ಪ್ರದೇಶವನ್ನು ಸಕ್ರಿಯಗೊಳಿಸುತ್ತದೆ.
ಡೋಪಮೈನ್ ಹಾರ್ಮೋನ್ ಅನ್ನು ಹೆಚ್ಚಿಸಲು ಸಣ್ಣ-ಪುಟ್ಟ ಕೆಲಸಗಳನ್ನು ಸಹ ನಿರ್ಲಕ್ಷಿಸದೆ ನೀವು ನಿಗದಿಪಡಿಸಿದ ಸಮಯಾದೊಳಗೆ ಕೆಲಸಗಳನ್ನು ಪೂರ್ಣಗೊಳಿಸಿ. ನಿತ್ಯ ವ್ಯಾಯಾಮ ಮಾಡಿ. ಒಳ್ಳೆಯ ಆಹಾರದ ಜೊತೆಗೆ ಸಾಕಷ್ಟು ನಿದ್ರೆ ಪಡೆಯಿರಿ.
ಎಂಡಾರ್ಫಿನ್‌ಗಳು: ಎಂಡಾರ್ಫಿನ್‌ಗಳು ಒತ್ತಡವನ್ನು ನಿವಾರಿಸುವ, ಸಂತೋಷದ ಭಾವನೆಗಳನ್ನೂ ಹೆಚ್ಚಿಸಬಲ್ಲ, ನೋವನು ಕಡಿಮೆ ಮಾಡಬಲ್ಲ ಹಾರ್ಮೋನ್‌ಗಳಾಗಿವೆ.
ಎಂಡಾರ್ಫಿನ್ ಹಾರ್ಮೋನ್‌ಗಳನ್ನು ಹೆಚ್ಚಿಸಲು ತ್ರಾಣವನ್ನು ಹೆಚ್ಚಿಸುವ ಕ್ರೀಡೆಗಳನ್ನು ಆಡಿ. ನಿಮಗೆ ಸಂತೋಷವನ್ನು ನೀಡುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
ಆಕ್ಸಿಟೋಸಿನ್: ಆಕ್ಸಿಟೋಸಿನ್ ಹಾರ್ಮೋನ್ ಉತ್ತಮ ಸಾಮಾಜಿಕ ನಾದವಳಿಕೆಯನ್ನು ಹೆಚ್ಚಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಪ್ರಯೋಜನಕಾರಿ ಆಗಿದೆ.
ಆಕ್ಸಿಟೋಸಿನ್ ಹಾರ್ಮೋನ್ ಅನ್ನು ಹೆಚ್ಚಿಸಲು ನಿಮ್ಮ ಪ್ರೀತಿಪಾತ್ರರೊಂದಿಗೆ ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ಕಳೆಯಿರಿ.